ಬಿಸಿಯೂಟಕ್ಕಾಗಿ ಕಿಲೋಮಿಟರ್‌ಗಟ್ಟಲೆ ಮಕ್ಕಳ ಅಲೆದಾಟ : ಕ್ರಮಕ್ಕೆ ಆಗ್ರಹ

KannadaprabhaNewsNetwork | Published : Oct 29, 2024 12:47 AM

ಸಾರಾಂಶ

Children wandering kilometers for heat: A call for action

- ಶಾಲೆಯಲ್ಲಿಯೇ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಮಾಡಲು ಒತ್ತಾಯ

ಕನ್ನಡಪ್ರಭ ವಾರ್ತೆ ವಡಗೇರಾ

ಬೆಂಡೆಬೆಂಬಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಿಸಿಯೂಟಕ್ಕಾಗಿ ದಿನನಿತ್ಯ ಕಿಲೋಮಿಟರ್ ಗಟ್ಟಲೆ ಕೈಯಲ್ಲಿ ತಟ್ಟೆ ಹಿಡಿದುಕೊಂಡು ನಡೆಯಬೇಕು. ಗ್ರಾಮದ ಹೊರಗಡೆ ಹೋಗಿ ಊಟ ಮುಗಿಸಿಕೊಂಡು ಮರಳಿ ಶಾಲೆಗೆ ಬರಲು ಮಕ್ಕಳಿಗೆ ತೊಂದರೆಯಾಗುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಬೆಂಡೆಬೆಂಬಳಿ ಗ್ರಾಮ ಘಟಕದ ಅಧ್ಯಕ್ಷ ಗಡ್ಡೆಲಿಂಗ ಬಿ. ಸಂಗಣ್ಣೂರ ಆರೋಪಿಸಿದ್ದಾರೆ.

ದಲಿತರ ಬಡಾವಣೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಶಾಲೆಯು 1 ರಿಂದ 5ನೇ ತರಗತಿಯವರೆಗೆ ಇದ್ದು, 60 ಶಾಲಾ ಮಕ್ಕಳು ಇದ್ದಾರೆ. ಇದೇ ದಿನನಿತ್ಯ ಮಕ್ಕಳು ಕಿಲೋಮಿಟರ್‌ ಗಟ್ಟಲೆ ನಡೆದುಕೊಂಡು ಗ್ರಾಮದ ಹೊರಗಿನ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿ ಊಟ ಮುಗಿದ ನಂತರ ಮತ್ತೆ ನಡೆದುಕೊಂಡೆ ಶಾಲೆಗೆ ಬರಬೇಕು. ಇದರಿಂದ ಸಮಯದ ಜೊತೆಗೆ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಅನಾಹುತವಾದರೆ ಯಾರು ಜವಾಬ್ದಾರಿ ಎಂಬುದು ಪಾಲಕರ ಪ್ರಶ್ನೆ. ಈ ಕಾರಣದಿಂದ ಕೆಲವು ಮಕ್ಕಳನ್ನು ಪಾಲಕರು ಶಾಲೆಯೆ ಬಿಡಿಸಿದ್ದಾರೆ. ಶಾಲೆಯಲ್ಲೇ ಬಿಸಿಯೂಟ ಆರಂಭಿಸುವಂತೆ ಅಧಿಕಾರಿಗಳು ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪಾಲಕರು ಹಾಗೂ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದೂರಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ, ಬಿಸಿಯೂಟ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

------

28ವೈಡಿಆರ್5: ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಡಾ. ಬಿ.ಆರ್. ಅಂಬೇಡ್ಕರ್ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ಬಿಸಿಯೂಟಕ್ಕಾಗಿ ಗ್ರಾಮದ ಹೊರಗಿನ ಜಾಗಕ್ಕೆ ನಡೆದುಕೊಂಡು ಹೋಗುತ್ತಿರುವುದು.

-----

28ವೈಡಿಆರ್4: ಗಡ್ಡೆಲಿಂಗ ಬಿ. ಸಂಗಣ್ಣೂರ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಬೆಂಡೆಬೆಂಬಳಿ ಗ್ರಾಮ ಘಟಕದ ಅಧ್ಯಕ್ಷರು.

Share this article