ಡಾ.ಜಿ. ಪರಮೇಶ್ವರ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್, ಬಿಜೆಪಿಗೆ ಇಲ್ಲ

KannadaprabhaNewsNetwork |  
Published : Jun 07, 2025, 03:20 AM IST
13 | Kannada Prabha

ಸಾರಾಂಶ

ಕಾಲುತುಳಿತದ ಪ್ರಕರಣ ಮಾನವೀಯತೆಯ ವಿಷಯವಾಗಿದೆ. ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಅವರ ನೋವಿನಲ್ಲಿ ಇಡೀ ಜನತೆಗೆ ಭಾಗಿಯಾಗಬೇಕಾಗಿದ್ದು ನಮ್ಮ ಕರ್ತವ್ಯ

ಕನ್ನಡಪ್ರಭ ವಾರ್ತೆ ಮೈಸೂರು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್, ಬಿಜೆಪಿಗೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್‌ ಹೇಳಿದ್ದಾರೆ.ಇದು ರಾಜಕೀಯ ಮಾತನಾಡುವ ಸಮಯವಲ್ಲ, ಪರಮೇಶ್ವರ್ ಅವರು ಮೆರವಣಿಗೆಗೆ ಅವಕಾಶ ನೀಡದಿದ್ದಾಗ ಪ್ರತಿಪಕ್ಷದವರು ಯಾವ ರೀತಿ ಜನರನ್ನ ಪ್ರಚೋದಿಸಿ ಗೃಹ ಸಚಿವರ ಆತ್ಮವಿಶ್ವಾಸ ಕುಗ್ಗಿಸಲು ಪ್ರಯತ್ನಿಸಿದರು ಎಂಬುದು ಕರ್ನಾಟಕದ ಜನತೆಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.ಆರ್ ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದೆ. ಇಂತಹ ಘಟನೆಗಳು ನಡೆದಿರುವುದು ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ. ನಮ್ಮ ವ್ಯವಸ್ಥೆಯ ಬಗ್ಗೆ ನಮಗೆ ನಾವೇ ಅವಲೋಕನ ಮಾಡಿಕೊಳ್ಳಬೇಕಾಗಿ. ಇದು ಗೃಹ ಸಚಿವರ ಅಥವಾ ಸರ್ಕಾರದ ವೈಫಲ್ಯವನ್ನು ಟೀಕಿಸುವ ಬರದಲ್ಲಿ ವೈಯುಕ್ತಿಕ ದಾಳಿಗೆ ಮುಂದಾಗಿರುವುದು ರಾಜಕೀಯ ಪಕ್ಷಗಳ ಹತಾಶ ಮನೋಭಾವನೆ ಗೋಚರಿಸುತ್ತದೆ ಎಂದಿದ್ದಾರೆ.ಕಾಲುತುಳಿತದ ಪ್ರಕರಣ ಮಾನವೀಯತೆಯ ವಿಷಯವಾಗಿದೆ. ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಅವರ ನೋವಿನಲ್ಲಿ ಇಡೀ ಜನತೆಗೆ ಭಾಗಿಯಾಗಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ಈ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ದೃಷ್ಟಿಕೋನದಿಂದ ನೋಡಬೇಕಿಲ್ಲ. ಇಂತಹ ಇಂತಹ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ , ಬೆಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ , ವಿಪಕ್ಷ ನಾಯಕ ಆರ್. ಅಶೋಕ, ರವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಗ್ಗೆ ಕೂಡ ಇವರು ಹಾಡಿರುವ ಮಾತುಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಟೀಕೆ ಮಾಡುವುದರಲ್ಲಿ ಜನತೆಯನ್ನು ಪ್ರಚೋದಿಸುವಂತೆ ನಡೆದುಕೊಳ್ಳುವುದು ಸರಿಯಲ್ಲ. ಆಡಳಿತ ವ್ಯವಸ್ಥೆ ಹೇಳುವುದರಲ್ಲಿ ಚರ್ಚೆ ಮಾಡುವುದು ತಪ್ಪಿಲ್ಲ. ವಿರೋಧಪಕ್ಷಗಳ ಹೇಳಿಕೆ ನೋಡಿದರೆ ಅವರ ಮನಸ್ಥಿತಿಯು ದುಃಖದಲ್ಲಿಯೂ ಅವರ ವರ್ತನೆಗಳು ನಾಗರಿಕ ಎಂದು ಅವರು ಹೇಳಿದ್ದಾರೆ. ಸಮಾಜದ ಲಕ್ಷಣವಲ್ಲ. ಗೃಹ ಸಚಿವ ಡಾ ಜಿ ಪರಮೇಶ್ವರ ಸಾಮರ್ಥ್ಯದ ಬಗೆಗೆ ಸುರೇಶ್ ಬಾಬು ರವರ ಪ್ರಶಂಸೆ ಬೇಕಿಲ್ಲ. ಇಂತಹ ಅಸಮರ್ಥ ಹೇಳಿಕೆಗಳು ಸುರೇಶ್ ಬಾಬು ಅವರ ವ್ಯಕ್ತಿತ್ವಕ್ಕೆ ಸರಿಹೊಂದುವುದಿಲ್ಲ. ಎಚ್. ಡಿ. ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಡಾ.ರಾಜ್ ಕುಮಾರ್ ನಿಧನರಾದರು . ಆಗ ಕುಮಾರ ಸ್ವಾಮಿ ಅವರು ಜನ ಜಂಗುಳಿಯನ್ನು ಯಾವ ರೀತಿ ನಿಭಾಯಿಸಿದರು ಎಂಬುದು ಎಲ್ಲರಿಗೂ ತಿಳಿದೇ ಇದೆ .ಅಂದು 7 ಮಂದಿ ರಾಜ್ ಅಭಿಮಾನಿಗಳು ಅಸುನೀಗಿದ ವಿಚಾರ ಇನ್ನು ಹಸಿರಾಗಿದೆ. ಅದಕ್ಕೆ ಕುಮಾರ ಸ್ವಾಮಿಯನ್ನು ನೀವು ಹೊಣೆ ಮಾಡಲು ಸಾಧ್ಯವೇ ? ಎಂದು ಅವರು ಪ್ರಶ್ನಿಸಿದ್ದಾರೆ.ಇಂತಹ ಅನಿರೀಕ್ಷಿತ ಯಾರು ನಿರೀಕ್ಷಿಸಿದ ಘಟನೆಯಿಂದ ಸರ್ಕಾರವೇ ತೀವ್ರ ನೋವಿನಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಘಾತ ವ್ಯಕ್ತಪಡಿಸಿ. ದುಖಿ:ತರಾದ ಕುಟುಂಬಗಳಿಗೆ ಸರ್ಕಾರ ಮಾಡಬಹುದಾದ ಎಲ್ಲಾ ರೀತಿಯ ಸಹಾಯದ ಹಸ್ತ ನೀಡಿದ್ದಾರೆ. ಆದರೂ ಕೂಡ ಸಾವನ್ನು ಸರಿದೂಗಿಸಲು ಯಾವುದರಿಂದಲೂ ಸಾಧ್ಯವಿಲ್ಲ ತಿಳಿದು ತೀವ್ರ ಆಘಾತ ಅನುಭವಿಸುತ್ತಿದ್ದಾರೆ ಎಂದಿದ್ದಾರೆ.--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ