ಆಹಾರ, ಮೆಡಿಕಲ್ ಕಿಟ್, ಸ್ಪೋರ್ಟ್ಸ್ ಸಾಮಗ್ರಿ ವಿತರಿಸಿ ಮಕ್ಕಳ ದಿನ ಆಚರಣೆ

KannadaprabhaNewsNetwork |  
Published : Nov 17, 2025, 12:45 AM IST
16ಕೆಎಂಎನ್ ಡಿ23 | Kannada Prabha

ಸಾರಾಂಶ

ಮಾಜಿ ಸಂಸದ, ಶಾಲೆ ಸಂಸ್ಥಾಪಕ ಅಧ್ಯಕ್ಷ ದಿ.ಜಿ. ಮಾದೇಗೌಡರು ನಡೆದು ಬಂದ ದಾರಿಯಲ್ಲೇ ನಮ್ಮ ವಿದ್ಯಾರ್ಥಿಗಳು ಅನುಸರಿಸಿ ನಡೆಯುತ್ತಿದ್ದಾರೆ. ಮೌಲ್ಯಯುತ ಶಿಕ್ಷಣದ ಜತೆಗೆ ಶಾಲೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವಿಷಯ, ಕರುಣೆಯ ಮನೋಭಾವ ಹಾಗೂ ಮಾನವೀಯತೆ ಅರಿವನ್ನು ಮೂಡಿಸುತಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಮಕ್ಕಳು ಜಾಯ್ ಆಫ್ ಗಿವಿಂಗ್ ಡ್ರೈವ್ ಮೂಲಕ ಮೈಸೂರಿನ ಕಲಿಯುವ ಮನೆ ಮಕ್ಕಳಿಗೆ ದಿನ ನಿತ್ಯದ ಆಹಾರ ಸಾಮಗ್ರಿ, ಮೆಡಿಕಲ್ ಕಿಟ್, ಸ್ಪೋರ್ಟ್ಸ್ ಸಾಮಗ್ರಿ ಸಂಗ್ರಹಿಸಿ ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

ಪ್ರತಿ ವರ್ಷ ಶಾಲಾ ಮಕ್ಕಳಿಗೆ ಏನಾದರೂ ಉಡುಗೊರೆ ನೀಡಿ ಮಕ್ಕಳ ದಿನಾಚರಣೆ ಶುಭಾಶಯ ಕೋರುತ್ತಿದ್ದರು. ಆದರೆ, ಈ ವರ್ಷ ಭಾರತೀ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲಾ ವಿದ್ಯಾರ್ಥಿಗಳು, ಬಡ ಮಕ್ಕಳಿರುವ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವಾಗಿ ಸೇವಾ ಮನೋಭಾವನೆ ಬೆಳೆಸಿಕೊಂಡರು ಎಂದರು.

ಮಕ್ಕಳ ದಿನಾಚರಣೆ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ಮಕ್ಕಳೇ ನೀವು ಪ್ರತಿ ವರ್ಷ ನಮ್ಮಿಂದ ಉಡುಗೊರೆ ತೆಗೆದುಕೊಳ್ಳುತ್ತಿದ್ದೀರಿ. ಈ ವರ್ಷ ನೀವೇಕೆ ಉಡುಗೊರೆ ಕೊಡಬಾರದು ಎಂದು ಕೇಳಿದಾಗ ಜಾಯ್ ಆಫ್ ಗಿವಿಂಗ್ ಡ್ರೈವ್ ಕಾರ್ಯಕ್ರಮದ ಮೂಲಕ 600 ಕೆ.ಜಿ.ಅಕ್ಕಿ, ಗೋಧಿ ಹಿಟ್ಟು, ಅಡುಗೆ ಪದಾರ್ಥಗಳನ್ನು, ಸಿಹಿ ತಿಂಡಿಗಳು, ಸೋಪು, ಶಾಂಪು, ಮೆಡಿಕಲ್ ಕಿಟ್, ಸ್ಪೋರ್ಟ್ಸ್ ಇತ್ಯಾದಿ ಸಾಮಗ್ರಿಗಳನ್ನು ಸಂಗ್ರಹಿಸಿದರು.

ನಂತರ ಮೈಸೂರಿನ ಕಲಿಯುವ ಮನೆಗೆ ಹೋಗಿ ಅಲ್ಲಿನ ಮಕ್ಕಳಿಗೆ ಮಕ್ಕಳ ದಿನಾಚರಣೆ ಶುಭಾಶಯ ತಿಳಿಸಿ ಜಾಯ್ ಆಫ್ ಗಿವಿಂಗ್ ಡ್ರೈವ್ ಮೂಲಕ ನಿಜವಾದ ಸಂತೋಷದ ಸವಿಯನ್ನು ವಿದ್ಯಾರ್ಥಿಗಳು ಅನುಭವಿಸಿ ವಿಕಲ ಚೇತನ, ಬುದ್ಧಿ ಮಾಂದ್ಯ, ಅಂಧ ಮಕ್ಕಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದರು.

ಈ ವೇಳೆ ಮಾತನಾಡಿದ ಪ್ರಾಂಶುಪಾಲೆ ರಮ್ಯ ಮಾತನಾಡಿ, ಮಾಜಿ ಸಂಸದ, ಶಾಲೆ ಸಂಸ್ಥಾಪಕ ಅಧ್ಯಕ್ಷ ದಿ.ಜಿ. ಮಾದೇಗೌಡರು ನಡೆದು ಬಂದ ದಾರಿಯಲ್ಲೇ ನಮ್ಮ ವಿದ್ಯಾರ್ಥಿಗಳು ಅನುಸರಿಸಿ ನಡೆಯುತ್ತಿದ್ದಾರೆ. ಮೌಲ್ಯಯುತ ಶಿಕ್ಷಣದ ಜತೆಗೆ ಶಾಲೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ವಿಷಯ, ಕರುಣೆಯ ಮನೋಭಾವ ಹಾಗೂ ಮಾನವೀಯತೆ ಅರಿವನ್ನು ಮೂಡಿಸುತಿದ್ದೇವೆ ಎಂದರು.

ಮಕ್ಕಳು ತಮಗೆ ಪರಿಚಯವಿಲ್ಲದ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಉತ್ಸಾಹ ಸೇವೆಗಾಗಿ ತಮ್ಮ ಆನಂದವನ್ನು ದಾನವಾಗಿ ಪರಿವರ್ತಿಸುತ್ತಿದ್ದಾರೆ. ವಿದ್ಯಾರ್ಥಿಗಳು ದಾನ ಮಾಡಿ ಬೇರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಸಂಸ್ಥೆ ಚೇರ್ಮನ್ ಮಧು ಜಿ.ಮಾದೇಗೌಡ ಅವರ ಆಶಯದಂತೆ ಶಾಲೆಯು ವಿವಿಧ ವಿಭಿನ್ನ ಕಾರ್ಯಗಳತ್ತ ತಮ್ಮ ಹೆಜ್ಜೆ ಇಡುತ್ತಿದ್ದು ಸಮಾಜ ಮುಖಿ ಕಾರ್ಯಗಳಲ್ಲು ತಮ್ಮನ್ನು ತೊಡಗಿಸಿಕೊಳ್ಳುತ್ತಿದೆ ಎಂದರು.

ಈ ವೇಳೆ ಶಿಕ್ಷಕರಾದ ಸಿಂಧು, ಸುರಭಿ, ಮಂಗಳ ಗೌರಿ, ಗಾಯತ್ರಿ, ಲಕ್ಷ್ಮಿ, ನಂದಾ, ರಶ್ಮಿ ಸೇರಿದಂತೆ ಹಲವರಿದ್ದರು.

ವಿದ್ಯಾರ್ಥಿನಿಯರಿಗೆ ಪ್ರಥಮ ಸ್ಥಾನ, ಅಭಿನಂದನೆ

ಮಂಡ್ಯ: ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ ಮೈಸೂರು ವಿಶ್ವವಿದ್ಯಾಲಯಗಳ ಪ್ರಸಕ್ತ ಸಾಲಿನ ಮಹಿಳೆಯರ ಅಂತರ ಕಾಲೇಜುಗಳ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸಿ ಮಂಡ್ಯ ವಿವಿ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ. ಗುರುರಾಜ್ ಪ್ರಭು ಕೆ., ದೈಹಿಕ ಶಿಕ್ಷಣ ನಿರ್ದೇಶಕ ಲೋಕೇಶ್ ಕೆ.ಆರ್., ಗೆಜೆಟೆಡ್ ಮ್ಯಾನೇಜರ್ ಕೆ.ಪಿ. ರವಿಕಿರಣ್ ಹಾಗೂ ಕ್ರೀಡಾ ಸಮಿತಿಯ ಎಲ್ಲಾ ಸದಸ್ಯರು ಮತ್ತು ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಆಟಗಾರರ ತಂಡವನ್ನು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ