ತೋಳೂರುಶೆಟ್ಟಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ

KannadaprabhaNewsNetwork |  
Published : Feb 07, 2026, 03:45 AM IST
ತೋಳೂರುಶೆಟ್ಟಳ್ಳಿಯಲ್ಲಿ ಮಕ್ಕಳ ಗ್ರಾಮ ಸಭೆ: ವಿದ್ಯಾರ್ಥಿಗಳಿಂದ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸಮಸ್ಯೆಗಳ ಕುರಿತು ಮನವಿ | Kannada Prabha

ಸಾರಾಂಶ

ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಗ್ರಾಮ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ, ಬೆಂಗಳೂರು ಸಿ.ಎಂ.ಸಿ.ಎಂ ಸಂಸ್ಥೆ ಹಾಗೂ ನಾವು ಪ್ರತಿಷ್ಠಾನ ಕೊಡಗು ಸಹಯೋಗದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಗ್ರಾಮ ಸಭೆ ನಡೆಯಿತು. ವಿದ್ಯಾರ್ಥಿಗಳಾದ ಯಶ್ವಂತ್, ಸೌಮ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ತೋಳೂರು ಶೆಟ್ಟಳ್ಳಿ ಶಾಲೆ ವಿದ್ಯಾರ್ಥಿ ಸಂಭ್ರಮ್ ಮಾತನಾಡಿ, ಶಾಲೆಗೆ ತೆರಳುವ ರಸ್ತೆಯ ಗುಂಡಿಮಯವಾಗಿದ್ದು ದುರಸ್ತಿ ಮಾಡಿಕೊಡಿ ಎಂದು ಬೇಡಿಕೆ ಇಟ್ಟರು. ಶಾಲೆಯ ಸುತ್ತ ಬೇಲಿ ಹಾಕಬೇಕು. ಕಾಡು ಕಡಿದು ಸರಿಪಡಿಸಬೇಕೆಂದು ತನುಶ್ರೀ ಮತ್ತು ಪುಣ್ಯ ಮನವಿ ಮಾಡಿದರು. ಶಾಲೆಯ ಅಭಿವೃದ್ದಿಗೆ ಅನುದಾನ ಕಲ್ಪಿಸುವ ಭರವಸೆಯನ್ನು ಪಿಡಿಒ ಹರೀಶ್ ನೀಡಿದರು. ಉಪಾಧ್ಯಕ್ಷೆ ಆರತಿ,‌ ಎಸ್‌ಡಿಎಂಸಿ ಅಧ್ಯಕ್ಷ ಮೋಹನ್ ಕುಮಾರ್, ಮುಖ್ಯ ಶಿಕ್ಷಕಿಯರಾದ ವಾರಿಜಮಣಿ, ಎಸ್.ಜೆ.ಗಂಗಮ್ಮ ಪಂಚಾಯಿತಿ ಸದಸ್ಯರಾದ ಮೋಹಿತ್ ತಿಮ್ಮಯ್ಯ, ಎಂ.ಕೆ.ರುದ್ರಪ್ಪ, ಡಿ.ಎ.ನವೀನ್, ದಿವ್ಯ, ಉಷಾ, ನಾವು ಪ್ರತಿಷ್ಠಾನ ಸಂಸ್ಥೆಯ ಗೌತಮ್ ಕಿರಗಂದೂರು, ಸುಮನಾ, ಪಂಚಾಯಿತಿ ಕಾರ್ಯದರ್ಶಿ ಜವರಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ