ಮಕ್ಕಳ ಸುರಕ್ಷತೆ ಶಿಕ್ಷಕರ ಬಹುಮುಖ್ಯ ಜವಾಬ್ದಾರಿ: ಬಿಇಒ ಉಮಾ

KannadaprabhaNewsNetwork |  
Published : Feb 04, 2025, 12:32 AM IST
3ಕೆಎಂಎನ್ ಡಿ15 | Kannada Prabha

ಸಾರಾಂಶ

ಶಾಲೆ ಸುತ್ತಮುತ್ತಲಿನ ಪರಿಸರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳು ಮರ ಹತ್ತದಂತೆ, ಬೇಲಿಪಕ್ಕ, ನೀರಿರುವ ಸ್ಥಳಗಳ ಪಕ್ಕ ಓಡಾದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಒಂದು ವೇಳೆ ಯಾವುದೇ ಅವಘಡ ಸಂಭವಿಸಿದರೆ ಮಕ್ಕಳ ಭವಿಷ್ಯ ಹಾಳಾಗುವುದರ ಜೊತೆಗೆ ಶಿಕ್ಷಕರಿಗೂ ಶಾಲೆಗೂ ತೊಂದರೆಯಾಗುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸುರಕ್ಷಿತೆ ಬಗ್ಗೆ ಶಿಕ್ಷಕರು ಹೆಚ್ಚು ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ ತಿಳಿಸಿದರು.

ವಳಗೆರೆದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಕರು ಹೇಳಿದಂತೆ ಮಕ್ಕಳು ಕೇಳಬೇಕು. ಮಕ್ಕಳು ಯಾವುದೇ ತುಂಟಾಟ, ಚೇಷ್ಟೆ ಮಾಡದಂತೆ ಗಮನ ಹರಿಸಬೇಕು ಎಂದರು.

ಶಾಲೆ ಸುತ್ತಮುತ್ತಲಿನ ಪರಿಸರ ಸುರಕ್ಷಿತವಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳು ಮರ ಹತ್ತದಂತೆ, ಬೇಲಿಪಕ್ಕ, ನೀರಿರುವ ಸ್ಥಳಗಳ ಪಕ್ಕ ಓಡಾದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಒಂದು ವೇಳೆ ಯಾವುದೇ ಅವಘಡ ಸಂಭವಿಸಿದರೆ ಮಕ್ಕಳ ಭವಿಷ್ಯ ಹಾಳಾಗುವುದರ ಜೊತೆಗೆ ಶಿಕ್ಷಕರಿಗೂ ಶಾಲೆಗೂ ತೊಂದರೆಯಾಗುತ್ತದೆ ಎಂದರು.

ಈ ಶಾಲೆ ಮಕ್ಕಳು ಕಲಿಕೆಯಲ್ಲಿ ಮುಂದಿರುವುದು ತುಂಬಾ ಸಂತೋಷ. ಸ್ಥಳೀಯರು, ಎಸ್ಡಿಎಂಸಿಯವರು ಸೇರಿ ಶಾಲೆಗೆ ಕೊಠಡಿಗಳನ್ನು ಮತ್ತು ಬೇಕಾದ ಅನುಕೂಲ ಮಾಡುತ್ತಿದ್ದೀರಿ. ಇದು ಉತ್ತಮ ಕೆಲಸ ಎಂದರು.

ಈಗಾಗಲೇ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಮುಂದಿನ ವರ್ಷದೊಳಗೆ ಅವುಗಳನ್ನು ತೆರೆಯುವ ಪ್ರಯತ್ನ ಮಾಡುತ್ತೇವೆ. ಪೋಷಕರು ಈಗ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಇದು ಹೆಮ್ಮೆಯ ವಿಷಯ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಶಿಕ್ಷಕರು ಹಾಗೂ ಪೋಷಕರು ಮಕ್ಕಳ ಉತ್ಸಾಹಕ್ಕೆ ಪ್ರೋತ್ಸಾಹ ನೀಡಬೇಕು. ಮೂಢನಂಬಿಕೆ, ಕಂದಾಚಾರ ನಂಬಿರುವ ದೇಶದಲ್ಲಿ ಅದನ್ನು ಹೋಗಲಾಡಿಸಲು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕರಾದ ರವಿಕುಮಾರ್, ಸಿಆರ್‌ಪಿ ಜಿ.ಎಸ್.ಕೃಷ್ಣ, ಪುಟ್ಟರಾಜು, ತಿಮ್ಮಯ್ಯ, ಚೆಲುವರಾಜು, ಶಿಕ್ಷಕರಾದ ವಿಷಕಂಠೇಗೌಡ, ಸಿದ್ದಯ್ಯ, ಲಿಂಗಪಟ್ಟಣ ಸುಂದರಪ್ಪ, ಹೇಮಂತ್ ಕುಮಾರ್, ಬೋರೇಗೌಡ, ಶಂಕರೇಗೌಡ, ಶಾಲೆ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಸುಮಿತ್ರ, ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ