ಶಿಕ್ಷಣ ಆಯ್ಕೆ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣವಾಗಿರಲಿ: ಶೋಭಾ

KannadaprabhaNewsNetwork |  
Published : May 25, 2024, 12:45 AM IST
ಮೂಡಲಗಿ ಪಟ್ಟಣದ ಎಸ್.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮವನ್ನು ಉಪನ್ಯಾಸಕ ಡಾ.ಎಸ್.ಸಿ.ಅರಗಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಅಮ್ಮಾ ಫೌಂಡೇಶನ್ ಕಾರ್ಯದರ್ಶಿ ಶೋಭಾ ಗಸ್ತಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಪ್ರತಿಯೊಬ್ಬರಿಗೂ ಶಿಕ್ಷಣ ಬಹಳ ಮುಖ್ಯ. ಆದರೆ, ನಾವು ಆಯ್ಕೆ ಮಾಡಿಕೊಳ್ಳುವ ದಾರಿ ನಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣವಾಗಿರಲಿ ಎಂದು ರಾಯಬಾಗದ ಅಮ್ಮಾ ಫೌಂಡೇಶನ್ ಕಾರ್ಯದರ್ಶಿ ಶೋಭಾ ಗಸ್ತಿ ಹೇಳಿದರು.

ಪಟ್ಟಣದ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಯಬಾಗದ ಚಿಲ್ಡ್ರನ್ ಆಫ್‌ ಇಂಡಿಯಾ ಫೌಂಡೇಶನ್, ಅಮ್ಮಾ ಫೌಂಡೇಶನ್ ಮತ್ತು ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿವಾಪೂರ(ಹ) ಸರ್ಕಾರಿ ಪ್ರೌಢಶಾಲೆ ಉಪನ್ಯಾಸಕ ಡಾ.ಎಸ್.ಸಿ.ಅರಗಿ ಮಾತನಾಡಿ, ಯಾರು ತಮ್ಮ ಬಗ್ಗೆ ಕೀಳರಿಮೆ ಭಾವನೆ ಇಟ್ಟುಕೊಳ್ಳಬಾರದು. ಪ್ರಯತ್ನದಿಂದ ಎಲ್ಲರೂ ಸಾಧನೆ ಮಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗೆ ಕೆ.ಎ.ಎಸ್/ ಐ.ಎ.ಎಸ್ ಉಚಿತ ತರಬೇತಿಗಳ ಕುರಿತು ಮಾಹಿತಿ ನೀಡಿದರು.

ಅತಿಥಿ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕ ಆರ್.ವಿ.ಯರಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನ ಬಂಗಾರವಾಗಿಸಿ ಕೊಳ್ಳಬೇಕಾದರೇ ಶಿಕ್ಷಣ ಬೇಕು ಆ ನಿಟ್ಟಿನಲ್ಲಿ ಇವತ್ತಿನ ತರಬೇತಿಯಲ್ಲಿ ಹಲವಾರು ಮಾಹಿತಿಗಳನ್ನು ಪಡೆದುಕೊಂಡು ಅದರಲ್ಲಿ ಆಯ್ಕೆ ನಿಮ್ಮದಾಗಿರುತ್ತದೆ. ಹಾಗಾಗಿ ಒಳ್ಳೆಯದನ್ನು ಆಯ್ದುಕೊಂಡು ತಮ್ಮ ಜೀವನವನ್ನು ಬಂಗಾರವಾಗಿಸಿಕೊಳ್ಳಿ ಎಂದರು.

ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಾಜೇಂದ್ರಪ್ರಸಾದ ಆಸಂಗಿ ಮಾತನಾಡಿ, ಪಿಯುಸಿ ನಂತರ ಇರುವ ಕೋರ್ಸ್‌ಗಳ ಕುರಿತು ಸಮಗ್ರ ಮಾಹಿತಿ ನೀಡಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಇರುವ ಕೋರ್ಸ್‌ಗಳು, ಕೋರ್ಸಿನ ಅವಧಿ, ಕೋರ್ಸಿನಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯಗಳ ಕುರಿತು ಮಾಹಿತಿ ನೀಡಿದರು.

ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಾನೂರಕುಮಾರ ಗಾಣಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎನ್ ದಬಾಡಿ, ಗುಡ್ ಯೋಜನೆಯ ನೆಟವರ್ಕದ ಮಂಜುಳಾ ಹರಿಜನ, ಸಿಬ್ಬಂದಿಯರಾದ ಕಾಂಚನಾ ಮೇತ್ರಿ, ಲಕ್ಷ್ಮೀ ಹತ್ತರಕಿ ಮತ್ತು ಚಿಕ್ಕೋಡಿ ಮತ್ತು ಗೋಕಾಕ ವಲಯದಿಂದ 31 ಬದಲಾವಣೆಯ ಹರಿಕಾರರು, ಕಾರ್ಯಕ್ರಮದಲ್ಲಿ ಗುಡ್ ಯೋಜನೆಯ ಗೋಕಾಕ, ಮೂಡಲಗಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಿಂದ 31 ಕಿಶೋರಿಯರು ಭಾಗವಹಿಸಿದ್ದರು. ಮಂಜುಳಾ ಹರಿಜನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಸ್ವಾಗತಿಸಿದರು. ಗುಡ್ವ ಯೋಜನೆಯ ಸಂಯೋಜಕರಾದ ಯಲ್ಲಪ್ಪ ಮಾದರ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಸಿಸಿ ಬ್ಯಾಂಕ್ ಚುನಾವಣೆ: ನಾಮಪತ್ರ ಹಿಂಪಡೆವ ಅವಧಿ ವಿಸ್ತರಣೆ
ಒಡೆದ ಮನಸ್ಸುಗಳ ಒಗ್ಗೂಡಿಸುವ ಶಕ್ತಿ ಆಧ್ಯಾತ್ಮದಲ್ಲಿದೆ: ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ