ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೋಬಳಿ ವ್ಯಾಪ್ತಿಯ ವಿವಿಧ ಶಾಲೆಗಳಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ಆದೇಶದಂತೆ ಶಿಕ್ಷಕ ಪೋಷಕರ ಸಭೆ, ವಿದ್ಯಾರ್ಥಿಗಳಿಗೆ ಛದ್ಮವೇಷ, ಆಟೋಟ ಸ್ಪರ್ಧೆ, ಮನೋರಂಜನಾ ಆಟಗಳನ್ನು ಆಯೋಜಿಸಲಾಗಿತ್ತು.ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಪ್ರೊ. ಕಲ್ಯಾ ಟ೦ಡ ಪೂಣಚ್ಚ, ನೆಹರು ಮನೆತನದ ಸೂಕ್ಷ್ಮ ಪರಿಚಯದೊಂದಿಗೆ ನೆಹರುರವರ ಜನ್ಮದಿನ ದಿನದ ಮಹತ್ವದ ಬಗ್ಗೆ ಮಾತನಾಡಿದರು.ಶಾಲೆಯ ಪ್ರಾಂಶುಪಾಲರಾದ ಬಿ.ಎ೦. ಶಾರದಾ ಮಾತನಾಡಿ, ಭಾರತದ ಮಾಜಿ ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆ ಸ್ಮರಣೀಯ ಎಂದರು.
ಶಿಕ್ಷಕಿ ಲೀನಾ ಸಿ.ಕೆ., ಸಾತ್ವಿಕ ಕೆ.ಎಸ್. ಮಾತನಾಡಿದರು.ಶಾಲಾ ಮಂತ್ರಿಮಂಡಲದ ಸಾಂಸ್ಕೃತಿಕ ನಾಯಕಿ ಸಿಂಚನ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ನೆರವ೦ಡ ಸುನಿಲ್ ದೇವಯ್ಯ, ನಿರ್ದೇಶಕರಾದ ನವೀನ್ ಅಪ್ಪಯ್ಯ, ಸುಬ್ಬಯ್ಯ, ಶಾಲಾ ನಾಯಕಿ ಸಾತ್ವಿಕ ಕೆ.ಎಸ್, ಗಾನವಿ ಬಿ.ಎಂ., ಮನ್ನಹ ವಿ., ಮುತ್ತಮ್ಮ ಎನ್.ಎಂ., ಸಹನಾ ಪಿ.ಎಸ್., ಸಮನ್ವಿತ ಪಿ.ಎಸ್. ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ನೀಲ್ ಮೇದಪ್ಪ ತಂಡ ಪ್ರಾರ್ಥಿಸಿದರು. ಶಿಕ್ಷಕಿ ನೀತಾ ಸಿ.ಎಸ್. ಸ್ವಾಗತಿಸಿದರು. ರೀನಾ ಕೆ.ಎಸ್. ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕ ಭಗವತಿ ಪ್ರಸಾದ್ ಎ.ಟಿ. ನಿರೂಪಿಸಿದರು. ಸೀತಮ್ಮ ಕೆ.ಆರ್. ವಂದಿಸಿದರು.ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳಿಗೆ ವಿತರಿಸಲಾಯಿತು. ಇಲ್ಲಿಯ ಕೆಪಿಎಸ್ ಶಾಲಾ, ಹಳೆತಾಲೂಕಿನ ಅಂಕುರ್ ಪಬ್ಲಿಕ್ ಸ್ಕೂಲ್, ಬೇತು ಗ್ರಾಮದ ಎಕ್ಸೆಲ್ ಹಾಗೂ ಸೇಕ್ರೆಡ್ ಹಾರ್ಟ್ ಶಾಲೆಗಳಲ್ಲಿಯೂ ಮಕ್ಕಳ ದಿನಾಚರಣೆ ನಡೆಯಿತು.