ಕನ್ನಡಪ್ರಭ ವಾರ್ತೆ ಹನುಮಸಾಗರ
ಸಮೀಪದ ಮನ್ನೇರಾಳ ಗ್ರಾಮದಲ್ಲಿ ಸೋಮವಾರ ನಡೆದ ಹನುಮಸಾಗರ ವಲಯ ಮಟ್ಟದ ಅಂಗನವಾಡಿ ಕೇಂದ್ರಗಳ ಪೌಷ್ಟಿಕತೆ ಅಭಿಯಾನದ ಸಮಾರೋಪದಲ್ಲಿ ಮಾತನಾಡಿದರು.
ಅಂಗನವಾಡಿ ಕಾರ್ಯಕರ್ತೆಯರು ಸೀಮಂತ ಕಾರ್ಯಕ್ರಮದ ಮೂಲಕ ಆರೋಗ್ಯದ ಬಗ್ಗೆ ಹಾಗೂ ಮುಂದಿನ ಶಿಶುಗಳ ಬೆಳವಣಿಗೆಯ ಬಗ್ಗೆ ಎಚ್ಚರಿಕೆ ನೀಡುವರು. ಮನೆಯಲ್ಲಿ ಒಂದು ಮಗು ನಿಭಾಯಿಸಲು ಆಗುವುದಿಲ್ಲ. ಕಾರ್ಯಕರ್ತೆಯರು ಯಾವುದೇ ವೇಳೆಯಲ್ಲಿ ನಾನಾ ಯೋಜನೆಗಳನ್ನು ಸರಿಪಡಿಸಿಕೊಂಡು ತಿದ್ದಿಕೊಂಡು ಹೋಗುತ್ತಾರೆ, ಅವರ ಕಾರ್ಯ ಶ್ಲಾಘನೀಯ. ತಾಯಂದಿರು ಅವರ ಮಾರ್ಗದರ್ಶನ ಪಡೆದು ಲಾಲನೆ, ಪಾಲನೆ ಹಾಗೂ ಪೋಷಣೆ ಮಾಡುವ ಕಾರ್ಯ ಮಾಡಬೇಕು ಎಂದರು.ಪೋಷಣ್ ಅಭಿಯಾನದ ತಾಲೂಕು ಸಂಯೋಜಕಿ ಭಾಗ್ಯಶ್ರೀ ಹೊಸಮನಿ ಮಾತನಾಡಿ, ಅಂಗನವಾಡಿಯಲ್ಲಿ ಅನ್ನಪ್ರಾಶನ, ಶಾಲಾ ಪೂರ್ವ ಶಿಕ್ಷಣ, ಸುಪೋಕ್ಷಣ, ಪೋಷಣ್ ಮಾಸಚಾರಣೆ ಇವೆ. ಇವು ವಾರ ಪೂರ್ತಿ ನಡೆಯುತ್ತವೆ. ಮಗು ಹುಟ್ಟಿದ ತಕ್ಷಣ ತಾಯಿ ಎದೆಹಾಲನ್ನು ಕುಡಿಸಬೇಕು. ಮಗುವಿಗೆ ಕಾಲಕಾಲಕ್ಕೆ ಚುಚ್ಚುಮದ್ದುಗಳನ್ನು ಹಾಕಬೇಕು ಎಂದರು.
ಪ್ರಮುಖರಾದ ರುದ್ರಗೌಡ ಗೌಡಪ್ಪನವರ, ಬಸವರಾಜ ಹಳ್ಳೂರ, ಮೇಘರಾಜ ವಜ್ಜಲ, ಯಲ್ಲಪ್ಪ ರಾಯಕರ, ಸಿದ್ದಪ್ಪ ಬೆನಕಟ್ಟಿ, ವೀರೇಶ ಬಡಿಗೇರ, ನಾಗಮ್ಮ, ಶಿವಪ್ಪ ಹುಣಿಶ್ಯಾಳ, ಮೇಘರಾಜ ಪಾವಿ, ಮಾಲತೇಶ ಆಡೂರ, ಯಲ್ಲಪ್ಪ ಗುಣನಾಳ, ಸಂಗಮೇಶ ಗುರಿಕಾರ, ತಾಲೂಕಿನ ಯಮನೂರಪ್ಪ ಕಬ್ಬರಗಿ, ಅಂಗನವಾಡಿ ಸಹಾಯಕಿಯರು, ನಿರ್ದೇಶಕರು ಇತರರು ಇದ್ದರು. ಇದೇ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸಿಮಂತ, ಮಕ್ಕಳಿಗೆ ಅನ್ನಪ್ರಾಶನ ನಡೆಯಿತು.