ಕನ್ನಡಪ್ರಭ ವಾರ್ತೆ ವಿಜಯಪುರ
ಬಸವಾದಿ ಶರಣರು ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿದವರು. ಶರಣರ ವಿಚಾರಗಳು ನಮಗೆ ಆದರ್ಶ, ನಿತ್ಯ ಸ್ಫೂರ್ತಿ. ಸಮಾಜದಲ್ಲಿರುವ ಬಡಜನರ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಎಲ್ಲರನ್ನು ಒಗ್ಗೂಡಿಸಿದ ಕೀರ್ತಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳಿಗೆ ಸಲ್ಲುತ್ತದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆ ರಾಜ್ಯಾಧ್ಯಕ್ಷ ಶಂಕರ ಬಿದರಿ ಹೇಳಿದರು.ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೦೨೩-೨೪ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವೀರಶೈವ, ಲಿಂಗಾಯತ ಸ್ವಲ್ಪ ಅಂತರವಿದೆ. ತಲತಲಾಂತರದಿಂದ ಬಂದ ವೀರಶೈವ ಸಮಾಜ ಧರ್ಮ ಉಳಿಯಬೇಕಾಗಿದೆ. ಎಲ್ಲ ವರ್ಗಗಳ ಸಹಕಾರ ಇಂದು ಅವಶ್ಯಕತೆ ಇದೆ. ನೆರೆಯ ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ವೀರಶೈವ ಲಿಂಗಾಯತ ಸಮಾಜ ಇದೆ. ಎಲ್ಲರೂ ಜೊತೆಗೂಡಿ ಒಗ್ಗಟ್ಟಾಗಿ ಹೋಗಬೇಕಿದೆ. ವೀರಶೈವ ಪದ ಹಿಂದುಳಿದ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕಾಗಿದೆ. ನಮ್ಮ ಸಮಾಜ, ಧರ್ಮ ಉಳಿಯಬೇಕಾಗಿದೆ. ನಮ್ಮವರು ಸಂಸ್ಕಾರದಿಂದ ದೂರ ಉಳಿಯಬಾರದು, ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಬದುಕು ಸುಂದರವಾಗಿ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ೧೯೦೪ರಲ್ಲಿ ಪೂಜ್ಯ ಹಾನಗಲ್ ಕುಮಾರಸ್ವಾಮಿಗಳು ಸ್ಥಾಪಿಸಿದ ಸಂಸ್ಥೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಂದಿನ ಶಿರಸಂಗಿ ಲಿಂಗರಾಜ ಮಹಾರಾಜರು, ಸೊನ್ನದ, ಆಲಮೇಲ ದೇಸಾಯಿ, ವಾರದ ಮಲ್ಲಪ್ಪ ಹಾಗೂ ಹಿರಿಯರು ಸಂಸ್ಥೆಯ ಏಳಿಗೆಗಾಗಿ ಸಾಮಾನ್ಯ ಜನರಿಗೆ ಶೈಕ್ಷಣಿಕ ಸೌಲಭ್ಯ, ಉಚಿತ ಪ್ರಸಾದ ನಿಲಯಗಳನ್ನು ತೆರೆದು ಸಮಾಜದ ಒಳತಿಗಾಗಿ ಶ್ರಮಿಸಿದವರು. ಪೂಜ್ಯರ ಸ್ಮರಣೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನ್ಯಾಯವನ್ನು ಒದಗಿಸಿದ ಮಹಾಪುರುಷುರು ನಮ್ಮ ಇಂದಿನ ಬದುಕು ಸುಂದರವಾಗಬೇಕಾದರೆ ಸಂಸ್ಕಾರ, ಸಂಸ್ಕೃತಿ, ಧರ್ಮ ಬಹಳ ಮುಖ್ಯ. ಇದರಲ್ಲಿ ದಾನಿಗಳ ಪಾತ್ರ ತುಂಬಾ ಮಹತ್ವ ಪಡೆಯುತ್ತದೆ. ಇಂದು ನಾವೆಲ್ಲ ಸೇರಿ ವೀರಶೈವ ಲಿಂಗಾಯತ ಧರ್ಮ ಉಳಿಸಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಕರೆ ನೀಡಿದರು.ಲಿಂಗಾಯತ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ರಾಮಪ್ಪ ಉಪ್ಪಿನ, ಸಹದೇವ ನಾಡಗೌಡರ, ಎಂ.ಜಿ.ಯಾದವಾಡ, ಬಿ.ಟಿ.ಈಶ್ವರಗೊಂಡ, ಎಸ್.ಎ.ಪಾಟೀಲ, ವಿದ್ಯಾವತಿ ಅಂಕಲಗಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾಹಿತಿಗಳಾದ ಸಂಗಮೇಶ ಬದಾಮಿ, ದೊಡ್ಡಣ್ಣ ಭಜಂತ್ರಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ವಿ.ಡಿ.ಐಹೊಳ್ಳಿ, ಶಾರದಾ ಕೊಪ್ಪ, ಜ್ಯೋತಿ ಬಾಗಲಕೋಟ, ಉಷಾ ಹಿರೇಮಠ, ತಾಲೂಕಾ ಅಧ್ಯಕ್ಷ ಬಸವರಾಜ ಇಟ್ಟಂಗಿ, ರವೀಂದ್ರ ಬ್ಯಾಕೋಡ, ಮಹಾದೇವ ಹಾಲಳ್ಳಿ, ಬಸವರಾಜ ಒಂಟಗೋಡಿ, ಪರಶುರಾಮ ಪೋಳ, ವಿಠ್ಠಲ ತೇಲಿ, ವಿ.ಬಿ.ಸಾಲಕ್ಕಿ, ಯುವರಾಜ ಜೋಳಕೆ ಉಪಸ್ಥಿತರಿದ್ದರು. ನಂತರ ಜಿಲ್ಲಾ ಘಟಕ ಮತ್ತು ತಾಲೂಕಾ ಘಟಕಗಳಿಂದ ರಾಜ್ಯಾಧ್ಯಕ್ಷರಾದ ಶಂಕರ ಬಿದರಿ ಅವರನ್ನು ಸತ್ಕರಿಸಲಾಯಿತು. -------------ಕೋಟ್
ವೀರಶೈವ ಪದ ಹಿಂದುಳಿದ ಓಬಿಸಿ ಪಟ್ಟಿಯಲ್ಲಿ ಸೇರಿಸಬೇಕಾಗಿದೆ. ನಮ್ಮ ಸಮಾಜ, ಧರ್ಮ ಉಳಿಯಬೇಕಾಗಿದೆ. ನಮ್ಮವರು ಸಂಸ್ಕಾರದಿಂದ ದೂರ ಉಳಿಯಬಾರದು, ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಬದುಕು ಸುಂದರವಾಗಿ ಕಟ್ಟಿಕೊಳ್ಳಬೇಕು. ಎಲ್ಲ ವರ್ಗಗಳ ಸಹಕಾರ ಇಂದು ಅವಶ್ಯಕತೆ ಇದೆ.- ಶಂಕರ ಬಿದರಿ, ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯಾಧ್ಯಕ್ಷ