ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು-ಪೂಜಾರ

KannadaprabhaNewsNetwork | Published : Mar 10, 2025 1:34 AM

ಸಾರಾಂಶ

. ಗದಗ ತಾಲೂಕಿನ ಲಕ್ಕುಂಡಿ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜಾ ಸಮಾರಂಭ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ರಂಗೋತ್ಸವ ಕಾರ್ಯಕ್ರಮಗಳು ಜರುಗಿದವು.

ಗದಗ: ಗದಗ ತಾಲೂಕಿನ ಲಕ್ಕುಂಡಿ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಸರಸ್ವತಿ ಪೂಜಾ ಸಮಾರಂಭ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಹಾಗೂ ರಂಗೋತ್ಸವ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಕೆ.ಎಸ್.ಪೂಜಾರ ಮಾತನಾಡಿ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಗಳಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದರು.

ಶಾಲೆಗೆ ಸುಮಾರು ಇಪ್ಪತ್ತು ಸಾವಿರ ರುಪಾಯಿ ಮೌಲ್ಯದ ಸಂಚಾರಿ ಧ್ವನಿವರ್ಧಕಗಳನ್ನು ಕೊಡುಗೆಯಾಗಿ ನೀಡಿದ ಮಹನೀಯರನ್ನು ಸನ್ಮಾನಿಸಿ ದಾನಿಗಳಿಂದ ಸರಕಾರಿ ಶಾಲೆಗಳು ಸಬಲೀಕರಣದತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.ದಾನಿಗಳಾದ ಲಲಿತಾ ಮುಸ್ಕಿನಭಾವಿ, ಶಾಂತವ್ವ ಆಲೂರ, ಜಯಶ್ರೀ ಬಿಳ್ಳಾಳ, ಮಾಂತೇಶ ಕುಂಬಾರ, ಮಹಾದೇವಪ್ಪ ಈಟಿ,ರಮೇಶ ಅಬ್ಬಿಗೇರಿ, ರಾಜೇಸಾಬ ಗುಡಗೇರಿ, ಶಿವಪ್ಪ ಕಳಸದ, ಮಹಮ್ಮದ್‌ರಫೀಕ್ ಕಲಾದಗಿ, ಮಂಜಣ್ಣ ಬೂದಿಹಾಳ ಹಾಗೂ 2024 ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಕೀರ್ತಿತಂದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಮುಖ್ಯೋಪಾಧ್ಯಾಯ ವಾಯ್,ಹೆಚ್. ತಕ್ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ಕುಂಬಾರ, ನಿವೃತ್ತ ಮುಖ್ಯೋಪಾಧ್ಯಾಯ ಸಿ.ಸಿ. ಕುರಹಟ್ಟಿ, ಶೋಭಾ ಮಲ್ಲಾಡದ, ಮಹಾದೇವಪ್ಪ ಈಟಿ, ಮಾಬೂಬಿ ಗುದಗನವರ, ಲಲಿತಾ ಮುಸ್ಕಿನಭಾವಿ, ಪಾರ್ವತಿ ಮಾಡಲಗೇರಿ, ಅನಸಮ್ಮ ಅಂಬಕ್ಕಿ, ಮಂಜುನಾಥ ಬೂದಿಹಾಳ, ಕುಬೇರಪ್ಪ ಬೆಂತೂರ, ರಾಜೇಸಾಬ ಗುಡಗೇರಿ, ರಮೇಶ ಅಬ್ಬಿಗೇರಿ ಭಾಗವಹಿಸಿದ್ದರು. ಗಾಯತ್ರಿ ಹಳ್ಳಿ ಸ್ವಾಗತಿಸಿದರು ಎಸ್.ಹೆಚ್. ಶೆಟ್ಟಿನಾಯಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ವ್ಹಿ. ಮ್ಯಾಗೇರಿ ವರದಿ ವಾಚಿಸಿದರು.ಜೆ.ಎಫ್. ಜೋತಿ ಬಹುಮಾನ ಕಾರ್ಯಕ್ರಮ ನಡೆಸಿದರು. ಜೆ.ವಿ. ಹಿರೇಮಠ, ಎಸ್.ಇ. ಹಿರೇಮಠ, ಎಸ್.ಎ.ಮುಂಡೆವಾಡಿ, ಎಮ್.ಎಮ್.ಮುನಶಿ ಉಪಸ್ಥಿತರಿದ್ದರು. ವಾಯ್ ವಾಯ್ ಬೆಟಗೇರಿ ನಿರೂಪಿಸಿದರು. ಎ.ಎಸ್.ಕಳಸದ ವಂದಿಸಿದರು.

Share this article