ಕನ್ನಡಪ್ರಭವಾರ್ತೆ ತಿಪಟೂರು
ತಿಪಟೂರು ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕುಣಿಗಲ್‌ನ ಕೃಷಿ ಸಂಶೋದನಾ ಕೇಂದ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಅಂಗ ಸಂಸ್ಥೆಗಳಾದ ಕುಣಿಗಲ್, ಪಾವಗಡ ಕೃಷಿ ಸಂಶೋಧನಾ ಕೇಂದ್ರಗಳು, ಕೃಷಿ ಸಂಬಂದಿತ ಇಲಾಖೆಗಳು, ಜಿಲ್ಲಾ ಹಾಲು ಒಕ್ಕೂಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಹಾಗೂ ಐ.ಡಿ.ಎಫ್ ಇವರ ಸಹಯೋಗದಲ್ಲಿ ಮುಂಗಾರು ತಾಂತ್ರಿಕ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರೈತರು ಈ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು, ಸುಧಾರಿತ ತಳಿಗಳ ಲಭ್ಯತೆಯ ಮಾಹಿತಿಗಾಗಿ ಈ ಮುಂಗಾರು ತಾಂತ್ರಿಕ ಆಂದೋಲನ ಆಯೋಜಿಸಲಾಗಿದೆ. ರೈತರು ಕೃಷಿ ಯಂತ್ರೋಪಕರಣಗಳ ಉಪಯೋಗಿಸಿ ಕಡಿಮೆ ವೆಚ್ಚದಲ್ಲಿ ಕೃಷಿ ಮಾಡಲು ಮುಂದಾಗಬೇಕು. ತಾಂತ್ರಿಕ ಕೃಷಿ ಅಧಿಕಾರಿಗಳನ್ನ ಸಂಪರ್ಕಿಸಿ ಆಯಾ ಕಾಲಕ್ಕೆ ತಕ್ಕಂತೆ ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯುವತ್ತ ಗಮನ ಹರಿಸಬೇಕೆಮದು ತಿಳಿಸಿದರು. ಹಾಸನ ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ. ಒ.ಆರ್ ನಟರಾಜು ಮಾತನಾಡಿ ರೈತರು ಎಲ್ಲಾ ಜಾನುವಾರುಗಳಿಗೆ ವೈದ್ಯಾಧಿಕಾರಿಗಳ ಸಲಹೆ ಪಡೆದು ಜಂತುಹುಳುವಿನ ಔಷಧಿಯನ್ನು ನೀಡಬೇಕು. ವರ್ಷದಲ್ಲಿ ಎರಡು ಬಾರಿ ಕಾಲು ಮತ್ತು ಬಾಯಿ ಜ್ವರಕ್ಕೆ ಲಸಿಕೆಯನ್ನು ಹಾಕಿಸಬೇಕು. ಹಾಲಿನ ಸ್ವಚ್ಚತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಹಾಗೂ ಶುದ್ಧ ಹಾಲು ಉತ್ಪಾದನೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ರಂಗನಾಥ್ ಮಾತನಾಡಿ, ಪ್ರಸ್ತುತ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆ ನೀರೀಕ್ಷಿಸುತ್ತಿದ್ದು ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅವಶ್ಯಕ ಕೃಷಿ ಪರಿಕರಗಳು ದೊರೆಯುತ್ತಿದ್ದು ಈ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಲು ಹಾಗೂ ಪ್ರತಿಯೊಬ್ಬ ರೈತರು ಇ-ಕೆವೈಸಿ, ಪ್ರೂಟ್ ಐಡಿ ಮಾಡಿಸಬೇಕು ಮತ್ತು ಯುರಿಯಾ ಬದಲಿಗೆ ಸಾವಯವ, ಸಮತೋಲಿತ ಗೊಬ್ಬರಗಳನ್ನು ಬಳಸಿ ಎಂದು ತಿಳಿಸಿದರು. ಬೆಂಗಳೂರು ಕೃ.ವಿ.ವಿ ಸಹ ಪ್ರಾಧ್ಯಾಪಕ ಡಾ. ಎಂ. ಎಚ್. ಮಂಜುನಾಥ ಮಾತನಾಡಿ, ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದ್ದು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹಸಿರೆಲೆ ಗೊಬ್ಬರಗಳನ್ನು ಬೆಳೆಯುವುದರಿಂದ ಅಧಿಕ ಇಳುವರಿ ಪಡೆಯುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದರು.