ಕನ್ನಡಪ್ರಭ ವಾರ್ತೆ, ತುರುವೇಕೆರೆ
ಜಡಯದ ತೋಟದ ಮನೆಯಲ್ಲಿ ಯೋಗೀಶ್, ರಾಟ್ ವೀಲರ್ ಜಾತಿಯ ನಾಯಿ ಸಾಕಿದ್ದರು. ತಡರಾತ್ರಿ ಆರು ಅಡಿಗೂ ಎತ್ತರವಿರುವ ಕಾಂಪೌಂಡ್ ಎಗರಿ ಒಳ ಬಂದ ಚಿರತೆ ಓಡಿಸಲು ನಾಯಿ ಪ್ರಯತ್ನಿಸಿದೆ. ನಂತರ ಚಿರತೆ, ನಾಯಿಯನ್ನು ಓಡಿಸಿಕೊಂಡು ಹೋಗಿದೆ.
ಯೋಗೀಶ್ ಅವರ ಸಹೋದರ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆ ಕಾಂಪೌಂಡ್ ಒಳಗೆ ಹಾರಿ ನಾಯಿಯ ಬೇಟೆ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆ ಮತ್ತು ಕರಡಿ ಹಿಡಿಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ.ಫೋಟೊ.....
೨ ಟಿವಿಕೆ ೧ತುರುವೇಕೆರೆ ತಾಲೂಕಿನ ಜಡೆಯ ಗ್ರಾಮದ ಯೋಗೇಶ್ ಅವರ ಮನೆಯ ಬಳಿ ಬಂದಿರುವ ಚಿರತೆ.