ಹಿರೇಕೆರೂರು: ವಿಶ್ವಕರ್ಮ ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವ ಮೂಲಕ ಸಮಾಜವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನೂತನ ತಾಲೂಕು ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು ತಮಗೆ ದೊರೆತಂತಹ ಕರ್ತವ್ಯವನ್ನು ಬಹುಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಾಲೂಕು ಲಯನ್ಸ್ ಕ್ಲಬ್ ಪರಿವಾರ ಅಧ್ಯಕ್ಷ ಪ್ರಕಾಶಗೌಡ ಗೌಡರ ಹೇಳಿದರು.ತಾಲೂಕು ವಿಶ್ವಕರ್ಮ ಸಮಾಜಕ್ಕೆ ನೂತನವಾಗಿ ಅಧ್ಯಕ್ಷರಾದ ದೇವೇಂದ್ರ ಬಡಿಗೇರ, ಉಪಾಧ್ಯಕ್ಷರಾದ ಪ್ರಕಾಶ ನಿಟ್ಟೂರ ಮತ್ತು ಪದಾಧಿಕಾರಿಗಳಾಗಿ ಆಯ್ಕೆಯಾದವರಿಗೆ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಎರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರು ತಮ್ಮ ಕರ್ತವ್ಯವನ್ನು ಬಹುಕಟ್ಟಾಗಿ ನಿರ್ವಹಿಸಿದ್ದರಿಂದ ಇಂದು ನಮ್ಮ ನಾಡಿನ ಭವ್ಯ ಇತಿಹಾಸ, ಪರಂಪರೆ, ಮರಿಚಿಕೆಯಾಗುತ್ತಿದ್ದವು. ಅಂದಿನಿಂದ ಇಂದಿನವರೆಗೆ ಈ ಸಮಾಜದವರು ಕರಕುಶಲ, ಮೂರ್ತಿ ಕೆತ್ತನೆ, ಮಣ್ಣಿನ ಮತ್ತು ಮರಗಳಿಂದ ವಿಗ್ರಹ, ಹೀಗೆ ಒಂದಿಲ್ಲೊಂದು ಕೆತ್ತನೆ, ಬಡಿಗತನದ ಕೆಲಸಗಳಿಗೆ ಹೆಸರುವಾಸಿಯಾಗಿದ್ದು, ಅತ್ಯಾಧುನಿಕ ಯಂತ್ರ ಮತ್ತು ಆಧುನಿಕ ತಂತ್ರಜ್ಞಾನಗಳಿಂದ ಅವರ ಸಮಾಜದ ಬಹಳಷ್ಟು ಜನತೆಗೆ ಉದ್ಯೋಗವಿಲ್ಲದೆ ಬಹು ತೊಂದರೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು.ಮುಖಂಡ ಬಸವರಾಜ ಅರಕೇರಿ ಮಾತನಾಡಿ, ಸಂಸ್ಕೃತಿ, ಪರಂಪರೆ, ಇತಿಹಾಸ, ಮೂರ್ತಿಗಳು, ದೇವಸ್ಥಾನಗಳ ನಿರ್ಮಾಣದ ಕೆತ್ತನೆಗಳಿಗೆ ಮತ್ತೊಂದು ಹೆಸರೆ ವಿಶ್ವಕರ್ಮರು, ಇವರು ದೇಶಾದ್ಯಂತ ತಮ್ಮ ಕೈಚಳಕದಿಂದ ಸುಂದರವಾದ ದೇವಸ್ಥಾನ, ಮೂರ್ತಿ ಕೆತ್ತನೆ, ಜಗತ್ತೆ ನಿಬ್ಬೆರಗಾಗುವಂತಹ ತಮ್ಮ ಶಿಲ್ಪಿ ಕಲೆಯಿಂದ ಹೆಸರುವಾಸಿಯಾಗಿದ್ದು, ವಿಶ್ವಕರ್ಮ ಸಮಾಜದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರಕಿಸಬೇಕು. ಈ ಸಮಾಜ ಮುಖ್ಯವಾಹಿನಿಗೆ ಬರಲು ನೂತನ ಪದಾಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು ಎಂದರು.ಮದ್ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷ ರುದ್ರೇಶ ಬೇತೂರ, ಶಿವಕುಮಾರ ಪ್ಯಾಟೇರ, ಅನಿಲ್ ಪಾಟೀಲ, ಜಗದೀಶ ದೊಡ್ಡಗೌಡರ, ಮನೋಹರ ವಡ್ಡಿನಕಟ್ಟಿ, ಲೋಕೇಶ ಕಮಡೊಳ್ಳಿ, ಕಿಟ್ಟಿ ಚಿಂದಿ, ರಾಜು ಬಣಕಾರ, ಪ್ರವೀಣ ಮತ್ತಳ್ಳಿ, ಎಮ್.ಎಮ್.ಮತ್ತೂರ ಹಾಗೂ ವಿಶ್ವಕರ್ಮ ಸಮಾಜದ ಪದಾಧಿಕಾರಿಗಳು, ಸಮಾಜದವರು ಇದ್ದರು.