ಶಿಕ್ಷಣ, ಪ್ರತಿಭೆಯೊಂದಿಗೆ ಮಕ್ಕಳು ಹಿರಿಯರನ್ನು ಗೌರವಿಸಬೇಕು: ನಿರಂಜನ್‌

KannadaprabhaNewsNetwork |  
Published : Feb 07, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಮಕ್ಕಳಿಗೆ ಶಿಕ್ಷಣ, ಪ್ರತಿಭೆ ಎಷ್ಟು ಮುಖ್ಯವೋ, ಗುರು ಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಕಲಿಸುವುದು ಅಷ್ಟೇ ಮುಖ್ಯ ಎಂದು ಸಾದು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಎಂ.ಎಸ್.ನಿರಂಜನ್ ಹೇಳಿದರು.

ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2026ನೇ ಸಾಲಿನ ಸಾಂಸ್ಕೃತಿ ಹಬ್ಬಉದ್ಘಾಟನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಕ್ಕಳಿಗೆ ಶಿಕ್ಷಣ, ಪ್ರತಿಭೆ ಎಷ್ಟು ಮುಖ್ಯವೋ, ಗುರು ಹಿರಿಯರಿಗೆ ಗೌರವ ನೀಡುವುದನ್ನು ಮಕ್ಕಳಿಗೆ ಕಲಿಸುವುದು ಅಷ್ಟೇ ಮುಖ್ಯ ಎಂದು ಸಾದು ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಎಂ.ಎಸ್.ನಿರಂಜನ್ ಹೇಳಿದರು.

ನಗರದ ಕಲ್ಯಾಣನಗರದ ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ನಡೆದ 2026ನೇ ಸಾಲಿನ ಸಾಂಸ್ಕೃತಿ ಹಬ್ಬಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಪಾಠ ಎಷ್ಟು ಮುಖ್ಯವೋ ಪ್ರತಿಭೆಯೂ ಅಷ್ಟೇ ಮುಖ್ಯ.ಆ ಪ್ರತಿಭೆ ಪ್ರದರ್ಶನಕ್ಕೆ ಈ ರೀತಿ ಸಾಂಸ್ಕೃತಿಕ ಹಬ್ಬದ ವೇದಿಕೆಗಳು ಸಹಕಾರಿ ಎಂದರು.

ಪೋಷಕರ ವಿಶ್ವಾಸಕ್ಕೆ ಚ್ಯುತಿ ಬರದಂತೆ ವಿದ್ಯಾರ್ಥಿಗಳು ನಡೆದುಕೊಳ್ಳಬೇಕು. ತರಳಬಾಳು ಶಿಕ್ಷಣ ಸಂಸ್ಥೆಯನ್ನು ಲಾಭಗಳಿ ಸಲು ಆರಂಭಿಲ್ಲ. ಎಲ್ಲ ವರ್ಗದ ಮಕ್ಕಳಿಗೂ ಉತ್ತಮ, ಗುಣಮಟ್ಟದ ಶಿಕ್ಷಣ ನೀಡಲು ಆರಂಭಿಸಿದೆ. ಮಕ್ಕಳು ಸಮಾಜದಲ್ಲಿ ಒಳ್ಳೆಯ ಸ್ಥಾ‌ನ ಪಡೆಯ ಬೇಕೆಂಬುದು ಸಂಸ್ಥೆ ಗುರಿ ಎಂದು ಹೇಳಿದರು.

ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಹಳ್ಳಿಯಿಂದ ದಿಲ್ಲಿವರೆಗೆ ಎಂಬ ಮಾತಿನಂತೆ ಮಹಾತ್ಮ ಗಾಂಧಿಜೀ ಸೇರಿ ಇಂದಿನ ಎಲ್ಲ ಸಾಧಕರು, ರಾಜಕಾರಣಿಗಳು ಗ್ರಾಮ ಮಟ್ಟದಿಂದ ಮೇಲೆ ಬಂದವರು. ಮಕ್ಕಳು ವಿದ್ಯಾವಂತರಾಗುವುದರೊಂದಿಗೆ ಉತ್ತಮ ನಾಗರಿಕರಾಗಬೇಕು. ಪೋಷಕರು ಮಕ್ಕಳ ವಿದ್ಯಾಬ್ಯಾಸದ ಕಡೆ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿ ಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಡಾ.ವಿನಾಯಕ್‌ ಎಸ್‌, ಸಿಂದಿಗೆರೆ, ಶಾಲೆಯಲ್ಲಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಕಲಿಗೆ ಬೇಕಾದ ಎಲ್ಲಾ ಮೂಲಸೌರ್ಯ ಒಳಗೊಂಡಿದೆ. ಮಕ್ಕಳಿಗೆ ಟ್ಯಾಬ್‌ ಆಧಾರಿತ ಶಿಕ್ಷಣ ವ್ಯವಸ್ಥೆಯನ್ನು ಈಗಾಗಲೇ ಆರಂಭಿಸಲಾಗಿದೆ, ವಿಜ್ಞಾನ ಪ್ರಯೋಗಾಲಯ ಇದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಸ್‌ ವ್ಯವಸ್ಥೆ ಮಾಡಲಾಗಿದೆ. ಶೈಕ್ಷಣಿಕ ಕಲಿಕೆಯೊಂದಿಗೆ ಪಠ್ಯೇತರ ಚಟುವಟಿಕೆಗೆ ಶಾಲೆಯಲ್ಲಿ ಒತ್ತು ನೀಡಲಾಗುತ್ತಿದೆ ಎಂದರು.

ಮುಖ್ಯಶಿಕ್ಷಕ ಮಂಜುನಾಥ್ ಪ್ರಸ್ತಾವಿಕವಾಗಿ ಮಾತನಾಡಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ ನಿವೃತ್ತ ಉಪನ್ಯಾಸಕ ಬಿ.ಟಿ,ತಿಪ್ಪೇರುದ್ರಪ್ಪ, ನಗರ ಸಭೆ ಸದಸ್ಯ ಅರುಣ್‌ ಕುಮಾರ್‌, ಶಾಲಾ ಸಮಿತಿ ಸದಸ್ಯರಾದ ಗಂಗಾಧರ್, ಆಶಾ, ವೀಣಾ, ಲತಾ, ಭಾರತಿ ಸೇರಿದಂತೆ ಮೊದಲಾದವರಿದ್ದರು. --ಫೋಟೋ

ಕಲ್ಯಾಣನಗರದಲ್ಲಿರುವ ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2026ನೇ ಸಾಲಿನ ಸಾಂಸ್ಕೃತಿ ಹಬ್ಬವನ್ನು ಎಸ್.ವಿ.ಎಸ್ ಸಮಾಜದ ಅಧ್ಯಕ್ಷ ಎಂ.ಎಸ್.ನಿರಂಜನ್‌ ಉದ್ಘಾಟಿಸಿದರು. ಡಾ.ವಿನಾಯಕ್‌ ಎಸ್‌ ಸಿಂದಿಗೆರೆ, ನಿವೃತ್ತ ಉಪನ್ಯಾಸಕ ಬಿ.ಟಿ,ತಿಪ್ಪೇರುದ್ರಪ್ಪ, ನಗರ ಸಭೆ ಸದಸ್ಯ ಅರುಣ್‌ ಕುಮಾರ್‌, ಮುಖ್ಯಶಿಕ್ಷಕ ಮಂಜುನಾಥ್, ಆಶಾ, ವೀಣಾ, ಲತಾ, ಭಾರತಿ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಶಂಕರ ಶ್ರೀಗಳ ಜ್ಞಾನಮಾರ್ಗ ನಮಗೆ ಆದರ್ಶ
ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು