ತಂದೆಗೆ ತಾಯಿಯ ಅಂತಿಮ ದರ್ಶನ ಮಾಡಿಸಲು ಮಕ್ಕಳ ಪರದಾಟ..!

KannadaprabhaNewsNetwork |  
Published : Apr 15, 2025, 12:52 AM IST
೧೪ಕೆಎಂಎನ್‌ಡಿ-೪ಸಾಕಮ್ಮ | Kannada Prabha

ಸಾರಾಂಶ

ಗ್ರ್ಯಾಂಗ್ರೀನ್‌ನಿಂದ ಕಾಲು ಕಳೆದುಕೊಂಡ ಪತ್ನಿ, ಮನನೊಂದು ಮನೆಬಿಟ್ಟು ಹೋದ ಪತಿರಾಯ. ಇತ್ತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹೆಂಡತಿ. ತಾಯಿಯ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸಿ ಅಂತಿಮ ದರ್ಶನಕ್ಕೆ ಕರೆತರಲು ಮಕ್ಕಳ ಪರದಾಟ. ಇಂತಹದೊಂದು ಮನಕಲಕುವ ಘಟನೆ ತಾಲೂಕಿನ ಜೀಗುಂಡಿ ಪಟ್ಟಣದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ರ್ಯಾಂಗ್ರೀನ್‌ನಿಂದ ಕಾಲು ಕಳೆದುಕೊಂಡ ಪತ್ನಿ, ಮನನೊಂದು ಮನೆಬಿಟ್ಟು ಹೋದ ಪತಿರಾಯ. ಇತ್ತ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಹೆಂಡತಿ. ತಾಯಿಯ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸಿ ಅಂತಿಮ ದರ್ಶನಕ್ಕೆ ಕರೆತರಲು ಮಕ್ಕಳ ಪರದಾಟ. ಇಂತಹದೊಂದು ಮನಕಲಕುವ ಘಟನೆ ತಾಲೂಕಿನ ಜೀಗುಂಡಿ ಪಟ್ಟಣದಲ್ಲಿ ನಡೆದಿದೆ.

ನಲವತ್ತೈದು ವರ್ಷಗಳ ದಂಪತಿಯ ದಾಂಪತ್ಯ ಜೀವನಕ್ಕೆ ಮಾರಕವಾಗಿದ್ದು ಗ್ಯಾಂಗ್ರೀನ್. ಈ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದವರು ಸಾಕಮ್ಮ (೬೭), ಪತ್ನಿಯ ಸ್ಥಿತಿಯನ್ನು ನೋಡಲಾಗದೆ ಮನೆಬಿಟ್ಟು ಹೋದ ಪತಿರಾಯ ಬೋರಯ್ಯ. ಸಾಕಮ್ಮ ಅವರಿಗೆ ಇತ್ತೀಚೆಗಷ್ಟೇ ಗ್ಯಾಂಗ್ರೀನ್ ಕಾಣಿಸಿಕೊಂಡಿತ್ತು.

ಏಪ್ರಿಲ್ ೮ರಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಸಾಕಮ್ಮನ ಕಾಲು ತೆಗೆದಿದ್ದರು. ಪತ್ನಿಗೆ ಇಂತಹ ಸ್ಥಿತಿ ಒದಗಿಬಂತಲ್ಲ ಎಂದು ಮನನೊಂದ ಬೋರಯ್ಯ ಮರುದಿನವೇ ಮನೆಯಿಂದ ಕಾಣೆಯಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾಕಮ್ಮ ನಿನ್ನೆಯಷ್ಟೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇತ್ತ ಸಾಕಮ್ಮ ಅವರ ಅಂತಿಮ ದರ್ಶನಕ್ಕೂ ಸಿಗದ ಬೋರಯ್ಯನಿಗಾಗಿ ಮಕ್ಕಳ ಹುಡುಕಾಟ. ಎಲ್ಲೆಡೆ ಹುಡುಕಾಡಿದರೂ ಬೋರಯ್ಯ ಸಿಗದೆ ತಾಯಿಯನ್ನು ಕಳೆದುಕೊಂಡು ತಂದೆಯೂ ನಾಪತ್ತೆಯಾಗಿರುವುದಕ್ಕೆ ಮಕ್ಕಳು ರೋಧನ ಎಲ್ಲರ ಮನಕಲಕುವಂತಿತ್ತು.

ಮಹಿಳೆಯ ಕತ್ತಿನಲ್ಲಿದ್ದ ಸರ ಕಿತ್ತು ಪರಾರಿ

ಮಂಡ್ಯ:

ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ ಸರ ಕಿತ್ತು ಪರಾರಿಯಾಗಿರುವ ಘಟನೆ ನಗರದ ಕಲ್ಲಹಳ್ಳಿಯ ಎಪಿಎಂಸಿ ಬಳಿ ಬೆಳಗ್ಗೆ ನಡೆದಿದೆ.

ಕಲ್ಲಹಳ್ಳಿ ಬಡಾವಣೆಯ ನಾಗೇಶ್ ಅವರ ಪತ್ನಿ ಸಿ.ಎಸ್.ಕಾವ್ಯಶ್ರೀ ಸರ ಕಳೆದುಕೊಂಡವರು. ಸೋಮವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಮಾರುಕಟ್ಟೆಯಲ್ಲಿ ತರಕಾರಿ ತೆಗೆದುಕೊಂಡು ಬರುತ್ತಿದ್ದಾಗ ಅತಿ ವೇಗವಾಗಿ ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಕತ್ತಿನಲ್ಲಿ 35 ಗ್ರಾಂ ತೂಕದ 1.75 ಲಕ್ಷ ರು. ವೌಲ್ಯದ ಚಿನ್ನದ ತಾಳಿ ಜೊತೆಯಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ