ಮಕ್ಕಳೇ ದೇಶದ ಬೆನ್ನೆಲುಬು: ಎಚ್.ಸಿ.ಗೋಪಾಲಕೃಷ್ಣ

KannadaprabhaNewsNetwork |  
Published : Nov 23, 2026, 01:15 AM IST
ವಿದ್ಯಾರ್ಥಿಗಳಿಗಾಗಿ ವಿಶೇಷ ಎ.ಐ.ತರಬೇತಿ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಮಕ್ಕಳೇ ನೀವು ಐಟಿಐ ಕಲಿಯುತ್ತಿದ್ದೀರಿ, ಅಂದರೆ ನೀವೇ ಈ ದೇಶದ ಬೆನ್ನಲುಬು, ನಿಮ್ಮ ಕೈಯಲ್ಲಿ ಒಂದು ಕಲೆ ಇದೆ, ಆ ಕಲೆಗೆ ಇಂದು ಎಐ ಎಂಬ ಶಕ್ತಿ ಸೇರಿದರೆ ನಿಮ್ಮನ್ನು ತಡೆಯುವವರು ಯಾರು ಇಲ್ಲ ಎಂದು ಲಯನ್ಸ್ ಕ್ಲಬ್ ಅಮರಾವತಿ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ ಹೇಳಿದ್ದಾರೆ.

ವಿದ್ಯಾರ್ಥಿಗಳಿಗಾಗಿ ವಿಶೇಷ ಎ.ಐ.ತರಬೇತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಮಕ್ಕಳೇ ನೀವು ಐಟಿಐ ಕಲಿಯುತ್ತಿದ್ದೀರಿ, ಅಂದರೆ ನೀವೇ ಈ ದೇಶದ ಬೆನ್ನಲುಬು, ನಿಮ್ಮ ಕೈಯಲ್ಲಿ ಒಂದು ಕಲೆ ಇದೆ, ಆ ಕಲೆಗೆ ಇಂದು ಎಐ ಎಂಬ ಶಕ್ತಿ ಸೇರಿದರೆ ನಿಮ್ಮನ್ನು ತಡೆಯುವವರು ಯಾರು ಇಲ್ಲ ಎಂದು ಲಯನ್ಸ್ ಕ್ಲಬ್ ಅಮರಾವತಿ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ ಹೇಳಿದ್ದಾರೆ.

ಪಟ್ಟಣದ ಸರ್ಕಾರಿ ಕೈಗಾರಿಕಾ ಸಂಸ್ಥೆ, ಲಯನ್ಸ್ ಕ್ಲಬ್ ತರೀಕೆರೆ ಅಮರಾವತಿಯಿಂದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಏರ್ಪಾಡಾಗಿದ್ದ ಎ.ಐ.ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಈಗಿನ ಯುಗ ಎ.ಐ. ಯುಗ, ಮೊದಲು ಓದಲು ಪುಸ್ತಕ ಬೇಕಿತ್ತು, ಇಂದು ಕಲಿಯಲು ಎ.ಐ.ಇದೆ, ಇಂದು ಎ.ಐ.ಮೂಲಕ ಜಗತ್ತಿನ ಜ್ಞಾನ ನಿಮ್ಮ ಕೈಯಲ್ಲೇ ಇದೆ, ಎ.ಐ.ನ್ನು ಭವಿಷ್ಯ ಕಟ್ಟಲು ಬಳಸಿ, ಎ.ಐ.ನಿಂದ ಪ್ರಶ್ನೆ ಕೇಳಲು ಕಲಿಯಿರಿ, ಉತ್ತರ ಹುಡುಕಲು ಕಲಿಯಿರಿ, ಹೊಸದನ್ನು ಸೃಷ್ಠಿಸಲು ಕಲಿಯಿರಿ, ನೀವು ಎ.ಐ.ನ್ನು ಬಳಸಿದರೆ, ಎ.ಐ.ನಿಮ್ಮನ್ನು ಮುಂದಕ್ಕೆ ಕೊಂಡೊಯುತ್ತದೆ ಎಂದು ಹೇಳಿದರು.

ಉಪನ್ಯಾಸಕರಾದ ಪ್ರಿಯದರ್ಶಿನಿ ಮಾತನಾಡಿ ಎ.ಐ.ಎಂದರೇನು ಅದನ್ನು ಏಕೆ ಬಳಸಬೇಕು. ಅದನ್ನು ಹೇಗೆ ಬಳಸಬೇಕು. ಏನು ಕೇಳಿದರೆ ಎನನ್ನು ಕೊಡುತ್ತದೆ ಎಂದು ಉದಾಹರಣೆಗಳ ಮೂಲಕ ತಿಳಿಸಿದರು.

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ರವಿದಳವಾಯಿ ಮಾತನಾಡಿ ನಮ್ಮ ಮಕ್ಕಳು ಕೇವಲ ಪರೀಕ್ಷೆ ಯಲ್ಲಿ ಪಾಸಾಗಬಾರದು, ಜೀವನದಲ್ಲಿ ಪಾಸಾಗಬೇಕು, ಇಂತಹ ಎ.ಐ.ತರಬೇತಿಗಳು ಅವರಿಗೆ ತುಂಬಾ ಅವಶ್ಯಕ ಎಂದು ಹೇಳಿದರು.

ಲಯನ್ಸ್ ಕ್ಲಬ್ ತರೀಕೆರೆ ಅಮರಾವತಿ ಕಾರ್ಯದರ್ಶಿ ಮುರುಳಿ, ಶಶಿಧರ್, ಭೈರಪ್ಪ, ಮಂಜು ಅಚಾರ್, ಮಹಾಬಲ ಹಾಗೂ ಕಾಲೇಜಿನ ಸಿಬ್ಬಂಂದಿ, ವಿದ್ಯಾರ್ಥಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-

22ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿಶೇಷ ಎ.ಐ.ತರಬೇತಿ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಮರಾವತಿ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ರವಿದಳವಾಯಿ ಮತ್ತಿತರರು ಇದ್ದರು.

------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂತಾರಾಷ್ಟ್ರೀಯ ಸಮ್ಮೇಳನ ಯಶಸ್ವಿ
ಸರ್ಕಾರದ ಅನುದಾನದ ಜೊತೆಗೆ ದಾನಿಗಳ ನೆರವು ಪಡೆಯಿರಿ: ವಿಜಯ ಮಾನೆ