ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು

KannadaprabhaNewsNetwork |  
Published : May 29, 2025, 02:01 AM IST
೨೮ಕೆಎಲ್‌ಆರ್-೫ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಎರಡು ತಿಂಗಳು ನಡೆ ಬೇಸಿಗೆ ಕ್ರೀಡಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ  ಜಿಲ್ಲಾ ಪ್ಯಾರಾ ಒಲಂಪಿಕ್ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ ಮಾತನಾಡಿದರು. | Kannada Prabha

ಸಾರಾಂಶ

ಕ್ರೀಡೆಗಳು ದೈನಂದಿನ ಬದುಕಿನ ಭಾಗವಾಗಿದೆ, ಬದಲಾದ ಆಹಾರ ಪದ್ಧತಿಯಿಂದ ಇಂದು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಇದನ್ನು ತಡೆಯಲು ಮತ್ತು ಉತ್ತಮ ಜೀವನ ನಡೆಸಲು ಕ್ರೀಡೆ, ವ್ಯಾಯಾಮ ಅಗತ್ಯ ಎಂಬುದನ್ನು ಮಕ್ಕಳು ಅರಿಯಬೇಕು. ಕ್ರೀಡೆಯೂ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಪಠ್ಯದಷ್ಟೇ ಕ್ರೀಡೆಗಳಿಗೂ ಪ್ರೋತ್ಸಾಹ ಅಗತ್ಯ.

ಕನ್ನಡಪ್ರಭ ವಾರ್ತೆ ಕೋಲಾರಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆಯಾಗಲು ಶಿಕ್ಷಣದೊಂದಿಗೆ ಕ್ರೀಡೆಗಳಿಗೆ ಒತ್ತು ನೀಡಿದಲ್ಲಿ ಕ್ರಿಯಾಶೀಲತೆ ಸಾಧ್ಯ ಎಂದು ಜಿಲ್ಲಾ ಪ್ಯಾರಾ ಒಲಂಪಿಕ್ ಕ್ರೀಡಾ ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ಜಯದೇವ್ ತಿಳಿಸಿದರು.ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಯುಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಎರಡು ತಿಂಗಳು ನಡೆದ ಬೇಸಿಗೆ ಕ್ರೀಡಾ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.ಆರೋಗ್ಯ ರಕ್ಷಣೆಗೆ ಕ್ರೀಡೆ

ಕ್ರೀಡೆಗಳು ದೈನಂದಿನ ಬದುಕಿನ ಭಾಗವಾಗಿದೆ, ಬದಲಾದ ಆಹಾರ ಪದ್ಧತಿಯಿಂದ ಇಂದು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಇದನ್ನು ತಡೆಯಲು ಮತ್ತು ಉತ್ತಮ ಜೀವನ ನಡೆಸಲು ಕ್ರೀಡೆ, ವ್ಯಾಯಾಮ ಅಗತ್ಯ ಎಂಬುದನ್ನು ಮಕ್ಕಳು ಅರಿಯಬೇಕು. ಕ್ರೀಡೆಯೂ ಸಮಗ್ರ ಶಿಕ್ಷಣದ ಭಾಗವಾಗಿದ್ದು, ಪಠ್ಯದಷ್ಟೇ ಕ್ರೀಡೆಗಳಿಗೂ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಜಿಲ್ಲಾ ಯುವಜನಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಕ್ರೀಡೆಗಳಿಂದ ಜೀವನದಲ್ಲಿ ಶಿಸ್ತು, ಶ್ರದ್ಧೆ ಹೆಚ್ಚುತ್ತದೆ, ಮನಸ್ಸು ಚಂಚಲತೆಯಿಂದ ದೂರವಾಗಿ ಉತ್ತಮ ಅಭ್ಯಾಸಗಳು ಮೈಗೂಡಿಸಿಕೊಳ್ಳಲು ಸಹಕಾರ ನೀಡುತ್ತದೆ ಎಂದು ತಿಳಿಸಿದರು.

ಕ್ರೀಡೆಯಲ್ಲಿ ಸಾಧನೆ ಮಾಡಿ

ಮಕ್ಕಳ ಆಸಕ್ತಿಗೆ ಅನುಗುಣವಾಗಿ ಅವರನ್ನು ಶೈಕ್ಷಣಿಕ ಹಾದಿಗೆ ಕಳುಹಿಸಿ, ಜತೆಗೆ ಮಕ್ಕಳ ಕ್ರೀಡಾಸಕ್ತಿಯನ್ನು ಪರಿಗಣಿಸಿ ಅವರು ಇಷ್ಟಪಡುವ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಲು ಪ್ರೇರೇಪಿಸಿ ಎಂದ ಅವರು, ಕ್ರೀಡಾಚಟುವಟಿಕೆಗಳು ಬದುಕಿನ ಭಾಗವಾಗಿದೆ ಎಂಬುದನ್ನು ಮರೆಯಬಾರದು ಎಂದರು.

ಕ್ರೀಡಾ ಶಿಬಿರಗಳ ಮೂಲಕ ಮಕ್ಕಳು ಬೇಸಿಗೆ ರಜೆಯಲ್ಲಿ ಸಂತಸದಿಂದ ಕಳೆಯವ ವಾತಾವರಣ ಸೃಷ್ಟಿಸುವಲ್ಲಿ ಇಲಾಖೆ ಕೆಲಸ ಮಾಡಿದೆ, ಮಕ್ಕಳು ದುಶ್ಚಟಗಳಿಗೆಬಲಿಯಾಗದೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದ್ದು, ಇದರ ಪ್ರಯೋಜನ ಹಲವಾರು ಮಕ್ಕಳು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟುಗಳಾದ ಎಚ್.ಜಗನ್, ಆರ್.ಶ್ರೀನಿವಾಸನ್, ಗೌಸ್‌ಖಾನ್, ರಾಜೇಶ್, ಪುರುಷೋತ್ತಮ್, ನಂದೀಶ್ ಕುಮಾರ್, ಶಿವಪ್ಪ, ತರಬೇತುದಾರ ವೆಂಕಟೇಶ್ ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ