ಹೋರಿ ತಿಮ್ಮನಹಳ್ಳಿ ಅಂಗನವಾಡಿ ಮಕ್ಕಳಿಗೆ 2ವರ್ಷದಿಂದ ವಂಚನೆಕನ್ನಡಪ್ರಭವಾರ್ತೆ, ಬೀರೂರು.
ಹೋರಿತಿಮ್ಮನಹಳ್ಳಿ ಗ್ರಾಮದಲ್ಲಿ ಒಟ್ಟು 7ಮಕ್ಕಳಿದ್ದು , ಅದರಲ್ಲಿ ಒಬ್ಬ ಕಾರ್ಯಕರ್ತೆ ಹಾಗೂ ಅಡುಗೆ ಸಹಾಯಕಿ ಇದ್ದಾರೆ. 2023 ಆಗಸ್ಟ್ ನಿಂದಲು ಸಹ ಈ ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಇನ್ನಿತರ ಆಹಾರ ಪದಾರ್ಥಗಳನ್ನು ಸಮರ್ಪಕ ವಾಗಿ ನೀಡದೆ ನೋಂದಣಿ ಪುಸ್ತಕದಲ್ಲಿ ಮಾತ್ರ ಮಕ್ಕಳಿಗೆ ಆಹಾರ ಸೌಲಭ್ಯ ಒದಗಿಸಿದ್ದೇವೆ ಎಂದು ನಮೂದು ಮಾಡಲಾಗಿದೆ.ಆದರೆ ಗ್ರಾಮಸ್ಥರು ಹಾಗೂ ಮಕ್ಕಳ ಪಾಲಕರು ಕಾರ್ಯಕರ್ತೆಗೆ ಮೊಟ್ಟೆ ನೀಡದಿರುವ ಬಗ್ಗೆ ಪ್ರಶ್ನೆ ಮಾಡಿ ಕಾರ್ಯ ಕರ್ತೆ ಯೊಂದಿಗೆ ನಡೆಸಿದ ಚರ್ಚೆಯನ್ನು ಮೊಬೈಲ್ ನಲ್ಲಿ ಚಿತ್ರಿಕರಿಸಿದ ವಿಡಿಯೋದಲ್ಲಿ ಅಂಗನವಾಡಿ ಟೀಚರ್ ಈ ತಮ್ಮ ತಪ್ಪನ್ನು ಒಪ್ಪಿಕೊಂಡು ಮುಂದೆ ಹೀಗಾಗೊಲ್ಲ. ನನ್ನನ್ನು ಕ್ಷಮಿಸಿ, ಆಗಿರುವ ತಪ್ಪಿಗೆ ಇಷ್ಟು ದಿನ ಕೊಡದ ಮೊಟ್ಟೆ ಹಣವನ್ನು ಮರು ಪಾವತಿ ಮಾಡುತ್ತೇನೆ. ದಯಮಾಡಿ ಕ್ಷಮಿಸಿ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಅಂಗನವಾಡಿಯಲ್ಲಿ 8 ವರ್ಷದ ಹಿಂದೆ ಅಂಗನವಾಡಿಗೆ ನನ್ನ ಮಕ್ಕಳನ್ನು ದಾಖಲಿಸಿದ್ದೆ ಆಗಲು ಕೂಡ ಈ ಮೇಡಂ ಇದೇ ರೀತಿ ಮೊಟ್ಟೆ ಕೊಡದೆ ವಂಚಿಸುತ್ತಿದ್ದರು. ನಾನು ಕೂಡ ಬಹಳಷ್ಟು ಬಾರಿ ಈ ಮೇಡಂಗೆ ಎಚ್ಚರಿಕೆ ನೀಡಿದ್ದರು ಕೇಳುತ್ತಿರಲಿಲ್ಲ. ಇತ್ತೀಚೆಗೆ ಇವರು ಮಕ್ಕಳಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು ಎನ್ನುತ್ತಾರೆ ಹೋರಿತಿಮ್ಮನಹಳ್ಳಿ ಗೃಹಿಣಿ ರೇಣುಕಾ.ಕಳೆದ 2 ವರ್ಷಗಳಿಂದ ಈ ಅಂಗನವಾಡಿ ಟೀಚರ್ ಮಕ್ಕಳಿಗೆ ಮೊಟ್ಟೆ ನೀಡಿಲ್ಲ. ಹೀಗಾದರೆ ಮಗುವಿ ಪೌಷ್ಟಿಕತೆ ಹೇಗೆ ಬರುತ್ತದೆ. ಇಂತವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಾಗ ಮಾತ್ರ ಮಕ್ಕಳಿಗೆ ಮೋಸ ನಿಲ್ಲುತ್ತದೆ. ಇಂತ ಕಾರ್ಯಕರ್ತೆ ವಿರುದ್ದ ಇಲಾಖೆ ಕ್ರಮ ಕೈಗೊಂಡು ಅಮಾನತು ಮಾಡಿದರೆ ಆ ಮಕ್ಕಳಿಗೆ ನ್ಯಾಯ ಸಲ್ಲುತ್ತದೆ.
ಅಂಬಿಕಾ, ಮಗುವಿನ ಪಾಲಕಿ.ಹೋರಿತಿಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತಿತ್ತರ ಆಹಾರ ನೀಡದೆ ಚಂಚನೆ ಮಾಡುತ್ತಿದ್ದ ಕಾರ್ಯ ಕರ್ತೆ ವಿರುದ್ಧ ಪಾಲಕರು ಮತ್ತು ಗ್ರಾಮಸ್ಥರು ತರಾಟೆಗೆ ತೆಗೆದುಕೊಡ ವಿಷಯ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿ ಕಾರಿ ಶಿವಪ್ರಕಾಶ್‌ಗೆ ತಿಳಿದ ತಕ್ಷಣ ಗ್ರಾಮದ ಅಂಗನವಾಡಿಗೆ ಆಗಮಿಸಿ ಘಟನೆ ಮಾಹಿತಿ ಪಡೆದು, ಅಂಗನವಾಡಿ ಟೀಚರ್ ಗೆ ತರಾಟೆ ತೆಗೆದುಕೊಂಡರು.ಅಂಗನವಾಡಿ ಮೇಲ್ವಿಚಾರಕಿ ಅನಿತಾ, ಪಾಲಕರಾದ ಸವಿತಾ, ಮಂಜಮ್ಮ, ಸೀಮದು, ಸಂತೋಷ್, ರಮೇಶ್, ಸುನಿತಾ, ಸುಪ್ರಿತಾ, ಸರಸ್ವತಿ, ಭವಾನಿ ಸೇರಿದಂತೆ ಗ್ರಾಮಸ್ಥರು ಇದ್ದರು.-- ಬಾಕ್ಸ್--
ಸರ್ಕಾರ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು, ಯಾವುದೇ ಕುಂದು ಕೊರತೆ ಬಾರದಂತೆ ಸಮರ್ಪಕ ಸೌಲಭ್ಯ ಒದಗಿಸಿದೆ. ಜೊತೆಗೆ ಕಾರ್ಯಕರ್ತೆಯರಿಗೂ ಗೌರವ ಧನ ನೀಡಿದೆ. ಇಷ್ಟಾದರೂ ಸಮರ್ಪಕ ಸೇವೆ ನೀಡದೆ ನಿರ್ಲಕ್ಷ ತೋರುವುದು ಅಪರಾಧ. ಇಲ್ಲಿವರೆಗೆ ಮಕ್ಕಳಿಗೆ ಮೊಟ್ಟೆ ನೀಡದ್ದಕ್ಕೆ ತಗಲುವ ಖರ್ಚನ್ನು ಬರಿಸಬೇಕು. ಜೊತೆಗೆ ಗ್ರಾಮಸ್ಥರ ಮುಂದೆ ಕ್ಷಮೆಯಾಚಿಸುವಂತೆ ಸೂಚಿಸಿ, ತಕ್ಷಣದಿಂದ ಇಲ್ಲಿ ಕಾರ್ಯಕರ್ತರ ಸೇವೆಯಿಂದ ಬಿಡುಗಡೆಗೊಳಿಸಿ ಬೀರೂರಿ ಬಳ್ಳಾರಿ ಕ್ಯಾಂಪಿಗೆ ವರ್ಗಾವಣೆ ಮಾಡಿದರು. ತನಿಖೆ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.ಶಿವಪ್ರಕಾಶ್
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿ ಕಾರಿ19 ಬೀರೂರು 1ಬೀರೂರು ಹೋಬಳಿ ಜೋಡಿತಿಮ್ಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ಹೋರಿತಿಮ್ಮನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ.