ದ್ವಿಭಾಷಾ ಮಾಧ್ಯಮದಿಂದ ಮಕ್ಕಳಿಗೆ ಅನುಕೂಲ-ನಡುವಿನಮನಿ

KannadaprabhaNewsNetwork |  
Published : Jul 18, 2025, 12:48 AM IST
ಗದಗ ತಾಲೂಕಿನ ಲಕ್ಕುಂಡಿ ಮಾರುತಿ ನಗರದ ಸರಕಾರಿ ಹಿರಿಯ ಹೆಣ್ಣು, ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ಮಂಜೂರಿಯಾಗಿರುವ ಆಂಗ್ಲ ಮಾಧ್ಯಮ ತರಗತಿಯನ್ನು ಬಿ.ಇ.ಒ ಬಿ.ವಿ.ನಡುವಿನಮನಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳಲ್ಲಿ ಕನ್ನಡದ ಜತೆಗೆ ಆಂಗ್ಲ ಮಾಧ್ಯಮದ ಜ್ಞಾನದಲ್ಲಿ ಕೌಶಲ್ಯರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಶಾಲೆಯನ್ನಾಗಿ ಪರಿವರ್ತಿಸುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಡುವಿನಮನಿ ಹೇಳಿದರು.

ಗದಗ: ಮಕ್ಕಳಲ್ಲಿ ಕನ್ನಡದ ಜತೆಗೆ ಆಂಗ್ಲ ಮಾಧ್ಯಮದ ಜ್ಞಾನದಲ್ಲಿ ಕೌಶಲ್ಯರಾಗಬೇಕು ಎಂಬ ಉದ್ದೇಶದಿಂದ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಶಾಲೆಯನ್ನಾಗಿ ಪರಿವರ್ತಿಸುತ್ತಿರುವುದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ವಿ. ನಡುವಿನಮನಿ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಮಾರುತಿ ನಗರದ ಸರ್ಕಾರಿ ಹಿರಿಯ ಹೆಣ್ಣು, ಗಂಡು ಮಕ್ಕಳ ಪ್ರಾಥಮಿಕ ಶಾಲೆಗೆ ಮಂಜೂರಿಯಾಗಿರುವ ದ್ವಿಭಾಷಾ ಮಾಧ್ಯಮ ತರಗತಿ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಆಂಗ್ಲಭಾಷೆಯು ಮಕ್ಕಳಿಗೆ ಮಹತ್ವದ ಪಾತ್ರ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ, ಶಾಲಾ ಶಿಕ್ಷಕರು, ಗ್ರಾಮ ಪಂಚಾಯತಿ ಪ್ರಯತ್ನದಿಂದ ಸರ್ಕಾರದಿಂದ ಮಂಜೂರಿಯಾದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂದು ಗದಗ ತಾಲೂಕಿನಲ್ಲಿಯೇ ಲಕ್ಕುಂಡಿ ಮಾರುತಿ ನಗರದ ಸರ್ಕಾರಿ ಶಾಲೆಯಲ್ಲಿ ಪ್ರಥಮವಾಗಿ ಆಂಗ್ಲ ಮಾಧ್ಯಮ ಶಾಲೆಗೆ ಚಾಲನೆ ನೀಡಿದ್ದು ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸರ್ಕಾರಿ ಶಿಕ್ಷಣದ ಯೋಜನೆಗಳು ಕೊನೆಯ ಹಂತದ ಮಗುವಿಗೂ ಸಹ ದೊರೆಯುವಂತೆ ಶಿಕ್ಷಕರು ಗಮನ ಹರಿಸುವಂತೆ ವಿನಂತಿಸಿಕೊಂಡರು.

ತರಗತಿಯ ನಿರ್ವಹಣೆಗೆ ಸಮವಸ್ತ್ರಗಳನ್ನು ಶಿಕ್ಷಕಿ ಎಸ್.ಎಂ. ಹೊಸಮನಿ ಹಾಗೂ ಲೇಖನ ಸಾಮಗ್ರಿಗಳನ್ನು ಮುಖ್ಯೋಪಾಧ್ಯಾಯ ಕೆ.ಬಿ.ಕೊಣ್ಣೂರು ನೀಡಿದನ್ನು ಸ್ಮರಿಸಿದರು.

ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ, ದತ್ತಾತ್ರೇಯ ಜೋಶಿ, ವೀರಯ್ಯ ಗಂಧದ, ಗ್ರಾಪಂ ಸದಸ್ಯರಾದ ಶಿವಣ್ಣ ಬಳಿಗೇರ, ಲಕ್ಷ್ಮಣ ಗುಡಸಲಮನಿ, ವಿರುಪಾಕ್ಷಪ್ಪ ಬೆಟಗೇರಿ, ಫಕೀರಮ್ಮ ಬೇಲೇರಿ, ಹನುಮಂತಪ್ಪ ಬಂಗಾರಿ ಅಕ್ಷರದಾಸೋಹ ಅಧಿಕಾರಿ ಶಂಕರ ಹಡಗಲಿ, ಪಿಡಿಒ ಅಮೀರನಾಯಕ ಬಸವರಾಜ ಮುಳ್ಳಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಗುರಿಕಾರ, ಮಂಜುಳಾ ಗಡ್ಡಿ, ಮಂಜುನಾಥ ಕಟಿಗ್ಗಾರ, ಗ್ರಾಪಂ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು ಇದ್ದರು.

ಮುಖ್ಯೋಪಾಧ್ಯಯ ಕೆ.ಬಿ. ಕೊಣ್ಣೂರು ಸ್ವಾಗತಿಸಿದರು. ಅಶ್ವಿನಿ.ಕೆ.ವಿ. ನಿರೂಪಿಸಿದರು. ಪುಷ್ಪಾ ಪ್ರಭು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!