ಶ್ರೀ ಅಮೃತೇಶ್ವರ ಪ್ರೌಢಶಾಲೆ ಪ್ರಾರಂಭೋತ್ಸವ । ಉಚಿತ ಪಠ್ಯಪುಸ್ತಕಗಳ ವಿತರಣೆ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಶಾಲೆಯ ಮಕ್ಕಳು ಸರ್ಕಾರ ನೀಡುವ ಉಚಿತ ಪಠ್ಯಪುಸ್ತಕಗಳನ್ನು ಬಳಸಿಕೊಂಡು ತಮ್ಮ ಭವ್ಯ ಭವಿಷ್ಯ ರೂಪಿಸಿ ಕೊಳ್ಳಬೇಕೆಂದು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ.ಟಿ ಹೇಳಿದರು.ನೇರಲಕೆರೆ ಗ್ರಾಮದಲ್ಲಿ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಏರ್ಪಡಿಸಿದ್ದ ೨೦೨೪-೨೫ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಇಂದಿನ ಮಕ್ಕಳು ಮೊಬೈಲ್‌ಗೆ ಹೆಚ್ಚು ಅವಲಂಬಿತರಾಗದೇ ತಮ್ಮ ಓದು-ಬರಹದ ಕಡೆ ಹೆಚ್ಚು ಗಮನ ನೀಡಲು ತಿಳಿಸಿದ ಅವರು ಮಕ್ಕಳು ಚೆನ್ನಾಗಿ ಓದಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಶಾಲಾ ಸಮಿತಿ ಸದಸ್ಯ ಪುಟ್ಟಪ್ಪ ಮಾತನಾಡಿ, ಮಕ್ಕಳು ಹೇಗೆ ಯಾವ ರೀತಿ ಓದಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಚೆನ್ನಾಗಿ ಓದಿ ಒಂದು ಒಳ್ಳೆಯ ಕೆಲಸ ಪಡೆದು, ತಂದೆ-ತಾಯಿಗಳ ಸೇವೆ ಮಾಡುವ ಮೂಲಕ ಅವರ ಋಣ ತೀರಿಸಬೇಕು ಎಂದು ಸಲಹೆ ಮಾಡಿದರು. ಶ್ರೀ ಅಮೃತೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಕೆ ಟಿ ಮಾತನಾಡಿ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ತಮ್ಮ ಓದು-ಬರಹ ಚೆನ್ನಾಗಿ ನಿರ್ವಹಿಸುವ ಮೂಲಕ ಒಳ್ಳೆಯ ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತರಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳನ್ನು ನೀಡಲಾಯಿತು. ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಷಡಕ್ಷರಪ್ಪ, ಸದಸ್ಯರಾದ ಎನ್ ಪಿ ಈಶ್ವರಪ್ಪ, ಟಿ ಬಸವರಾಜಪ್ಪ, ಜಗದೀಶ್, ಬೊಮ್ಮೇನಹಳ್ಳಿ ನಿಂಗಪ್ಪ, ಸಮತಳದ ಮಲ್ಲೇಶಪ್ಪ, ಓಂಕಾರಪ್ಪ, ಎನ್ ಎಂ ಬಸವರಾಜಪ್ಪ, ಶಾಲಾ ಶಿಕ್ಷಕರಾದ ಖಿಜರ್‌ಖಾನ್, ರಮಾಕಾಂತ್, ಸತೀಶ್ ನಂದಿಹಳ್ಳಿ, ಪಂಚಾಕ್ಷರಪ್ಪ, ಸವಿತಮ್ಮ, ಮಂಜುಳ ಮಲ್ಲಿಗವಾಡ, ಪೋಷಕ ಲೋಕೇಶಪ್ಪ, ಹಾಸ್ಟೆಲ್ ವಾರ್ಡನ್ ಸೌಮ್ಯ ಹಾಗೂ ಬಿಸಿಯೂಟ ತಯಾರಿಕೆ ನೌಕರರಾದ ಭಾಗ್ಯಮ್ಮ, ರತ್ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.31ಕೆಟಿಆರ್.ಕೆ.1ಃತರೀಕೆರೆ ಸಮೀಪದ ನೇರಲಕೆರೆ ಗ್ರಾಮದಲ್ಲಿ ಶ್ರೀ ಅಮೃತೇಶ್ವರ ಪ್ರೌಢಶಾಲೆಯಿಂದ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ಉಚಿತ ಪಠ್ಯಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.