ಶ್ರೀ ಶಾರದಾ ವಿದ್ಯಾಪೀಠ ಶಾಲೆಯಲ್ಲಿ ಕಲಿತಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ: ನಿಂಗಪ್ಪ

KannadaprabhaNewsNetwork |  
Published : Jul 31, 2024, 01:01 AM IST
ಕ್ಯಾಪ್ಷನಃ28ಕೆಡಿವಿಜಿಃ43ಃದಾವಣಗೆರೆ ತಾ. ಕಕ್ಕರಗೊಳ್ಳದ ಶ್ರೀ ಶಾರದಾ ವಿದ್ಯಾಪೀಠ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಿತು.  | Kannada Prabha

ಸಾರಾಂಶ

ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಶ್ರೀ ಶಾರದಾ ವಿದ್ಯಾಪೀಠ ಶಾಲೆಯ 1988-89ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ನಗರದ ಚೇತನ ಹೋಟೆಲಲ್ಲಿ ಜರುಗಿತು.

- ಕಕ್ಕರಗೊಳ್ಳ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ - - - ದಾವಣಗೆರೆ: ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಶ್ರೀ ಶಾರದಾ ವಿದ್ಯಾಪೀಠ ಶಾಲೆಯ 1988-89ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವು ನಗರದ ಚೇತನ ಹೋಟೆಲಲ್ಲಿ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ಶಾಲೆ ಅಧ್ಯಕ್ಷ ಕೆ.ಎಸ್. ನಿಂಗಪ್ಪ ಮಾತನಾಡಿ, ಇಂದಿನ ಸಿಬಿಎಸ್‌ಸಿ ಶಿಕ್ಷಣವನ್ನು ಮೂವತ್ತು ವರ್ಷಗಳ ಹಿಂದೆಯೇ ಕೊಡಲಾಗುತ್ತಿತ್ತು. ಮುಂದೆಯೂ ಶಿಕ್ಷಣದಲ್ಲಿ ಇಂಥ ಗುರಿಗಳನ್ನು ಹೊಂದಿ, ಮುನ್ನಡೆದರೆ ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗಲಿದೆ ಎಂದರು.

ನಮ್ಮಿಂದ ಶಿಕ್ಷಣ ಕಲಿತ ಇಂದು ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸ ತಂದಿದೆ. ನಮ್ಮ ಶಿಷ್ಯಂದಿರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹಳೆಯ ವಿದ್ಯಾರ್ಥಿ ಕೆ. ನವೀನ್ ಕುಮಾರ್ ಮಾತನಾಡಿ, ನಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ನಮಗೆ ಗುಣಮಟ್ಟದ ಶಿಕ್ಷಣ ದೊರತಿರುವುದು ನಮ್ಮ ಸೌಭಾಗ್ಯ. ನಮಗೆ ಪಠ್ಯದ ಜತೆಗೆ ನೈತಿಕ ಪಾಠವನ್ನು ಕಲಿಸಿರುವುದರಿಂದ ಇಂದು ನಾವೆಲ್ಲಾ ಮಾನವೀಯ ಮೌಲ್ಯಗಳ ಜತೆಗೆ ಜೀವನ ನಡೆಸುತ್ತಿದ್ದೇವೆ. ನಮ್ಮ ಬೆಳವಣಿಗೆಗೆ ಕಾರಣರಾದ ಶಿಕ್ಷಕರಿಗೆ ನಾವು ಆಭಾರಿ ಎಂದು ಕೃತಜ್ಞತೆ ತಿಳಿಸಿದರು.

ಶಿಕ್ಷಕರಾದ ಶಕುಂತಲಮ್ಮ, ನಾಗರಾಜಪ್ಪ, ಶಾರದ, ಸುನೀತ, ಮಂಜುಳಾ, ಸರೋಜ, ಭಾರತಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಎಚ್.ಬಿ. ಚೇತನ್ ಬಾಬು, ಎಸ್.ಜೆ. ಮಂಜುನಾಥ, ಐ.ಸಿ. ಸಂತೋಷ್, ಎಂ.ಕೆ. ಜಗದೀಶ್, ಶೌಕತ್ ಅಲಿ, ಜಿ.ಚಂದ್ರಪ್ಪ, ಹೆಚ್.‌ನೇತ್ರಾವತಿ, ಹೊನ್ನಪ್ಪ, ಮೋಹನ್ ಕುಮಾರ್, ಎಸ್. ಪ್ರಾಣೇಶ್, ಕೆ. ಶಿವಕುಮಾರ್, ರೇಖಾ ಮತ್ತಿತರರು ಪಾಲ್ಗೊಂಡಿದ್ದರು.

- - - -28ಕೆಡಿವಿಜಿಃ43ಃ:

ದಾವಣಗೆರೆ ತಾಲೂಕು ಕಕ್ಕರಗೊಳ್ಳದ ಶ್ರೀ ಶಾರದಾ ವಿದ್ಯಾಪೀಠ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ