ವಚನಗಳ ಮೂಲಕ ಚೌಡಯ್ಯನವರು ಸಮಾಜದ ಅಂಕು ಡೊಂಕುಗಳ ತಿದ್ದಿದರು

KannadaprabhaNewsNetwork |  
Published : Jan 22, 2025, 12:31 AM IST
ಪೋಟೋ : 21ಎಚ್‌ಎನ್‌ಎಲ್3ಶೀರ್ಷಿಕೆ: ಪಟ್ಟಣದ ತಹಶಿಲ್ದಾಋ ಕಾಯಾಲಯದ ಸಭಾಭವನದಲ್ಲಿ ತಾಲೂಕು ಆಡಳಿತ ವತಿಯಿಂದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು | Kannada Prabha

ಸಾರಾಂಶ

ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದರೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರು ನೇರ ನಿಷ್ಠುರವಾದಿಯಾಗಿದ್ದರು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ತಹಸೀಲ್ದಾರ್ ರೇಣುಕಾ ಎಸ್. ತಿಳಿಸಿದರು.

ಹಾನಗಲ್ಲ: ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದರೊಂದಿಗೆ ನಿಜಶರಣ ಅಂಬಿಗರ ಚೌಡಯ್ಯನವರು ನೇರ ನಿಷ್ಠುರವಾದಿಯಾಗಿದ್ದರು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷೆ ತಹಸೀಲ್ದಾರ್ ರೇಣುಕಾ ಎಸ್. ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಬಸವಾದಿ ಶರಣರ ಅನುಭವ ಮಂಟಪದಲ್ಲಿ ಅನೇಕ ಶರಣರು ತಮ್ಮ ಕಾಯಕದ ಮೂಲಕ ಮನಸ್ಸನ್ನು ಹಾಗೂ ಸಮಾಜವನ್ನು ಶುಚಿಗೊಳಿಸುವಂತ ಕಾರ್ಯವನ್ನು ಮಾಡಿದ್ದಾರೆ. ಅಂತವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು. ಅಂಬಿಗ ಎನ್ನುವ ಕಾಯಕದ ಮೂಲಕ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಅಂತಹ ಮಹಾನ್ ಆದರ್ಶ ವ್ಯಕ್ತಿಗಳ ಜಯಂತಿಗಳು ಬರೀ ಜಯಂತಿಗೆ ಮಾತ್ರ ಸೀಮಿತವಾಗಿಬಾರದು. ಮುಂದೆ ಅವರ ಆದರ್ಶಗಳನ್ನು ಪಾಲಿಸಿದರೇ ಮಾತ್ರ ಜಯಂತಿಗಳಿಗೆ ಅರ್ಥಬರುವುದೆಂದು ವಿವರಿಸಿದರು.ಈ ಸಂದರ್ಭದಲ್ಲಿ ಉಪ ತಹಸೀಲ್ದಾರ್‌ ರವಿ ಕೊರವರ, ಗಂಗಾಮತ ತಾಲೂಕು ಅಧ್ಯಕ್ಷ ಪ್ರದೀಪ್ ಶೇಷಗಿರಿ, ಪುರಸಭೆ ಅಧ್ಯಕ್ಷೆ ವೀಣಾ ಗುಡಿ ಮಾತನಾಡಿದರು. ಇದಕ್ಕೂ ಮೊದಲು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ತಾಲೂಕು ಆಡಳಿತ ಹಾಗೂ ಗಂಗಾಮತ ಸಮಾಜ ಬಾಂಧವರು ಪುಷ್ಪ ನಮನ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಶಹರ ಘಟಕದ ಅಧ್ಯಕ್ಷ ನಾಗೇಂದ್ರ ತುಮರಿಕೊಪ್ಪ, ,ಮಾಜಿ ಅಧ್ಯಕ್ಷ ಪರಶುರಾಮ್ ನಿಂಗೋಜಿ, ಕರಿಯಪ್ಪ ಆನವಟ್ಟಿ, ಮುಖಂಡರಾದ ಗುಡ್ಡಪ್ಪ ತಿಪ್ಪಿಗುಂಡೇರ, ಸತೀಶ ಕೂಸನೂರ, ಗುಡ್ಡಪ್ಪ ಗೋಯಿಕಾಯಿ, ಬಸವಂತಪ್ಪ ಗುಡಿಕೇರಿ, ಲೊಕೇಶ ಕೊಂಡೋಜಿ, ರವಿ ನಿಂಬಣ್ಣನವರ, ಸತೀಶ ಕುಸನೂರ, ಚಂದ್ರು ಮಲಗುಂದ, ಮೈಲಾರಣ್ಣ ಶೇಷಗಿರಿ, ಅರ್ಜುನ್ ಚಿಕ್ಕಣ್ಣನವರ, ಶಿವು ಬಂಗಾರಿ, ಮಂಜುನಾಥ ಪೂಜಾರ, ಅಣ್ಣಪ್ಪ ಚಾಕಾಪುರ, ಮಾಲತೇಶ ತಳಗೇರಿ ಚಂದ್ರಗೌಡ ಪಾಟೀಲ, ಮಂಜು ಹಳೆಕೋಟಿ, ಸುರೇಶ ಮಾಸನಕಟ್ಟಿ, ನಾರಾಯಣ ಕಠಾರಿ, ಸಹದೇವ ಪೂಜಾರ, ಅಣ್ಣಪ್ಪ ಬಾರ್ಕಿ, ಭಾಸ್ಕರ ಹುಲ್ಮನಿ, ನಾಗೇಂದ್ರ ಚಿಕ್ಕಣ್ಣನವರ, ಸುರೇಶ ಮಾಸನಕಟ್ಟಿ, ಸೇರಿದಂತೆ ವಿವಿಧ ಇಲಖೆಯ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV

Recommended Stories

ಪ್ರಧಾನಿ ಮೋದಿಗೆ ವೇದಿಕೆಯಲ್ಲೇ ಮನವಿ ಪತ್ರ ನೀಡಿ ಗಮನ ಸೆಳೆದ ಶಿವಕುಮಾರ್
ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮ