ಮಕ್ಕಳಿಗೆ ಕಾನೂನು ಅರಿವು ಅಗತ್ಯ

KannadaprabhaNewsNetwork | Published : Dec 31, 2024 1:00 AM

ಸಾರಾಂಶ

ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು ಅತ್ಯಗತ್ಯವಿದೆ. ಮಕ್ಕಳ ಸ್ವಭಾವ ಇಂದು ಅಪಾಯದಲ್ಲಿದೆ. ಕುವೆಂಪು ಅವರನ್ನು ನಾವು ಮಕ್ಕಳ ದೃಷ್ಟಿಯಿಂದ ತಿಳಿದುಕೊಳ್ಳುವ ಅವಶ್ಯಕತೆ ಇದೆ ಕಾನೂನಿನಲ್ಲಿರುವ ಶಿಕ್ಷೆ ಹಾಗೂ ದಂಡದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು. ಆಗ ಅಪರಾಧ ಮಾಡಲು ಹಿಂದೇಟು ಹಾಕುತ್ತಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿನಾಡು ಪ್ರದೇಶದಲ್ಲಿ ಕನ್ನಡ ಕಾರ‍್ಯಕ್ರಮಗಳ ಮೂಲಕ ಅನಿಕೇತನ ಕನ್ನಡ ಬಳಗವು ಕನ್ನಡ ಭಾಷೆಯನ್ನು ಬೆಳೆಸುತ್ತಿರುವುದು ಸಂತಸದ ವಿಷಯ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಹೇಳಿದರು.ಪಟ್ಟಣದ ಶಂಕರಮಠದ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಪ್ರಯುಕ್ತ ಅನಿಕೇತನ ಕನ್ನಡ ಬಳಗವು ಹಮ್ಮಿಕೊಂಡಿದ್ದ ಕುವೆಂಪು ಅವರ ಬದುಕು ಬರಹ ಕುರಿತು ಕಾರ‍್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಅರಿವು ಮೂಡಿಸಿ:

ಶಾಲಾ ಮಕ್ಕಳು ದುರ್ವ್ಯಸನದಿಂದ ಮುಕ್ತರಾಗಿರಬೇಕು. ಕೋಲಾರ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಹೆಚ್ಚುತ್ತಿದೆ. ಹೀಗಾಗಿ ಕಾನೂನಿನ ಅರಿವು ಬಹಳ ಮುಖ್ಯ. ಶಿಕ್ಷಣವನ್ನು ನೀಡುವ ಮೂಲಕ ಮಕ್ಕಳಿಗೆ ಕಾನೂನು ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ. ಮಕ್ಕಳ ಸ್ವಭಾವ ಇಂದು ಅಪಾಯದಲ್ಲಿದೆ. ಕುವೆಂಪು ಅವರನ್ನು ನಾವು ಮಕ್ಕಳ ದೃಷ್ಟಿಯಿಂದ ತಿಳಿದುಕೊಳ್ಳುವ ಅವಶ್ಯಕತೆ ಇದೆ ಕಾನೂನಿನಲ್ಲಿರುವ ಶಿಕ್ಷೆ ಹಾಗೂ ದಂಡದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದ ಅವರು, ಕುವೆಂಪು ಕೃತಿಗಳನ್ನು ಓದುವ ಮೂಲಕ ಕನ್ನಡಿಗರು ಕೈಜೋಡಿಸಬೇಕೆಂದರು.

ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ನಾಗಾನಂದ್ ಕೆಂಪರಾಜ್ ಮಾತನಾಡಿ, ಕುವೆಂಪು ಅವರ ಸಾಹಿತ್ಯವು ಶ್ರೇಷ್ಠವಾದದ್ದು. ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ, ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಕೃತಿಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ ಎಂದರು.

ಅನಿಕೇತನ ಬಳಗದ ಅಧ್ಯಕ್ಷ ಎಂ.ಎಸ್.ರಾಮಪ್ರಸಾದ್, ಕೆಜಿಎಫ್ ಜೈನ್ ಕಾಲೇಜಿನ ಡಾ.ಶ್ರೀನಿವಾಸ್,ಆದರ್ಶ ಶಾಲೆಯ ಶಶಿಕಲಾ,ವಕೀಲ ಜಯಪ್ರಕಾಶ್,ಕನ್ನಡ ಮಿತ್ರರು ಸಂಸ್ಥೆಯ ಉಪಾಧ್ಯಕ್ಷ ಗೋಪಾಲ್, ಕಸಾಪ ಅಧ್ಯಕ್ಷ ಆರ್.ಅಶ್ವಥ್, ಮಾಸ್ತಿ ಕೃಷ್ಣಪ್ಪ, ವೆಂಕೋಬರಾವ್ ಪಡುತಾರೆ, ಎಸ್.ಸುಜಾತ, ನಾಗರಾಜ, ಅಪ್ಸರ್, ಸುಜಾತ, ವಿಜಯ್ ಕುಮಾರ್, ರಂಗರಾಮಯ್ಯ, ರಮೇಶ್ ಬಾಬು, ಚಂದ್ರು. ಲಯನ್ ನಂದ, ಸೋಮಶೇಖರ್, ಮೈ.ಸತೀಶಕುಮಾರ್, ಶ್ಯಾಮಲಾ, ಕುಮುದಿನಿ, ಕೆ.ಜಿ.ಮಂಜುನಾಥ್ ಇತರರು ಇದ್ದರು.

Share this article