ಸಮಾಜದ ಮಕ್ಕಳಲ್ಲಿ ಕಲಿಯುವ ಸಾಮರ್ಥ್ಯವಿದೆ

KannadaprabhaNewsNetwork | Published : May 16, 2025 1:55 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಹಾಲುಮತ ಸಮಾಜದ ಮಕ್ಕಳಲ್ಲಿ ಎಲ್ಲವನ್ನು ಮೀರಿ ಉತ್ತಮ ವಿದ್ಯೆ ಕಲಿಯುವ ಸಾಮರ್ಥ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾಜದ ಮಕ್ಕಳು ಟಾಪರ್ಸ್ ಆಗುತ್ತಿರುವುದೇ ಇದಕ್ಕೆ ಸಾಕ್ಷಿ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಶಕ್ತಿ ಪಡೆಯುತ್ತಾರೆ. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸಾಧನೆ ಮಾಡಲು ಸಾಧ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಶಿಕ್ಷಣದಿಂದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಹಾಲುಮತ ಸಮಾಜದ ಮಕ್ಕಳಲ್ಲಿ ಎಲ್ಲವನ್ನು ಮೀರಿ ಉತ್ತಮ ವಿದ್ಯೆ ಕಲಿಯುವ ಸಾಮರ್ಥ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಮಾಜದ ಮಕ್ಕಳು ಟಾಪರ್ಸ್ ಆಗುತ್ತಿರುವುದೇ ಇದಕ್ಕೆ ಸಾಕ್ಷಿ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಸಮಾಜವನ್ನು ಮುನ್ನಡೆಸುವ ಶಕ್ತಿ ಪಡೆಯುತ್ತಾರೆ. ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸಾಧನೆ ಮಾಡಲು ಸಾಧ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.

ತಾಲೂಕಿನ ಚಿಕ್ಕರೂಗಿ ಗ್ರಾಮದ ಬೀರಲಿಂಗೇಶ್ವರ ಮತ್ತು ಭೀಮರಾಯ ಮುತ್ಯಾ ಅವರ ಜಾತ್ರಾ ಮಹೋತ್ಸವದ ಪ್ರಯುಕ್ತ ಹಿರಿಯ ಹಬ್ಬ, ದ್ವಾರ ಬಾಗಿಲ ಗುದ್ದಲಿ ಪೂಜೆ, ಹೊಸ ಬೆಳ್ಳಿಪಲ್ಲಕ್ಕಿ ಸಮರ್ಪಣೆ ಹಾಗೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಸಮಾಜದ ನಿರ್ಮಾಣಕ್ಕಾಗಿ ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತಿದೆ. ಸರ್ವ ಜನಾಂಗದವರಿಗೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೊಡ್ಡ ಜಾತ್ರೆಯ ನೆಪದಲ್ಲಿ ಸಮುದಾಯದ ಮಂದಿ ಒಂದೆಡೆ ಸೇರಿರುವುದನ್ನು ನೋಡಲು ಸಂತೋಷವಾಗುತ್ತದೆ. ಅನಿವಾರ್ಯ ಕಾರಣದಿಂದ ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲರು ಕಾರ್ಯಕ್ರಮದಲ್ಲಿ ಭಾಗವಹಿಸಲಾಗಿಲ್ಲ. ಸಮುದಾಯದ ಜೊತೆ ನಾವೆಲ್ಲರೂ ಇದ್ದೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ಶರಣ ಸಂತರ ನಾಡು, ಹಲವಾರು ಜನ ಶರಣರು ತಮ್ಮ ಪವಾಡಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಅದೇ ರೀತಿ ಈ ಭಾಗದಲ್ಲಿ ಬೀರಲಿಂಗೇಶ್ವರ ಹಾಗೂ ಅಮೋಘಸಿದ್ಧರ ಭಂಡಾರ ಹಾಗೂ ಕಂಬಳಿಯ ಮೂಲಕ ಅವರ ಪವಾಡಗಳು ಸಾಕಷ್ಟು ಕೇಳಿದ್ದೇವೆ. ಹಾಲುಮತ ಸಮಾಜ ಶುದ್ಧ ಹಾಲಿನಂತೆ ಕಾಯಕ ಸಮಾಜ. ಸಮಾಜದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವ ಸಮಾಜದ ಅಭಿವೃದ್ಧಿಗಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಚಿವರಾದ ಎಂ.ಬಿ.ಪಾಟೀಲರು ಜಿಲ್ಲೆಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳು ಜನರನ್ನು ಶ್ರೀಮಂತ ಗೊಳಿಸಿವೆ. ವಿ.ಪ ಸದಸ್ಯನಾಗಿ ದೇವಸ್ಥಾನದ ಅಭಿವೃದ್ಧಿಗೆ ₹ 3 ಲಕ್ಷ, ಮಲ್ಲಿಕಾರ್ಜುನ ದೇವಸ್ಥಾನದ ಅಭಿವೃದ್ಧಿಗೆ ₹ 2 ಲಕ್ಷ ಅನುದಾನ ಹೇಳಿದ್ದು, ಬರುವ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಗುರುನಾಥ ಮುರಡಿ ಮಾತನಾಡಿದರು. ತಾಲೂಕು ಕುರುಬರ ಸಂಘ ಹಾಗೂ ಬ್ಲಾಕ್ ಕಾಂಗ್ರೆಸ್‌ನಿಂದ ಸಚಿವರಿಗೆ ಹಾಗೂ ವಿ.ಪ ಸದಸ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಪ್ರೊ.ರಾಜು ಆಲಗೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ (ಚಬನೂರ), ಜೆಡಿಎಸ್ ಮುಖಂಡರಾದ ಬಿ.ಡಿ.ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಸುಜಾತ ಕಳ್ಳಿಮನಿ, ಮಾಜಿ ಸದಸ್ಯೆ ಗೌರಮ್ಮ ಮುತ್ತತ್ತಿ, ರಾಜು ಕಂಬಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸೀರ ಅಹ್ಮದ್ ಬೇಪಾರಿ, ಜಾತ್ರಾ ಉತ್ಸವ ಕಮಿಟಿ ಅಧ್ಯಕ್ಷ ಸುರೇಶಗೌಡ ಬಿರಾದಾರ, ಗ್ರಾಪಂ ಅಧ್ಯಕ್ಷ ಸಿದ್ದಗೊಂಡಪ್ಪ ಬಿರಾದಾರ, ಸಮಾಜದ ಶರಣು ಪೂಜಾರಿ, ಪ್ರಕಾಶ ದೊಡಮನಿ, ಚಂದು ಪೂಜಾರಿ, ಅಪ್ಪು ಪಟ್ಟೇದ, ಶ್ರೀಶೈಲ ಕನ್ನೊಳ್ಳಿ, ರಮೇಶ ಹಳ್ಳಿ, ಮಾಳಪ್ಪ ಪೂಜಾರಿ, ಮಾಳಪ್ಪ, ಕರೆಪ್ಪ ಬಿಸನಾಳ ಸೇರಿ ಪ್ರಮುಖರು ಉಪಸ್ಥಿತರಿದ್ದರು.---

ಕೋಟ್‌ರಾಜ್ಯದಲ್ಲಿ ಸುಮಾರು 50 ಲಕ್ಷ ಕುರುಬ ಜನಾಂಗದವರಿದ್ದು, ಸಮುದಾಯದ ಮಕ್ಕಳ ಸಲುವಾಗಿ ವಿದ್ಯಾ ಸಂಸ್ಥೆಗಳನ್ನು ಕಟ್ಟಬೇಕು. ದೇವಸ್ಥಾನದ ಜೊತೆಗೆ ಆಸ್ಪತ್ರೆ, ಶಾಲಾ, ಕಾಲೇಜುಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ಹಿಂದುಳಿದ ವರ್ಗದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಕೆಲಸವಾಗುತ್ತದೆ. ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಹಾಗೂ ನನ್ನ ವೈಯಕ್ತಿಕ ಸಹಾಯದಿಂದ ಸದಾ ನಿಮ್ಮ ಜೊತೆ ಇರುತ್ತೇನೆ.ಬೈರತಿ ಸುರೇಶ, ನಗರಾಭಿವೃದ್ಧಿ