ಕಲಿಯುವ ಹಂತದಲ್ಲಿ ಮಕ್ಕಳು ಸ್ವಂತಿಕೆ ಕಡೆ ಗಮನ ಹರಿಸಬೇಕು: ನಿಂಗಮ್ಮ ಕರೆ

KannadaprabhaNewsNetwork |  
Published : Feb 13, 2025, 12:48 AM IST
12ಕೆಎಂಎನ್ ಡಿ16 | Kannada Prabha

ಸಾರಾಂಶ

ವಿದ್ಯಾರ್ಥಿಗಳಿಗೆ ಬದುಕನ್ನು ಎದುರಿಸುವ ಧೈರ್ಯ ಹಾಗೂ ಕಲಿಕಾ ಬದ್ಧತೆ ಇರಬೇಕು. ನಾನು ಕೆ.ಆರ್.ಪೇಟೆ ಪಟ್ಟಣದಲ್ಲಿ ಓದಿ ಬೆಳೆದವಳು. ನನಗೆ ಅರ್ಥವಾಗದಿದ್ದರೆ ಶಿಕ್ಷಕರನ್ನು ಧೈರ್ಯವಾಗಿ ಕೇಳುತ್ತಿದ್ದೆ. ವಿದ್ಯಾರ್ಥಿಗಳು ಹಿಂಜರಿಕೆಯ ಸ್ವಭಾವ ಬೆಳೆಸಿಕೊಳ್ಳದೆ ಅರ್ಥವಾಗದ ವಿಷಯಗಳನ್ನು ಧೈರ್ಯವಾಗಿ ಶಿಕ್ಷಕರ ಬಳಿ ಮತ್ತೆ ಕೇಳಿ ಅರಿಯಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಲಿಯುವ ಹಂತದಲ್ಲಿಯೇ ಮಕ್ಕಳು ಸ್ವಂತಿಕೆ ಕಡೆ ಗಮನ ಹರಿಸಬೇಕು ಎಂದು ರಾಜ್ಯದ ಮೊಟ್ಟ ಮೊದಲ ಬಸ್ ಚಾಲಕಿ ಮಹಿಳೆ ನಿಂಗಮ್ಮ ಕರೆ ನೀಡಿದರು.

ತಾಲೂಕಿನ ಶೀಳನೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 2005ರಲ್ಲಿ ರಾಜ್ಯದ ಮೊಟ್ಟ ಮೊದಲ ಬಸ್ ಚಾಲಕಿಯಾಗಿ ಆಯ್ಕೆಯಾಗಿ ಉತ್ತರ ಕರ್ನಾಟಕ ಹುಮ್ನಾಬಾದ್ ತಾಲೂಕಿನಲ್ಲಿ ಸೇವೆ ಆರಂಭಿಸಿ ರಾಜ್ಯದ ಗಮನ ಸೆಳೆದ ತಮ್ಮ ಕರ್ತವ್ಯದ ದಿನಗಳನ್ನು ಸ್ಮರಿಸಿದರು.

ವಿದ್ಯಾರ್ಥಿಗಳಿಗೆ ಬದುಕನ್ನು ಎದುರಿಸುವ ಧೈರ್ಯ ಹಾಗೂ ಕಲಿಕಾ ಬದ್ಧತೆ ಇರಬೇಕು. ನಾನು ಕೆ.ಆರ್.ಪೇಟೆ ಪಟ್ಟಣದಲ್ಲಿ ಓದಿ ಬೆಳೆದವಳು. ನನಗೆ ಅರ್ಥವಾಗದಿದ್ದರೆ ಶಿಕ್ಷಕರನ್ನು ಧೈರ್ಯವಾಗಿ ಕೇಳುತ್ತಿದ್ದೆ. ವಿದ್ಯಾರ್ಥಿಗಳು ಹಿಂಜರಿಕೆಯ ಸ್ವಭಾವ ಬೆಳೆಸಿಕೊಳ್ಳದೆ ಅರ್ಥವಾಗದ ವಿಷಯಗಳನ್ನು ಧೈರ್ಯವಾಗಿ ಶಿಕ್ಷಕರ ಬಳಿ ಮತ್ತೆ ಕೇಳಿ ಅರಿಯಬೇಕು ಎಂದರು.

ನಾನು ಮೊದಲು ಬಸ್ ಡ್ರೈವರ್ ಆದಾಗ ನನ್ನ ಕುಟುಂಬದವರು ಇದನ್ನು ಅವಮಾನ ಎಂದು ಭಾವಿಸಿದ್ದರು. ಆದರೆ, ಪ್ರಥಮ ಬಸ್ ಚಾಲಕಿಯಾದ ನನ್ನನ್ನು ಸಮಾಜ ಗುರುತಿಸಿ ಸನ್ಮಾನಿಸಲಾರಂಭಿಸಿದಾಗ ನನ್ನ ಮನೆಯವರಿಗೆ ಇಂತದ್ದೂ ಒಂದು ಸಾಧನೆಯಿದೆ ಎನ್ನುವುದು ತಿಳಿಯಿತು ಎಂದರು.

ನನಗೆ ಸೈಕಲ್ ಕಲಿಸಲೂ ನಿರಾಕರಿಸುತ್ತಿದ್ದ ನನ್ನ ಸಹೋದರ ನಾನು ಬಸ್ ಓಡಿಸುವಾಗ ಅವನೇ ಮುಂದೆ ಬಂದು ನಿಂತಿದ್ದ. ವಿದ್ಯಾರ್ಥಿಗಳು ಸಾಧಕರಾಗಿ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಉಪಕಾರಿಗಳಾಗಿ ಬದುಕುಬೇಕೆಂದರು.

ಈ ವೇಳೆ ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಎಲ್.ಮಂಜುನಾಥ್, ಕಿಕ್ಕೇರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ರವೀಂದ್ರ, ಉಪನ್ಯಾಸಕರುಗಳಾದ ವಿನಾಯಕ್, ಎಂ.ಸಿ.ಮಹೇಶ್, ಎಂ.ಎಲ್.ವೆಂಕಟೇಶ್, ಜಿ.ರಶ್ಮಿ, ಮುಖ್ಯ ಶಿಕ್ಷಕಿ ನೀಲಮ್ಮ ಇದ್ದರು.

ಫೆ.14 ರಂದು ‘ಕಾಳಿ’ ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವ ಪ್ರವಾಸೋದ್ಯಮ ದಿನದ ನೆನಪಿನಲ್ಲಿ ಜಿಲ್ಲಾಡಳಿತ ವತಿಯಿಂದ ಪ್ರಸಿದ್ಧ ಆತಗೂರು ‘ಕಾಳಿ’ ಹೆಸರಿನ ನಾಯಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪನಾ ಸಮಾರಂಭ ಹಾಗೂ ಕೆರೆ ಕಟ್ಟೆಗಳ ಅಳಿವು-ಉಳಿವು ಕುರಿತು ಅಧಿಕಾರಿಗಳೊಂದಿಗೆ ಒಂದು ಚಿಂತಾವಲೋಕನ ಕಾರ್ಯಕ್ರಮವನ್ನು ಫೆ.14ರಂದು ಬೆಳಗ್ಗೆ 10.30 ಗಂಟೆಗೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾಧಿಕಾರಿ ಡಾ.ಕುಮಾರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ಸಂಘ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಲೇಖಕರು ಹಾಗೂ ಸಂಶೋಧಕ ತೈಲೂರು ವೆಂಕಟಕೃಷ್ಣ ಅವರು ಶಾಸನದ ಮಹತ್ವವನ್ನು ಕುರಿತು ಪ್ರಾಸ್ತಾವಿಕ ಮಾತನಾಡುವರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಕೆ.ಎಚ್.ಗೋಪಾಲಕೃಷ್ಣೇಗೌಡ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್ ಅವರನ್ನು ಗೌರವಿಸಲಾಗುವುದು.

ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ ಆಗಮಿಸಲಿದ್ದು, ಇತಿಹಾಸ ಸಂಶೋಧಕರಾದ ಮಹಮ್ಮದ್ ಕಲೀಂ ಉಲ್ಲಾ, ಪ್ರೊ.ಸಿ.ಮಹದೇವ್ ಮತ್ತು ಹರವು ದೇವೇಗೌಡ ಭಾಗವಹಿಸುವರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ