ಶಿರಸಿ: ತಾಲೂಕಿನ ಚಿಪಗಿ-ಸದಾಶಿವಳ್ಳಿ ಸಂಪರ್ಕ ರಸ್ತೆ ಸುಮಾರು ೨ ಕಿ.ಮೀ. ಕಿತ್ತು ಹೋಗಿದ್ದು, ಓಡಾಟಕ್ಕೆ ತೀವ್ರ ಸಮಸ್ಯೆಯುಂಟಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಾರ್ವಜನಿಕರು ಪ್ರತಿನಿತ್ಯ ಪರದಾಡುವ ದುಃಸ್ತಿತಿ ಉಂಟಾಗಿದೆ.
ಈ ರಸ್ತೆಯಿಂದ ಕತ್ಲೆಹಳ್ಳ, ಸದಾಶಿವಳ್ಳಿ, ಸೋಮನಳ್ಳಿ, ಚಿಪಗಿ ಭಾಗದ ಸಾರ್ವಜನಿಕರಿಗೆ ಬಹಳ ಉಪಯೋಗವಾಗಿತ್ತು. ಕಳೆದ ೩ ವರ್ಷಗಳಿಂದ ರಸ್ತೆಯು ನಿರ್ವಹಣೆಯ ಕೊರತೆಯಿಂದ ಚಿಂದಿಯಾಗಿ ಸಂಚಾರ ದುಸ್ತರವಾಗಿದೆ. ರಸ್ತೆಯನ್ನು ಸರಿಪಡಿಸುವಂತೆ ಹಲವಾರು ಬಾರಿ ಆಗ್ರಹಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ.
ಮುಂಬರುವ ಚುನಾವಣೆಗೂ ಮುನ್ನವೇ ಅಥವಾ ತಕ್ಷಣವೇ ರಸ್ತೆಯನ್ನು ಸಂಚಾರ ಯೋಗ್ಯವಾಗಿ ನಿರ್ಮಿಸಿಕೊಡುವಂತೆ ಈ ಪ್ರದೇಶದ ನಾಗರಿಕರ ಆಗ್ರಹವಾಗಿದೆ.ಕಳೆದ ೬ ವರ್ಷ ಹಿಂದೆ ೨ ಕಿ.ಮೀ. ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ೫ ವರ್ಷ ನಿರ್ವಹಣೆ ಅವಧಿ ಮುಗಿದಿದೆ. ಇನ್ನೊಮ್ಮೆ ಡಾಂಬರೀಕರಣ ಮಾಡಿ, ಜಿಲ್ಲಾ ಪಂಚಾಯತಕ್ಕೆ ಹಸ್ತಾಂತರಿಸುತ್ತೇವೆ ಎನ್ನುತ್ತಾರೆ ಎಂಜಿನಿಯರ್ ವಿಜಯಕುಮಾರ.