ಕ್ರಿಸ್‌ಮಸ್‌ ಪ್ರಯುಕ್ತ ಮೆರವಣಿಗೆ

KannadaprabhaNewsNetwork |  
Published : Dec 18, 2025, 12:15 AM IST
17ಎಚ್ಎಸ್ಎನ್11 : ಕ್ರಿಸ್ಮಸ್ ಹಬ್ಬದ ಸಂಭ್ರಮ: ಬೇಲೂರಿನಲ್ಲಿ ಕ್ರೈಸ್ತ ಬಾಂಧವರಿಂದ ಭವ್ಯ ಕ್ರಿಸ್ಮಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಮೆರವಣಿಗೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಭಕ್ತರು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ಫಲಕಗಳು, ಕ್ರಿಸ್‌ಮಸ್‌ ಗೀತೆಗಳು ಹಾಗೂ ಕ್ರಿಸ್‌ಮಸ್‌ ತಾತ ಮತ್ತು ಪುಟಾಣಿ ಮಕ್ಕಳು ಸಂಭ್ರಮದ ಘೋಷಣೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಪ್ರತಿಧ್ವನಿಸಿತು. ಹಬ್ಬದ ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳು ಹಾಗೂ ಯುವಕರು ಮಹಿಳೆಯರು ಮೆರವಣಿಗೆಗೆ ವಿಶೇಷ ಆಕರ್ಷಣೆಯಾದರು.

ಬೇಲೂರು: ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಬೇಲೂರು ನಗರದಲ್ಲಿ ಕ್ರೈಸ್ತ ಬಾಂಧವರಿಂದ ಭವ್ಯವಾದ ಕ್ರಿಸ್‌ಮಸ್‌ ಮೆರವಣಿಗೆ ನಡೆಸಲಾಯಿತು.

ನಗರದ ಜೂನಿಯರ್ ಕಾಲೇಜ್ ಮೈದಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಕ್ರೈಸ್ತ ಸಮುದಾಯದ ನೂರಾರು ಭಕ್ತರು ಭಾಗವಹಿಸಿ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಮೆರವಣಿಗೆಯಲ್ಲಿ ಯೇಸು ಕ್ರಿಸ್ತನ ಜನನದ ಸಂದೇಶ ಸಾರುವ ಫಲಕಗಳು, ಕ್ರಿಸ್‌ಮಸ್‌ ಗೀತೆಗಳು ಹಾಗೂ ಕ್ರಿಸ್‌ಮಸ್‌ ತಾತ ಮತ್ತು ಪುಟಾಣಿ ಮಕ್ಕಳು ಸಂಭ್ರಮದ ಘೋಷಣೆಗಳು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಪ್ರತಿಧ್ವನಿಸಿತು. ಹಬ್ಬದ ಸಾಂಪ್ರದಾಯಿಕ ಉಡುಪು ಧರಿಸಿದ ಮಕ್ಕಳು ಹಾಗೂ ಯುವಕರು ಮಹಿಳೆಯರು ಮೆರವಣಿಗೆಗೆ ವಿಶೇಷ ಆಕರ್ಷಣೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ತ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ಸುರೇಶ್ ಬಾಂಡ್ ಅವರು, ತಾಲೂಕಿನ ಸಮಗ್ರ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಮುಖಂಡರು, ಧಾರ್ಮಿಕ ಗುರುಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ಮೆರವಣಿಗೆಯು ಶಾಂತಿ ಮತ್ತು ಶಿಸ್ತುಬದ್ಧವಾಗಿ ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ