ಮಕ್ಕಳಲ್ಲಿ ಶೂಟಿಂಗ್ ಬಗ್ಗೆ ಆಸಕ್ತಿ ಬೆಳೆಸಬೇಕಿದೆ: ನಿಖಿಲ್

KannadaprabhaNewsNetwork |  
Published : Nov 24, 2025, 01:30 AM IST
ಶಿರ್ಷಿಕೆ-೨೩ಕೆ.ಎಂ.ಎಲ್‌.ಆರ್೨-ಮಾಲೂರು ತಾಲೂಕಿನ ಹುಂಗೇನಹಳ್ಳಿ ಬಳಿ ಆಯೋಜಿಸಲಾಗಿದ್ದ ಎರಡನೇ ಓಪನ್‌ ನ್ಯಾಷನಲ್‌ ಬೆಂಚ್‌ ರೆಸ್ಟ್‌ ಶೂಟಿಂಗ್‌ ಚಾಂಪಿಯನ್‌ ಶಿಪ್‌ ಕಾ ರ‍್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌ ಭಾಗವಹಿಸಿದ್ದರು. | Kannada Prabha

ಸಾರಾಂಶ

ನನ್ನ ಶೈಕ್ಷಣಿಕ ವ್ಯಾಸಂಗ ಕಾಲದಲ್ಲಿ ಅಭಿನವ್‌ ಬಿಂದ್ರಾ ಅವರು ಭಾರತಕ್ಕೆ ಕೊಟ್ಟ ಮೊದಲ ಚಿನ್ನದ ಪದಕದ ಗೆಲುವು ಅಂದು ಸ್ಫೂರ್ತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಪೊಲೀಸ್‌ ಇಲಾಖೆಯಲ್ಲಿ ಸೇವೆ ಮಾಡುವ ಸೌಭಾಗ್ಯ ದೊರೆತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಹೇಳಿದರು.

ಶೂಟಿಂಗ್‌ ಚಾಂಪಿಯನ್‌ ಶಿಪ್ ಉದ್ಘಾಟಿಸಿದ ಎಸ್ಪಿ ನಿಖಿಲ್

ಕನ್ನಡಪ್ರಭ ವಾರ್ತೆ ಮಾಲೂರು ನನ್ನ ಶೈಕ್ಷಣಿಕ ವ್ಯಾಸಂಗ ಕಾಲದಲ್ಲಿ ಅಭಿನವ್‌ ಬಿಂದ್ರಾ ಅವರು ಭಾರತಕ್ಕೆ ಕೊಟ್ಟ ಮೊದಲ ಚಿನ್ನದ ಪದಕದ ಗೆಲುವು ಅಂದು ಸ್ಫೂರ್ತಿ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಪೊಲೀಸ್‌ ಇಲಾಖೆಯಲ್ಲಿ ಸೇವೆ ಮಾಡುವ ಸೌಭಾಗ್ಯ ದೊರೆತಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಹೇಳಿದರು.

ಅವರು ತಾಲೂಕಿನ ಹುಂಗೇನಹಳ್ಳಿ ಗ್ರಾಮದ ಬಳಿ ಕರ್ನಾಟಕ ರಿಮ್‌ ಫೈರ್ ಆ್ಯಂಡ್‌ ಬೆಂಚ್‌ ರೆಸ್ಟ್‌ ಶೂಟಿಂಗ್‌ ಚಾಂಪಿಯನ್‌ ಶಿಪ್ ಸ್ಪರ್ಧಾಕೂಟ ಉದ್ಘಾಟಿಸಿ ಮಾತನಾಡಿ, ಬಿಂದ್ರಾ ಚಿನ್ನದ ಪದಕ ಗೆದ್ದಾಗ ಅಂದು ಶೂಟಿಂಗ್‌ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ನನ್ನ ಗುರಿ ತಲುಪಲು ಪೊಲೀಸ್‌ ಇಲಾಖೆ ಸೇರಿದ ಮೇಲೆ ಶೂಟಿಂಗ್ ಕಲಿಯುವ ಅವಕಾಶ ಸಿಕ್ಕಿತಲ್ಲದೇ ಇಲಾಖೆ ಅಕಾಡೆಮಿಯಲ್ಲಿ ಶ್ರೇಷ್ಠ ಗುರಿಕಾರನಾಗಿ ಆಯ್ಕೆಯಾದ ನಂತರ ಈ ಕ್ರೀಡೆ ಬಗ್ಗೆ ಒಲವು ಹೆಚ್ಚಾಗಿದೆ ಎಂದರು.

ಇಲಾಖಾ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದಲ್ಲದೇ ಐಪಿಎಸ್‌ ಅಧಿಕಾರಿಗಳ ಅಖಿಲ ಭಾರತ ಶೂಟಿಂಗ್‌ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ್ದೆ. ಮಕ್ಕಳಲ್ಲಿ ಶೂಟಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುವ ಅಗತ್ಯವಿದ್ದು, ಸರಿಯಾದ ತರಬೇತಿ ಮತ್ತು ಪ್ರೋತ್ಸಾಹದಿಂದ ಮಾಲೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶೂಟರ್‌ಗಳು ಸೃಷ್ಟಿಯಾಗಲಿ ಎಂದು ಶುಭ ಹಾರೈಸಿದರು.

ಮಕ್ಕಳಲ್ಲಿ ಶೂಟಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಬೇಕಿದ್ದು, ಮಕ್ಕಳು ಶೂಟಿಂಗ್ ಕಲಿಯಲು ಶುರುಮಾಡಿದರೆ, ನಮ್ಮ ಜಿಲ್ಲೆಯಲ್ಲಿಯೇ ಚಾಂಪಿಯನ್‌ಗಳು ಹುಟ್ಟಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಪ್ರತಿಭಾವಂತ ಯುವ ಶೂಟರ್‌ಗಳನ್ನು ಹೆಕ್ಕಿ ತೆಗೆಯುವುದು ಮತ್ತು ಅವರಿಗೆ ವೇದಿಕೆ ಕಲ್ಪಿಸುವುದು ಕ್ರೀಡಾ ಸಂಸ್ಥೆಗಳು ಹಾಗೂ ಒಕ್ಕೂಟಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.

ಕಳೆದ ವರ್ಷಕ್ಕಿಂತಲೂ ಈ ಬಾರಿ ಸ್ಪರ್ಧೆಯಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ಆಯೋಜಕರ ಪರಿಶ್ರಮದಿಂದ ಮುಂದಿನ ದಿನಗಳಲ್ಲಿ ಇದೊಂದು ನಿಯಮಿತ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಲಿ. ಜತೆಗೆ ಮಾಲೂರಿನಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವವರು ಹೊರಹೊಮ್ಮಲಿ ಎಂದು ಹಾರೈಸಿದರು.

ಬೆಂಚ್ ರೆಸ್ಟ್ ಶೂಟಿಂಗ್ ರಾಷ್ಟ್ರೀಯ ಸ್ಪರ್ಧಿಗಳಾದ ರೀಣ, ರಜತ್, ಕರ್ನಾಟಕ ಸ್ಟೇಟ್ ರಿಂಪೈರ್ ಆ್ಯಂಡ್ ಬೆಂಚ್ ರೆಸ್ಟ್ ಶೂಟಿಂಗ್ ಫೆಡರೇಶನ್ ಅಧ್ಯಕ್ಷ ಕೆ.ಮಹೇಶ್ , ಪೊಲೀಸ್ ಇನ್ಸ್ಪೆಕ್ಟರ್ ರಾಮಪ್ಪ ಗುತ್ತೇರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕ ಈರೇಗೌಡ, ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್‌ಗೌಡ, ಪುಟ್ಟಣ್ಣ, ಗೋಪಿನಾಥ, ಜೆಸಿಬಿ ಶ್ರೀನಿವಾಸ್, ಎಚ್‌.ಎನ್‌. ಅಶೋಕ್‌ಕುಮಾರ್, ರಾಜೇಗೌಡ, ಜಾನ್‌ಪೌಲ್, ಪ್ರತಾಪ್, ಪುನೀತ್ ಕುಮಾರ್, ಸುಚೇತನ್ ನವೀನ್ ಕುಮಾರ್, ಸೇರಿದಂತೆ ಹಾಜರಿದ್ದರು.

PREV

Recommended Stories

ಮಕ್ಕಳಿಗೆ ಶಿಕ್ಷಣದಷ್ಟೇ ಸಂಸ್ಕಾರವೂ ಮುಖ್ಯ: ಕೆ.ಪಿ.ಬಾಬು
ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮೆಕ್ಕೆ ಹೋರಾಟ ಶುರು