)
ಮಡಿಕೇರಿಮಡಿಕೇರಿ ದಸರಾ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16 ರಂದು ಶುಕ್ರವಾರ ನಗರದ ಗಾಂಧಿ ಮೈದಾನದಲ್ಲಿ 13 ನೇ ವಷ೯ದ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪಧೆ೯ಗಳನ್ನು ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್ ಮತ್ತು ಹಾಗೂ ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ. ಸ್ಪಧೆ೯ಗಳು ಅ.16 ರಂದು ಶುಕ್ರವಾರ ಬೆಳಗ್ಗೆ 9.30 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಪ್ರಾರಂಭವಾಗಲಿದೆ.
ಛದ್ಮವೇಶ ಸ್ಪಧೆ೯: ಎಲ್ ಕೆ.ಜಿ. ಮತ್ತು ಯುಕೆಜಿ ವಿದ್ಯಾಥಿ೯ಗಳ ವಿಭಾಗ, 1 ನೇ ತರಗತಿಯಿಂದ 4 ನೇ ತರಗತಿ,, 5 ರಿಂದ 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಶ ಸ್ಪಧೆ೯ಗಳು ನಡೆಯಲಿದ್ದು, ಸಂಭಾಷಣೆಗಳಿಗೆ ಪ್ರಾಮುಖ್ಯತೆಯಿಲ್ಲದ ಸ್ಪಧೆ೯ಯಲ್ಲಿ ವಸ್ತ್ರಾಲಂಕಾರಕ್ಕೆ ಆದ್ಯತೆಯಿದೆ.ಕ್ಲೇ ಮಾಡೆಲಿಂಗ್ : 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ವಿದ್ಯಾಥಿ೯ಗಳಿಗಾಗಿ ಜೇಡಿ ಮಣ್ಣು ಬಳಸಿರುವ ಕ್ಲೇ ಮಾಡೆಲಿಂಗ್ ಸ್ಪಧೆ೯ ಆಯೋಜಿತವಾಗಿದೆ.
ಅಕ್ಟೋಬರ್ 16 ರಂದು ಶುಕ್ರವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸ್ಪಧಿ೯ಗಳು ಬೆಳಗ್ಗೆ 9 ಗಂಟೆಗೇ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪಧೆ೯ಗಳು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗುತ್ತದೆ. ಎಲ್ಲಾ ಸ್ಪಧೆ೯ಗಳಿಗೆ ಬೇಕಾದ ಸಾಮಾಗ್ರಿಗಳನ್ನು ಸ್ಪಧಿ೯ಗಳೇ ತರಬೇಕು. ಹೆಸರು ನೋಂದಾಯಿಸಲು ಸಂಪಕ೯ ಸಂಖ್ಯೆಗಳು - ಮಕ್ಕಳ ಸಂತೆ, - ಶಫಾಲಿ ರೈ - 9741523484, ಪ್ರಿಯಾಪ್ರಶಾಂತ್ - 9449915522. ಮಕ್ಕಳಿಂದ ಅಂಗಡಿ ಸ್ಪಧೆ೯ - ಗಾನಾ ಪ್ರಶಾಂತ್ - 9449713748, ಪಲ್ಲವಿ ಪ್ರಸಾದ್ - 9972963151, ಮಕ್ಕಳಿಂದ ಮಂಟಪ - ದಿವ್ಯಾಚೇತನ್ - 9538101863, ಸೌಮ್ಯ ದಿನೇಶ್ - 9380595964, ಛದ್ಮವೇಶ ಸ್ಪಧೆ೯ - ನಮಿತಾ ರೈ - 9448976405, ಶಮ್ಮಿ ಪ್ರಭು - 9449833179, ಕ್ಲೇ ಮಾಡೆಲಿಂಗ್ - ಸುಮನಾ ಶ್ರೀಹರಿ - 9591064297, ರಶ್ಮಿ ಪ್ರವೀಣ್ - 9902362038. ಈ ಎಲ್ಲಾ ಸ್ಪಧೆ೯ಗಳಿಗೆ ಹೆಸರು ನೋಂದಾಯಿಸಲು ಕೊನೇ ದಿನಾಂಕ ಅಕ್ಟೋಬರ್ 5.