- ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಶಿಕ್ಷಕ ಎಂ.ಮಲ್ಲಿಕಾರ್ಜುನ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ನ್ಯಾಮತಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ನಡೆಯುವ ಸಾಹಿತ್ಯ ಸೌರಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಮಾತೃಭಾಷೆ ಮಾತನಾಡುವ ಮಕ್ಕಳು ಶಾಲೆಗಳಿಗೆ ದಾಖಲಾಗುತ್ತವೆ. ಅಂತಹ ಮಕ್ಕಳನ್ನು ವಿದ್ಯಾ ಪ್ರವೇಶ ಮೂಲಕ, ಮಹಾನ್ ವ್ಯಕ್ತಿಗಳ ಪರಿಚಯ, ಸ್ಥಳೀಯವಾಗಿ ಪರಿಸರದ ಮೂಲ ಕಲ್ಪನೆಯ ಪರಿಚಯ ಮಾಡಿಸುವ ಮೂಲಕ ಮಕ್ಕಳಿಗೆ ಅನುಭವ ಕಲಿಸಬೇಕು. ಪ್ರಸ್ತುತ ದಿನಗಳಲ್ಲಿ ಮಕ್ಕಳ ಶಿಕ್ಷಣ ಮತ್ತು ಮಗುವಿನ ಕಾಳಜಿ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕಿದೆ ಎಂದರು.ಹಿರಿಯ ಕವಿ ಸಂಡೂರು ಮಹೇಶ್ವರಪ್ಪ ಮಾತನಾಡಿ, ಪಟ್ಟಣದಲ್ಲಿರುವ ಮನೆತನಗಳ ಹೆಸರುಗಳು ಹೇಗೆ ಬಂದವು, ಹಿಂದಿನ ಮತ್ತು ಇಂದಿನ ಶಿಕ್ಷಣ ಪದ್ಧತಿ, ಸಮಾಜದಲ್ಲಿ ಪ್ರತಿಯೊಬ್ಬ ಸಮುದಾಯದವರು ಪ್ರೀತಿ- ವಿಶ್ವಾಸಗಳಿಂದ ಹೇಗೆ ಇದ್ದರೂ ಎಂಬ ಬಗ್ಗೆ ತಿಳಿಸಿದರು.
ತಾಲೂಕು ಘಟಕದ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಗೌರವ ಕಾರ್ಯದರ್ಶಿ ಎಸ್.ಜಿ. ಬಸವರಾಜಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎಸ್.ಜಗದೀಶ, ಕುಂಕುವ ಗ್ರಾಪಂ ಅಧ್ಯಕ್ಷ ಚಂದನ್ ಜಂಗ್ಲಿ, ಬೆಳಗುತ್ತಿ ಹೋಬಳಿ ಘಟಕದ ಅಧ್ಯಕ್ಷ ಎಂ.ಜಿ. ಕವಿರಾಜ, ನಿವೃತ್ತ ಶಿಕ್ಷಕ ಮಂಜಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ.ಕೆ. ಭೋಜರಾಜ, ಪ್ರಗತಿಪರ ರೈತರಾದ ನಾಗರಾಜಪ್ಪ, ಷಡಾಕ್ಷರಪ್ಪ, ವರ್ತಕ ಎನ್.ಟಿ. ಸತ್ಯನಾರಾಯಣ, ಯುವಕವಿ ಮಂಜುನಾಥ ಇದ್ದರು.
- - - -10ಎಚ್.ಎಲ್.ಐ1:ಕನ್ನಡ ಸಾಹಿತ್ಯ ಪರಿಷತ್ತು ನ್ಯಾಮತಿ ತಾಲೂಕು ಘಟಕದಿಂದ ಶನಿವಾರ 8ನೇ ಮಾಸಿಕ ಸಾಹಿತ್ಯ ಸೌರಭ ಕಾರ್ಯಕ್ರಮ ನಡೆಯಿತು.