ಕನ್ನಡಪ್ರಭ ವಾರ್ತೆ ಹಲಗೂರು
ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕೇಕ್ ಕತ್ತರಿಸಿ ಕಾರ್ಯಕರ್ತರಿಗೆ ತಿನ್ನಿಸಿ ಎಚ್ಡಿಕೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ನಂತರ ಮಾತನಾಡಿದ ಅವರು, ಹಲಗೂರು ಹೋಬಳಿಯ ಬಿಜೆಪಿ, ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು, ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ.ದೇವೇಗೌಡ, ಯುವ ಮುಖಂಡ ನಿಖಿಲ್ ಕುಮಾರಸ್ವಾಮಿಯ ಅಭಿಮಾನಿಗಳೊಂದಿಗೆ ಪಕ್ಷದ ಹಿರಿಯ ಮುಖಂಡರು ಸೇರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಎಚ್.ಡಿ.ಕುಮಾರಸ್ವಾಮಿ ಉಕ್ಕು ಮತ್ತು ಬೃಹತ್ ಕಾರ್ಖಾನೆಗಳ ಸಚಿವರಾಗಿದ್ದಾರೆ. ಮಂಡ್ಯ ಜಿಲ್ಲೆ ಸಂಸತ್ ಸದಸ್ಯರಾಗಿ ದೇಶದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಇದು ನಮಗೆಲ್ಲ ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಗಾಗಿ ಇನ್ನು ಹೆಚ್ಚಿನ ಕೆಲಸಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಎಚ್ಡಿಕೆ ಅವರಿಗೆ ದೇವರು ಇನ್ನೂ ಹೆಚ್ಚಿನ ಆಯುಸ್ಸು, ಆರೋಗ್ಯ ನೀಡ ಕಾಪಾಡಲಿ ಎಂದು ಹಾರೈಸಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಈ ವೇಳೆ ಮುಖಂಡರಾದ ಎಚ್.ಎನ್.ರಾಮಚಂದ್ರೇಗೌಡ, ಸುರೇಂದ್ರ , ಸೋಮಶೇಖರ್, ತಮ್ಮಣ್ಣಿಗೌಡ , ಸುರೇಶ, ಸದಾಶಿವ, ಎಚ್. ಆರ್. ವಿಶ್ವ. ರವಿ ಮೋದಿ, ರವೀಶ, ಶಿವಕುಮಾರ್, ಬಾಬು ಸೇರಿದಂತೆ ಇತರರು ಇದ್ದರು.ಮಾಜಿ ಸಿಎಂ ಎಚ್ಡಿಕೆ ಹುಟ್ಟುಹಬ್ಬ ಅಭಿಮಾನಿಗಳಿಂದ ದೇವರಿಗೆ ಪೂಜೆ ಸಲ್ಲಿಕೆ
ಶ್ರೀರಂಗಪಟ್ಟಣ:ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಪಟ್ಟಣದ ಮೂಡಲ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಎಚ್‌ಡಿಕೆ ಗ್ರೂಪ್‌ನ ಅಧ್ಯಕ್ಷ ಕಿರಂಗೂರು ಕುಮಾರಸ್ವಾಮಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಗಳಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಅವರನ್ನು ಹೆಚ್ಚು ಪ್ರೀತಿಸುವ ಅಭಿಮಾನಿಗಳಿದ್ದಾರೆ. ಅವರ ಆರೋಗ್ಯವು ಸಹ ಉತ್ತಮವಾಗಿರಲ್ಲಿ ಎಂದು ದೇವರಲ್ಲಿ ಮೊರೆ ಇಡಲಾಗಿದೆ ಎಂದರು.ರಾಜ್ಯದಲ್ಲಿ ಮತ್ತೆ ಜೆಡಿಎಸ್ ಪಕ್ಷ ಹೆಚ್ಚಿನ ರೀತಿಯಲ್ಲಿ ಸಂಘಟಿಸಿ ಅಸೆಂಬ್ಲಿಯಲ್ಲಿ ಹೆಚ್ಚಿನ ಸ್ಥಾನಗಳ ಗಳಿಸಿ ಮತ್ತೆ ರಾಜ್ಯದ ಮುಖ್ಯ ಮಂತ್ರಿಗಳಾಗಲಿ ಎಂದು ದೇವಾಲಯದಲ್ಲಿ ಆಂಜನೇಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಈ ವೇಳೆ ಪುರಸಭೆ ಸದಸ್ಯರಾದ ಎಸ್.ಪ್ರಕಾಶ್, ನಗುವನಹಳ್ಳಿ ಶಿವಸ್ವಾಮಿ, ಬೆಟ್ಟೇಗೌಡ, ಜಗದೀಶ್, ನೆಲಮನೆ ಗುರು, ಸ್ವಾಮೀಗೌಡ ಸೇರಿದಂತೆ ಇತರ ಅಭಿಮಾನಿಗಳು ಭಾಗವಹಿಸಿದರು.