ಕನ್ನಡಪ್ರಭ ವಾರ್ತೆ ಉಡುಪಿಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಂಪಿಎಂಸಿ)ಯಲ್ಲಿ ನಿಷೇಧಿತ ಚೀನಿ ಬೆಳ್ಳುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನಂತೆ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು 5 ಕ್ವಿಂಟಾಲ್ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.ನಗರಸಭೆ ಆಯುಕ್ತ ರಾಯಪ್ಪ ನೇತೃತ್ವದಲ್ಲಿ ಆಹಾರ ನಿಯಂತ್ರಣ ಅಧಿಕಾರಿಗಳು ಎಂಪಿಎಂಸಿಗೆ ಭೇಟಿ ನೀಡಿದರು. ಅಲ್ಲಿ ಗೋಣಿ ಚೀಲಗಳಲ್ಲಿ ಮಾರಾಟಕ್ಕೆ ದಾಸ್ತಾನಿಟ್ಟಿದ್ದ ದೊಡ್ಡ ಗಾತ್ರದ ಬೆಳ್ಳುಳ್ಳಿಯನ್ನು ಪತ್ತೆ ಮಾಡಿದ್ದಾರೆ. ಅದು ಚೀನಾ ದೇಶದಿಂದ ಆಮದು ಮಾಡಲಾದ ನಿಷೇಧಿತ ಬೆಳ್ಳುಳ್ಳಿಯಾಗಿದೆ ಎಂದು ಅಧಿಕಾರಿಗಳು ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವ್ಯಾಪಾರಿಗಳು ಅದು ಚೀನಿ ಬೆಳ್ಳುಳ‍್ಳಿ, ನಿಷೇಧಿತ ಎಂದು ತಮಗೆ ಗೊತ್ತಿರಲಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.