ನಾಡಿನ ಪ್ರಗತಿಗೆ ಮಠಗಳ ಕೊಡುಗೆ ಅಪಾರ

KannadaprabhaNewsNetwork | Published : Mar 17, 2025 12:36 AM

ಸಾರಾಂಶ

ದಾಬಸ್‍ಪೇಟೆ: ನಾಡಿನ ಪ್ರಗತಿಗೆ ಮಠಗಳ ಕೊಡುಗೆ ಅಪಾರವಾಗಿದೆ. ಮಠಗಳಿಂದ ನಾವು ಸಂಸ್ಕಾರ ಕಲಿಯುತ್ತಿದ್ದೇವೆ. ವನಕಲ್ಲು ಮಲ್ಲೇಶ್ವರ ಸ್ವಾಮಿಯ ಕೃಪೆಯಿಂದ ಇಡೀ ನಾಡಿನೆಲ್ಲೆಡೆ ಉತ್ತಮ ಮಳೆ-ಬೆಳೆಯಾಗಲಿ, ಶ್ರೀ ಮಠದಲ್ಲಿ ಜಾತ್ರಾಮಹೋತ್ಸವ ಯಶಸ್ವಿಯಾಗಿರುವುದು ಸಂತಸವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ದಾಬಸ್‍ಪೇಟೆ: ನಾಡಿನ ಪ್ರಗತಿಗೆ ಮಠಗಳ ಕೊಡುಗೆ ಅಪಾರವಾಗಿದೆ. ಮಠಗಳಿಂದ ನಾವು ಸಂಸ್ಕಾರ ಕಲಿಯುತ್ತಿದ್ದೇವೆ. ವನಕಲ್ಲು ಮಲ್ಲೇಶ್ವರ ಸ್ವಾಮಿಯ ಕೃಪೆಯಿಂದ ಇಡೀ ನಾಡಿನೆಲ್ಲೆಡೆ ಉತ್ತಮ ಮಳೆ-ಬೆಳೆಯಾಗಲಿ, ಶ್ರೀ ಮಠದಲ್ಲಿ ಜಾತ್ರಾಮಹೋತ್ಸವ ಯಶಸ್ವಿಯಾಗಿರುವುದು ಸಂತಸವಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ವನಕಲ್ಲು ಮಲ್ಲೇಶ್ವರ ಮಠದಲ್ಲಿ 51ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಕವಿ-ಕಾವ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಮಠದ ಮೂಲ ಸೌಲಭ್ಯ ಅಭಿವೃದ್ಧಿಗೆ ಸದಾ ಸಿದ್ದನಾಗಿರುತ್ತೇನೆ, ಹಲವಾರು ವರ್ಷಗಳಿಂದ ನಮ್ಮ ಸಂಸ್ಕೃತಿಯಲ್ಲಿ ಸಮಾಜ ಸೇವೆ ಮಾನವನ ಸೇವೆ ಎಂಬಂತೆ ರೂಪುಗೊಂಡಿದೆ, ಜ್ಞಾರ್ನಾಜನೆ ಪ್ರತಿಯೊಬ್ಬರಿಗೂ ಮುಖ್ಯ, ಈ ಜಾತ್ರಾ ಮಹೋತ್ಸವ ಕಲೆ, ಸಂಸ್ಕೃತಿ, ಜಾನಪದೀಯತೆಯ ಪ್ರತೀಕವಾಗಿದೆ. ವನಕಲ್ಲು ಮಲ್ಲೇಶ್ವರ ಸ್ವಾಮಿಗಳ ಆಶೀರ್ವಾದದಿಂದ ಚೆನ್ನಾಗಿ ಮಳೆಯಾಗಲಿ ಈ ನಾಡು ಸುಭೀಕ್ಷವಾಗಲಿ ಎಂದರು.

ವನಕಲ್ಲು ಮಠದ ಡಾ.ಶ್ರೀ.ಬಸವರಮಾನಂದ ಸ್ವಾಮೀಜಿ ಮಾತನಾಡಿ, ಮಠಗಳೇ ಇಲ್ಲದಿದ್ದರೆ ಇವತ್ತು ಎಷ್ಟೋ ಕುಟುಂಬಗಳು ಬೀದಿಪಾಲಾಗುತ್ತಿದ್ದವು. ಮಠಗಳು ಧಾರ್ಮಿಕ ಕೇಂದ್ರಗಳಾಗದೇ ಸಾಮಾಜಿಕವಾಗಿ ತನ್ನದೇ ಆದ ಸೇವೆಯನ್ನು ಸಮಾಜಕ್ಕೆ ನೀಡುತ್ತಿವೆ. ಮಠಗಳ ಅಭಿವೃದ್ದಿಗೆ ಭಕ್ತರ ಸಹಕಾರ ಬೇಕಿದೆ. ನಮ್ಮ ಶಾಸಕರು ಸಹ ಮಠದ ಅಭಿವೃದ್ದಿಗೆ ಅನುದಾನ ನೀಡಿದ್ದಾರೆ. 15ನೇ ಶತಮಾನದಲ್ಲೇ ಶ್ರೀ ಕ್ಷೇತ್ರದ ಉಲ್ಲೇಖವಿದೆ, ಈಶ್ವರಸ್ವಾಮಿ, ಗಂಗೆ-ಗೌರಿಯನ್ನು ಜೊತೆಯಾಗಿ ಹೊಂದಿರುವ ಏಕೈಕ ಕ್ಷೇತ್ರವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಠದಿಂದ ಪ್ರತಿವರ್ಷ ನೀಡುವ ವನಕಲ್ಲುಶ್ರೀ ಪ್ರಶಸ್ತಿಯನ್ನು ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಸೀತಾರಾಮ್‌ಗೆ, ಜಗಜ್ಯೋತಿ ಪ್ರಶಸ್ತಿಯನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಗೆ, ವಿಶ್ವ ಜ್ಯೋತಿ ಪ್ರಶಸ್ತಿಯನ್ನು ಬೆಂಗಳೂರು ವಿವಿಯ ಹಿರಿಯ ಪ್ರಾಧ್ಯಾಪಕರಾದ ಡಾ.ಸಿ.ನಾಗಭೂಷಣರಿಗೆ, ಶ್ರೀ ಬಾಲಗಂಗಾಧರನಾಥ ಪ್ರಶಸ್ತಿಯನ್ನು ಸಂಸ್ಕೃತ ವಿಶ್ವವಿದ್ಯಾಲಯಯದ ನಿವೃತ್ತ ಸಿಂಡಿಕೇಟ್ ಸದಸ್ಯ ಡಾ.ಸಿ. ನಂಜುಂಡಯ್ಯರವರಿಗೆ ಹಾಗೂ ಶರಣಶ್ರೀ ಪ್ರಶಸ್ತಿಯನ್ನು ರಜತಾ ಶ್ರೀ ಶಿವಕುಮಾರ್ ರವರಿಗೆ ಪ್ರಧಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಕುಂಚಿಟಿಗ ಮಹಾಸಂಸ್ಥಾನದ ಡಾ.ಶ್ರೀ.ಶಾಂತವೀರ ಸ್ವಾಮೀಜಿ, ಗಾಣಿಗ ಮಹಾಸಂಸ್ಥಾನ ಮಠದ ಶ್ರೀ ಬಸವಕುಮಾರ ಸ್ವಾಮೀಜಿ, ಹಲವಾರು ಮಠಾಧೀಶರು, ಕಾಂಗ್ರೇಸ್ ಮುಖಂಡ ಅಗಳಕುಪ್ಪೆ ಗೋವಿಂದರಾಜು, ನರಸೀಪುರ ಗ್ರಾ.ಪಂ.ಅಧ್ಯಕ್ಷ ರಾಮಾಂಜಿನಯ್ಯ, ಮಠದ ನೂರಾರು ಸದ್ಬಕ್ತರು ಹಾಜರಿದ್ದರು.

ಫೆÇೀಟೋ 2 : ಸೋಂಪುರ ಹೋಬಳಿಯ ವನಕಲ್ಲು ಮಲ್ಲೇಶ್ವರ ಮಠದಲ್ಲಿ ನಡೆದ 51ನೇ ವರ್ಷದ ಜಾತ್ರಾ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಎನ್.ಶ್ರೀನಿವಾಸ್ ಮಾತನಾಡಿದರು.

Share this article