ಮಕ್ಕಳ ರಕ್ಷಣೆ, ಮೂಲಭೂತ ಸೌಲಭ್ಯಗಳ ಕಾನೂನು ಕಡ್ಡಾಯ ಜಾರಿಯಾಗಬೇಕುು: ಡಾ. ತಿಪ್ಪೇಸ್ವಾಮಿ

KannadaprabhaNewsNetwork |  
Published : Sep 20, 2024, 01:34 AM IST
11 | Kannada Prabha

ಸಾರಾಂಶ

ಇಂದು ವಿದ್ಯಾರ್ಥಿ ನಿಲಯಗಳಲ್ಲಿ ಅಂಕದ ನೆಪದಲ್ಲಿ ಭಾನುವಾರವೂ ತರಗತಿ ನಡೆಸುತ್ತಿರುವ ಸ್ವತಃ ಮಕ್ಕಳೇ ಆಯೋಗದ ಮುಂದೆ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಮತ್ತು ಮಾನಸಿಕ ಶಕ್ತಿಗೆ ಶಿಕ್ಷಣದಷ್ಟೇ ಆಟವೂ ಅಗತ್ಯ. ಈ ಬಗ್ಗೆ ವಸತಿ ನಿಲಯಗಳ ಅಧಿಕಾರಿಗಳು ಗಮನಹರಿಸಬೇಕು ಎಂದ ಅವರು, ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದರು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದೇಶದಲ್ಲಿ ಮಕ್ಕಳ ರಕ್ಷಣೆ ಮತ್ತು ಅವರ ಮೂಲಭೂತ ಸೌಲಭ್ಯಗಳ ಒದಗುವಿಕೆಗೆ ಮತ್ತು ಅವರ ಮುಕ್ತ ಸ್ವಾತಂತ್ರ್ಯದ ಬಗ್ಗೆ ಇರುವ ಕಠಿಣ ಕಾನೂನು 2016ರಲ್ಲಿ ಜಾರಿಯಾಗಿದ್ದು ಇದು ಇನ್ನೂ ಅನುಷ್ಠಾನವಾಗಿಲ್ಲ. ಇದನ್ನು ಮುಂದಿನ 6 ತಿಂಗಳಲ್ಲಿ ಕಡ್ಡಾಯ ಜಾರಿಯಾಗಲು ಉಚ್ಚನ್ಯಾಯಾಲಯ ಆದೇಶ ಮಾಡಿದೆ ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ಡಾ. ತಿಪ್ಪೆಸ್ವಾಮಿ ಹೇಳಿದರು.

ಅವರು ಗುರುವಾರ ತಾಲೂಕು ಕಚೇರಿಯಲ್ಲಿ ಮಕ್ಕಳಿಗೆ ಆಗುವ ಸಮಸ್ಯೆ ಮತ್ತು ಅವರ ರಕ್ಷಣೆಗೆ ವಿವಿಧ ಇಲಾಖೆಗಳು ಅಧಿಕಾರಿಗಳ ಸಭೆ ನಡೆಸಿದರು.

ಇಂದು ವಿದ್ಯಾರ್ಥಿ ನಿಲಯಗಳಲ್ಲಿ ಅಂಕದ ನೆಪದಲ್ಲಿ ಭಾನುವಾರವೂ ತರಗತಿ ನಡೆಸುತ್ತಿರುವ ಸ್ವತಃ ಮಕ್ಕಳೇ ಆಯೋಗದ ಮುಂದೆ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯಕ್ಕೆ ಮತ್ತು ಮಾನಸಿಕ ಶಕ್ತಿಗೆ ಶಿಕ್ಷಣದಷ್ಟೇ ಆಟವೂ ಅಗತ್ಯ. ಈ ಬಗ್ಗೆ ವಸತಿ ನಿಲಯಗಳ ಅಧಿಕಾರಿಗಳು ಗಮನಹರಿಸಬೇಕು ಎಂದ ಅವರು, ತಾಲೂಕಿನಲ್ಲಿರುವ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಕೇಳಿದರು.

ಹಿಂದುಳಿದ ವಸತಿ ನಿಲಯದ ಅಧಿಕಾರಿ ಜೋಸೆಫ್‌ ಮಾಹಿತಿ ನೀಡಿ 14 ವಸತಿ ನಿಲಯದಲ್ಲಿ ಗೇರುಕಟ್ಟೆ ಮತ್ತು ಕಣಿಯೂರು ಮುಚ್ಚಲ್ಪಟ್ಟಿದೆ. ಉಳಿವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದರು. ಈ ಬಗ್ಗೆ ಮತ್ತೆ ಮಾಹಿತಿ ಪಡೆದು ಬಂದ್ ಯಾಕೆ ಅಯಿತು ಇದರ ಕಟ್ಟಡದ ಸ್ಥಿತಿ ಗತಿ ಹೇಗಿದೆ ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.

ಅಧಿಕಾರಿ ಉತ್ತರಿಸಿ, ಮಕ್ಕಳ ಹಾಜರಾತಿಯಿಂದ ಬಂದ್ ಆಗಿದ್ದು ದ.ಕ. ಜಿಲ್ಲೆಗೆ ಹೊರಗಿನ ಮಕ್ಕಳು ಹೆಚ್ಚಾಗಿ ಬರ್ತಾರೆ ಜಿಲ್ಲೆಯ ಮಕ್ಕಳು ವಸತಿ ನಿಲಯದಲ್ಲಿ ಉಳಿಯೋದು ಕಡಿಮೆ ಎಂದರು. ಒಂದು ಖಾಸಗಿ ಕಟ್ಟಡದಲ್ಲಿತ್ತು ಅದನ್ನು ಬಿಟ್ಟುಕೊಡಲಾಗಿದೆ ಇನ್ನೊಂದು ಸ್ವಂತ ಕಟ್ಟಡದಲ್ಲಿದೆ ಅದನ್ನು ಸ್ಥಳೀಯ ಪಂಚಾಯತ್ ಸುಪರ್ದಿಗೆ ನೀಡಿದ್ದು ಅದರ ಬಳಕೆಗೆ ಸರ್ಕಾರದ ಅನುಮತಿಗಾಗಿ ಪತ್ರ ಬರೆಯಲಾಗಿದೆ ಎಂದರು. ‌

ಸಭೆಯಲ್ಲಿ ತಹಸೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಆಯೋಗದ ಜಿಲ್ಲಾ ಅಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಪ್ರಿಯಾ ಆಗ್ನೆಸ್‌ ಉಪಸ್ಥಿತರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್