ಚಿಂಚೋಳಿ: ತುಕ್ಕು ಹಿಡಿಯುತ್ತಿವೆ ಶುದ್ಧ ನೀರಿನ ಘಟಕಗಳು

KannadaprabhaNewsNetwork |  
Published : Jan 07, 2024, 01:30 AM IST
 ಶುದ್ದ ನೀರಿನ ಘಟಕ | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಹಳ್ಳಿ ಜನರಿಗೆ ಶುದ್ಧ ನೀರು ಪೂರೈಕೆಗಾಗಿ ಶುದ್ಧೀಕರಣ ಘಟಕ ಸ್ಥಾಪನೆ ಮಾಡಲಾಗಿದೆ. ಘಟಕಗಳು ನೀರು ಪೂರೈಕೆ ಮಾಡದೇ ರೋಗಗ್ರಸ್ತವಾಗಿ ತುಕ್ಕು ಹಿಡಿಯುತ್ತಿವೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ತಾಲೂಕಿನ ಗ್ರಾಮೀಣ ಪ್ರದೇಶದ ಹಳ್ಳಿ ಜನರಿಗೆ ಶುದ್ಧ ನೀರು ಪೂರೈಕೆಗಾಗಿ ಶುದ್ಧೀಕರಣ ಘಟಕ ಸ್ಥಾಪನೆ ಮಾಡಲಾಗಿದೆ. ಘಟಕಗಳು ನೀರು ಪೂರೈಕೆ ಮಾಡದೇ ರೋಗಗ್ರಸ್ತವಾಗಿ ತುಕ್ಕು ಹಿಡಿದಿದ್ದು, ಅವುಗಳ ತನಿಖೆ ನಡೆಸಬೇಕೆಂದು ಕಲ್ಯಾಣ ಕರ್ನಾಟಕ ಜನಸೇವಾ ಅಧ್ಯಕ್ಷ ರವಿಶಂಕರರೆಡ್ಡಿ ಮುತ್ತಂಗಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಳ್ಳಿ ಜನರು ಶುದ್ಧ ನೀರು ಕುಡಿಯಬೇಕು. ಅವರು ಆರೋಗ್ಯಕರ ಜೀವನ ಸಾಗಿಸಬೇಕು ಎಂಬ ಉದ್ಧೇಶದಿಂದ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಗೆ ೨೦೧೯-೨೦ನೇ ಸಾಲಿನಲ್ಲಿ ಎಸ್‌ಸಿಪಿ ಯೋಜನೆ ಅಡಿಯಲ್ಲಿ ಸರ್ಕಾರದಿಂದ ೮೭ಘಟಕ ಮಂಜೂರಿಗೊಳಿಸಿ ಅದಕ್ಕೆ ಒಟ್ಟು ೨೪.೧೩ಕೋಟಿ ರು. ಅನುದಾನ ನೀಡಲಾಗಿದೆ. ಇದರಲ್ಲಿ ಇಗಾಗಲೇ ₹೧೩.೨೦ ಕೋಟಿ ಅನುದಾನ ಖರ್ಚು ಮಾಡಲಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಿದ ಕುಡಿಯುವ ನೀರಿನ ಘಟಕೆಗಳೆಲ್ಲವೂ ತುಕ್ಕು ಹಿಡಿದಿವೆ.

ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಗಮಕ್ಕೆ ೪೯ಶುದ್ಧೀಕರಣ ನೀಡಲಾಗಿದೆ, ಘಟಕಗಳಿಗೆ ಕೇವಲ ಶೆಡ್ ಮತ್ತು ಬಾಗಿಲ ಹಾಕಲಾಗಿದೆ. ಆದರೆ ಘಟಕಗಳಲ್ಲಿ ಯಂತ್ರೋಪಕರಣಗಳೆಲ್ಲವೂ ಹಾಳಾಗಿದ್ದು, ನೀರು ಪೂರೈಕೆ ಇಲ್ಲದೇ ಬಿಕೋ ಎನ್ನುತ್ತಿವೆ ಪಂಚಾಯತ ರಾಜ್ ಸಚಿವರು ಇತ್ತ ಗಮನಹರಿಸಿ, ತನಿಖೆ ನಡೆಸಬೇಕೆಂದು ಎಂದು ಕಲ್ಯಾಣ ಕರ್ನಾಟಕ ಜನಸೇವಾ ಟ್ರಸ್ಟ ಅಧ್ಯಕ್ಷ ರವಿಶಂಕರ ಮುತ್ತಂಗಿ ಒತ್ತಾಯಿಸಿದ್ದಾರೆ

ತಾಲೂಕಿನ ಬಹುತೇಕ ಎಲ್ಲ ಕಡೆಗಳಲ್ಲಿ ಗ್ರಾಪಂ ವತಿಯಿಂದ ನಿರ್ವಹಣೆ ಇಲ್ಲದೇ ದುಸ್ಥಿತಿಯಲ್ಲಿವೆ. ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧಿಕಾರಿಗಳು ಕಾಮಗಾರಿಗಳ ಪ್ರಗತಿ ವರದಿ ತಿಳಿಸುವುದಿಲ್ಲ ಎಂದು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಎಇಇ ರಾಹುಲ್‌ ಕಾಂಬಳೆ ತಿಳಿಸಿದ್ದಾರೆ.

ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳ ಸರ್ಕಾರಿ ಬಾಲಕರ ಮತ್ತು ಬಾಲಕಿಯರ ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಶುದ್ಧ ನೀರಿನ ಘಟಕಗಳಿಂದ ಶುದ್ಧ ನೀರು ಸಿಗುತ್ತಿಲ್ಲ. ಎಲ್ಲವೂ ಹಾಳಾಗಿರುವುದಾಗಿ ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಬುಳ್ಳಾ ಹೇಳಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ