ಹನುಮಸಾಗರ: ನಿಜಶರಣ ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಮೌಢ್ಯತೆ ಹಾಗೂ ಜಾತಿ ಪದ್ಧತಿ ನಿರ್ಮೂಲನೆಗೆ ಶ್ರಮಿಸಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಭೀಮಪ್ಪ ಗೊಲ್ಲರ ಹೇಳಿದರು.
ಅಂಬಿಗರ ಚೌಡಯ್ಯ 12ನೇ ಶತಮಾನದ ಒಬ್ಬ ಶ್ರೇಷ್ಠ ವಚನಕಾರರು. ವಿದ್ಯಾರ್ಥಿಗಳು ಅವರ ಬಗ್ಗೆ ಓದಿ ತಿಳಿದುಕೊಳಬೇಕು. ಅವರ ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ ಹಾಗೂ ಸ್ಫೂರ್ತಿದಾಯಕವಾಗಿವೆ. ಯಾರಾದರೂ ತಪ್ಪು ಮಾಡಿದರೆ ಖಂಡಿಸಿ ನೇರವಾಗಿ ಮಾತನಾಡುವ ಮೂಲಕ ಹೆಸರುವಾಸಿಯಾಗಿದ್ದರು. ಭಕ್ತಿಯ ಜತೆಗೆ ಅಂತರಂಗದ ಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಎಂದರು.
ಉಪನ್ಯಾಸಕ ಲಕಪತಿ ರಾಠೊಡ, ಶರಣಪ್ಪ, ಭರಮಲಿಂಗೇಶ ದೇವರಮನಿ, ಗೀತಾ ಬಂಡಿಹಾಳ, ವನಜಾಕ್ಷಿ ಪಾಟೀಲ್ ಇದ್ದರು.