ಹಾರೋಹಳ್ಳಿ: ವೈವಿಧ್ಯಮಯ ನೃತ್ಯ ಪ್ರದರ್ಶನ, ವೇಷ ಭೂಷಣ, ಗೀತ ಗಾಯನ, ಸಾಂಶ್ಕೃತಿ ಚಟುವಟಿಕೆ ಸ್ಪರ್ಧೆ, ಚಿನ್ನರ ಪ್ರತಿಭೆ ಅನಾವರಣ, ಗಮನ ಸೆಳೆದ ಶಾಲಾ ಮಕ್ಕಳ ಕಾರ್ಯಕ್ರಮದಲ್ಲಿ ಮಕ್ಕಳ ಕಲರವ, ಪೋಷಕರ ಕರತಾಳ.
ಕಾರ್ಯಕ್ರಮದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಶಾಸಕ ಇಕ್ಬಾಲ್ ಹುಸೇನ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರವರ ಕನಸಿನ ಕನಕೋತ್ಸವ ಸಮಾರಂಭದ ಅಂಗವಾಗಿ ರಾಮನಗರ ತಾಲೂಕಿನಲ್ಲಿ ರಾಮೋತ್ಸವ ನಡೆಯುತ್ತಿದೆ. ಇದರಲ್ಲಿ ಹಾರೋಹಳ್ಳಿ ಮತ್ತು ಮರಳವಾಡಿ ಭಾಗದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿ ಕಾರ್ಯಕ್ರಮ, ವಿವಿಧ ವೇಷಭೂಷಣೆ ಸ್ಪರ್ಧೆಗಳು ನಡೆಯುತ್ತಿವೆ. ಇವು ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಅನುಕೂಲವಾಗುತ್ತದೆ ಎಂದರು.
ಇಂದು ಸಾವಿರಾರು ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ನಾವು ಬಲಿಷ್ಠವಾಗಿದ್ದೇವೆ ಎಂದು ಸಾಬೀತು ಪಡಿಸಿದ್ದಾರೆ. ಪುಟಾಣಿಗಳ ವೇಷಭೂಷಣ ಹಾಗೂ ನೃತ್ಯ ಗಾಯನ ನನಗೆ ಸಂತೋಷವನ್ನು ಉಂಟು ಮಾಡಿದೆ. ರಾಮೋತ್ಸವದಂತಹ ಕಾರ್ಯಕ್ರಮದಲ್ಲಿ ನೃತ್ಯ ಮಾಡಲು ಪುಟ್ಟಪುಟ್ಟ ಹೆಜ್ಜೆ ಇಟ್ಟು ಎಲ್ಲರನ್ನು ಮಕ್ಕಳು ಖುಷಿ ಪಡಿಸಿದ್ದಾರೆ. ಇದು ಯಾವುದೇ ಭೇದಭಾವವಿಲ್ಲದ ವಾತಾವರಣ ಸೃಷ್ಟಿಸಿದೆ ಎಂದು ಹೇಳಿದರು.ಚಿಣ್ಣರಲ್ಲಿ ಹಾಗೂ ಪೋಷಕರಲ್ಲಿ ಜಾನಪದ ಕಲೆ, ದೇಶಭಕ್ತಿ ಮೂಡಿಸುವ ಹಾಗೂ ಪಹಾನ್ ಪುರುಷರ ವಿಚಾರಧಾರೆಯನ್ನು ಅರಿಯುವಂತೆ ಮಾಡುವ ಸಣ್ಣ ಪ್ರಯತ್ನ ಯಶಸ್ವಿಯಾಗಿದೆ. ಇನ್ನು ಪ್ರತಿ ಗ್ರಾಮದಲ್ಲಿ ರಂಗೋಲೆ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಲ್ಲಾ ಸ್ಪರ್ಧಿಗಳಿಗೂ ಬಹುಮಾನವಿರುತ್ತದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಮುಖಂಡರಾದ ಜೆ.ಸಿ.ಬಿ ಅಶೋಕ್, ಬೊಮುಲ್ ಹರೀಷ್, ಬಾಲಾಜಿ, ಮೋಹನ್ ಒಳ್ಳ, ರವಿ, ನಿಯಮತ್ ಉಲ್ಲಾ, ಸೊಂಟೇನಹಳ್ಳಿ ದಿನೇಶ್, ಜಕ್ಕಸಂದ್ರ ರವಿ ಸೇರಿದಂತೆ ಅನೇಕ ಮುಖಂಡರು, ವಿವಿಧ ಶಾಲೆಯ ಶಿಕ್ಷಕರು, ಸಾವಿರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.(ಒಂದು ಫೋಟೋ ಪ್ಯಾನಲ್‌ಗೆ ಬಳಸಿ)
15ಕೆಆರ್ ಎಂಎನ್ 5,6.ಜೆಪಿಜಿ5. ಹಾರೋಹಳ್ಳಿ ಪಟ್ಟಣದಲ್ಲಿ ರಾಮೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
6.ಸಾಂಸ್ಕೃತಿ ನೃತ್ಯದಲ್ಲಿ ಗಮನ ಸೆಳೆದ ಪುಟಾಣಿಗಳೊಂದಿಗೆ ಇಕ್ಬಾಲ್ ಹುಸೇನ್ ಸಂತಸ ಹಂಚಿಕೊಂಡರು.