ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳಲ್ಲಿ ಓದಿನ ಜೊತೆಗೆ ವ್ಯವಹಾರ ಜ್ಞಾನ ಹೆಚ್ಚಿಸಲು ಮಕ್ಕಳ ಸಂತೆ ಸಹಕಾರಿಯಾಗಿದೆ ಎಂದು ಮುಖ್ಯ ಶಿಕ್ಷಕಿ ಲತಾ ತಿಳಿಸಿದರು.ಸಮೀಪದ ಬೊಪ್ಪಸಮುದ್ರ ಗ್ರಾಮದಲ್ಲಿ ನಡೆದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ಸಂತೆ ಮೇಳಗಳು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ವೃದ್ಧಿಸುತ್ತವೆ. ಅಳತೆ ಮತ್ತು ಪ್ರಮಾಣಗಳ ಅರಿವು ಮೂಡುತ್ತದೆ ಎಂದರು.
ಬಂಡವಾಳ ಹೂಡಿಕೆ ಮತ್ತು ಲಾಭ, ನಷ್ಟಗಳ ಬಗ್ಗೆ ತಿಳಿವಳಿಕೆ, ಸಂವಹನ ಕೌಶಲ್ಯದ ವೃದ್ಧಿ, ವಸ್ತುಗಳ ಬೆಲೆ ನಿರ್ಧಾರ, ಕೌಶಲ್ಯ, ಒಂದು ಕಾರ್ಯದ ಹಿಂದಿನ ಶ್ರಮವನ್ನು ಅರ್ಥೈಸಿಕೊಳ್ಳುವ ಉದ್ದೇಶದಿಂದ ಮಕ್ಕಳ ಸಂತೆ ಆಯೋಜಿಸಲಾಗಿದೆ ಎಂದರು.ವ್ಯವಹಾರದಲ್ಲಿ ಗಣಿತದ ಮೂಲ ಕ್ರಿಯೆಗಳ ಬಳಕೆ, ನಿತ್ಯ ಜೀವನದಲ್ಲಿ ಗಣಿತ ಬಳಕೆ ಸೇರಿದಂತೆ ಹಲವಾರು ಪ್ರಯೋಜನಗಳು ಮಕ್ಕಳ ಸಂತೆಯಿಂದ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಲಿದೆ ಎಂದರು.
ಮಕ್ಕಳ ವ್ಯಾಪಾರವನ್ನು ಕಂಡ ಪೋಷಕರು ಸಾರ್ವಜನಿಕರು ಖುಷಿಪಟ್ಟರು. ಹಣ್ಣು, ಸೊಪ್ಪು ತರಕಾರಿ, ಬೊಂಡ, ಬಜ್ಜಿ, ಚಿರ್‌ಮುರಿ, ತೆಂಗಿನಕಾಯಿ, ಮಂಡಕ್ಕಿ, ಪಾನಿಪೂರಿ, ಜ್ಯೂಸ್, ದಿನಸಿ ಸಾಮಗ್ರಿ ಸೇರಿದಂತೆ ಹಲವು ವಸ್ತುಗಳು ವಿದ್ಯಾರ್ಥಿಗಳು ಮಾರಾಟ ಮಾಡಿದರು. ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಸಾಮಾಗ್ರಿಗಳನ್ನು ಖರೀದಿ ಮಾಡುವ ಮೂಲಕ ಮಕ್ಕಳ ಹುಮ್ಮಸ್ಸಿಗೆ ಪುಷ್ಟಿ ನೀಡಿದರು.ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಸಂತೋಷ, ಶಿವರಾಜು, ಪುಟ್ಟರಾಮು, ಅನಿಲ್‌ಕುಮಾರ್, ಅನಂತ, ಶ್ರೀಕಂಠ, ಕುಮಾರ್ ಸೇರಿದಂತೆ ಶಿಕ್ಷಕರು ಇದ್ದರು.
ಸಿ.ಹೊನ್ನಯ್ಯಗೆ ಪಿಎಚ್.ಡಿ ಪದವಿಮಳವಳ್ಳಿ: ತಾಲೂಕಿನ ಕುರುಬನಪುರ ಗ್ರಾಮದ ಮಲೆನಾಡು ತಾಂತ್ರಿಕ ಮಹಾ ವಿದ್ಯಾಲಯ ಹಾಸನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಿ.ಹೊನ್ನಯ್ಯ ಅವರು ಡಾ.ಎಂ.ಎಸ್.ಶ್ರೀನಾಥ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸ್ಟಡಿ ಆಫ್ ಮೆಕ್ಯಾನಿಕಲ್ ಅಂಡ್ ಟ್ರೈಬೊಲಾಜಿಕಲ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಮೈಕ್ರೋವೆವ್ ಪ್ರೊಸೆಸ್ಡ್ ಎಎಲ್-ಎಸ್‌ಐಸಿ ಮೆಟಲ್ ಮ್ಯಾಟ್ರಿಕ್ಸ್ ಕಾಂಪೋಸಿಟ್ಸ್ ಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.