ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ಅ. 5 ರಂದು ಶನಿವಾರ ಬೆಳಗ್ಗೆ 9.30 ಗಂಟೆಯಿಂದ ಗಾಂಧಿ ಮೈದಾನದಲ್ಲಿ ಪ್ರಾರಂಭವಾಗಲಿದೆ.
ಮಕ್ಕಳ ಸಂತೆ ಮತ್ತು ಮಕ್ಕಳ ಅಂಗಡಿ - ಎಸ್ ಎಸ್ ಎಲ್ ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು. ಸಂತೆಯಲ್ಲಿ ಗ್ರಾಮೀಣ ಪದಾರ್ಥಗಳ ಮಾರಾಟಕ್ಕೆ ಆದ್ಯತೆ ಇದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಟ ಇಬ್ಬರು ಸ್ಪಧಿ೯ಗಳಿಗೆ ಅವಕಾಶವಿದೆ.ಮಕ್ಕಳ ಮಂಟಪ - 10 ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು. ಯಾವುದೇ ಕಾರಣಕ್ಕೂ ಮಂಟಪದಲ್ಲಿ ವಿದ್ಯುತ್ ಮತ್ತು ಬೆಂಕಿಯಂಥ ಅಪಾಯಕಾರಿ ವಸ್ತುಗಳನ್ನು ಬಳಸಿ ಪ್ರದರ್ಶನ ನೀಡುವಂತಿಲ್ಲ,
ಕ್ಲೇ ಮಾಡೆಲಿಂಗ್ - 5 ರಿಂದ 7 ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ವಿದ್ಯಾಥಿ೯ಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ.
ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆಗಳು - ಮಕ್ಕಳ ಸಂತೆ, - ದಿವ್ಯಾ ಚೇತನ್ 9538101863, ಚಂದ್ರಿಕಾರಾಜು - 9986518742, ಮಕ್ಕಳಿಂದ ಅಂಗಡಿ ಸ್ಪರ್ಧೆ - ಶಪಾಲಿ ರೈ - 9741523484, ರಶ್ಮಿ ಪ್ರವೀಣ್ - 9902362038, ಮಕ್ಕಳಿಂದ ಮಂಟಪ - ಸವಿತಾ ಅರುಣ್ - 9480003811, ಪ್ರೀತು 8277050366, ಛದ್ಮವೇಶ ಸ್ಪರ್ಧೆ - ನಮಿತಾರೈ 9448976405, ಶಮ್ಮಿ ಪ್ರಭು 8088570167 ಕ್ಲೇ ಮಾಡೆಲಿಂಗ್ - ಗಾನಾಪ್ರಶಾಂತ್ - 9449713748, ಪಲ್ಲವಿ ಪ್ರಸಾದ್ 9972963151 , ಈ ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಕೊನೇ ದಿನಾಂಕ ಸೆಪ್ಟೆಂಬರ್ 28 ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.