ದೊಡ್ಡಬಳ್ಳಾಪುರ: ನಗರದಲ್ಲಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕಗಳಲ್ಲಿ ಸೂಕ್ತ ನಿರ್ವಹಣೆಯೇ ಇಲ್ಲ. ನಗರದ ಹಲವೆಡೆ ಕಲುಷಿತ ನೀರು ಸರಬರಾಜು ಆಗುತ್ತಿದೆ. ಒಳ ಚರಂಡಿ ಛೇಂಬರ್‌ಗಳ ಅವ್ಯವಸ್ಥೆ ಸರಿಯಾಗಿಲ್ಲ. ಸೂಕ್ತ ನಿರ್ವಹಣೆ ಮಾಡುವಲ್ಲಿ ನಗರಸಭೆ ಸಿಬ್ಬಂದಿ ವಿಫಲರಾಗಿದ್ದಾರೆ ಎಂದು ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
18ನೇ ವಾರ್ಡ್‌ಗಳಲ್ಲಿ ವಾರಕ್ಕೊಮ್ಮೆ ನೀರು ಸರಬರಾಜು ಆಗುತ್ತಿದ್ದರೂ, ಕೆಲವು ಗಂಟೆಗಳಷ್ಟೇ ಬಿಡಲಾಗುತ್ತಿದೆ. ಈ ಅವಧಿ ಹೆಚ್ಚು ಮಾಡಬೇಕು. ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸದಸ್ಯ ಶಿವಣ್ಣ ಆಗ್ರಹಿಸಿದರು.
ಖಾಸ್‌ಬಾಗ್ ದರ್ಗಾಪುರದಲ್ಲಿ ನೀರು ಕಲುಷಿತ ವಾಗುತ್ತಿದೆ ಎಂದು ಸದಸ್ಯ ಎಂ.ಮಲ್ಲೇಶ್ ದೂರಿದರು. ನೀರು ಶುದ್ದೀಕರಣ ಘಟಕಗಳ ಶುದ್ದೀಕರಣದ ಬಗ್ಗೆ ಪ್ರಯೋಗಾಲಯದ ವರದಿ ಪ್ರಕಟಿಸಿ, ನೀರಿನ ಶುದ್ಧತೆಯನ್ನು ಜನರಿಗೆ ತಿಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.ನಗರದಲ್ಲಿ ಒಳ ಚರಂಡಿ ಛೇಂಬರ್‌ಗಳು ಕಟ್ಟಿಕೊಂಡು ಮನೆಗಳ ಬಳಿ ದುರ್ನಾತ ಬೀರುತ್ತಿದೆ. ಸೂಕ್ತ ನಿರ್ವಹಣೆ ಆಗುತ್ತಿಲ್ಲ. ನಗರದ ರಸ್ತೆಗಳು ಹಾಳಾಗಿದ್ದು, ಗುಂಡಿಗಳೇ ಹೆಚ್ಚಾಗಿವೆ. ನೀರು ಸರಬರಾಜು ಮತ್ತು ಎಂಜಿನಿಯರಿಂಗ್ ವಿಭಾಗಗಳನ್ನು ಒಬ್ಬರೇ ನಿರ್ವಹಿಸುತ್ತಿರುವುದು ಸಹ ಕಾರಣ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಸದಸ್ಯ ಡಿ.ಎಂ.ಆನಂದ್ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಆರ್. ಕಾರ್ತಿಕೇಶ್ವರ, ಇತರ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ನೀರಿನ ಗಂಭೀರ ಸಮಸ್ಯೆ ಇಲ್ಲ. ಕೆಲವು ಬಾರಿ ವಿದ್ಯುತ್ ಸಮಸ್ಯೆಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇನ್ನು ಒಳಚರಂಡಿ ಯನ್ನು ದುರಸ್ತಿ ಮಾಡಬೇಕಿದೆಯೇ ಹೊರತು ಹೊಸದಾಗಿ ನಿರ್ಮಾಣ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು. ಸಾರ್ವಜನಿಕರು ಓಡಾಡಲು ತೊಂದರೆಯಾಗಿದ್ದು, ದುರಸ್ತಿ ಮಾಡಬೇಕು ಎಂಬ ಒತ್ತಾಯಕ್ಕೆ ಸದಸ್ಯರು ದನಿಗೂಡಿಸಿದರು.ಇ- ಆಡಳಿತದಲ್ಲಿ ದಾಖಲೆಗಳ ನೆಪವೊಡ್ಡಿ, ಯಾವುದೇ ಕೆಲಸಗಳಾಗುತ್ತಿಲ್ಲ. ಅಪ್‌ಲೋಡ್ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.
ನಗರದಲ್ಲಿ ನಗರೋತ್ಥಾನ ಯೋಜನೆಯ ಕೆಲಸಗಳು ವಿಳಂಬವಾಗುತ್ತಿವೆ. ಇರುವ ನಾಲ್ಕು ತಿಂಗಳಲ್ಲಿ ಇನ್ನು ಎಷ್ಟು ಕಾಮಗಾರಿಗಳನ್ನು ಪೂರೈಸಲು ಸಾಧ್ಯ ಎಂದು ಪ್ರಶ್ನಿಸಿದ ಸದಸ್ಯ ವಿ.ಎಸ್.ರವಿಕುಮಾರ್, ''''''''''''''''''''''''''''''''''''''''''''''''''''''''''''''''ಟೆಂಡರ್ ಕರೆದಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಬೇಕು. ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ಬಾಹಿರ ಅನುದಾನ ಅನುಮೋದನೆ
ಅಧ್ಯಕ್ಷರು ಟ್ರಸ್ಟ್ ವಿಚಾರದಲ್ಲಿ ತಪ್ಪು ತೀರ್ಮಾನ ಕೈಗೊಂಡಿದ್ದಾರೆ. ನಿಯಮ ಬಾಹಿರವಾಗಿ ಟ್ರಸ್ಟ್‌ಗೆ ಅನುದಾನ ನೀಡಿರುವುದು ಸರಿಯಲ್ಲ ಎಂದು ಸದಸ್ಯ ಎಂ.ಜಿ.ಶ್ರೀನಿವಾಸ್ ಆಕ್ಷೇಪಿಸಿದರು.
ಟ್ರಸ್ಟ್‌ಗಳಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಹಿರಿಯ ಸದಸ್ಯರು ಹಾಗೂ ವಾರ್ಡ್ ಮುಖಂಡರು ಸೇರಿ ಒಂದು ಸಮಿತಿ ಮಾಡುವ ಮೂಲಕ ಗರಡಿ ಮನೆ ಉಳಿಸಬೇಕು. ಇದರಿಂದ ಸಮಾಜಕ್ಕೆ ಒಳ್ಳೆಯದಾಗುವ ಕೆಲಸವಾಗಬೇಕು ಎಂದು ಸದಸ್ಯ ಎಚ್.ಎಸ್.ಶಿವಶಂಕರ್ ಸಲಹೆ ನೀಡಿದರು.ಫೋಟೋ-19ಕೆಡಿಬಿಪಿ2-
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ಆರ್.ಕಾರ್ತಿಕೇಶ್ವರ, ನಿಕಟಪೂರ್ವ ಅಧ್ಯಕ್ಷೆ ಸುಮಿತ್ರಾ ಆನಂದ್, ಉಪಾಧ್ಯಕ್ಷ ಬಂತಿವೆಂಕಟೇಶ್ ಭಾಗವಹಿಸಿದ್ದರು.