ದಾಬಸ್‌ಪೇಟೇಲಿ ಸಿಐಎಸ್‍ಎಫ್ ಯೋಧರಿಂದ ಸ್ವಚ್ಛತಾ ಕಾರ್ಯ

KannadaprabhaNewsNetwork |  
Published : Sep 23, 2025, 01:03 AM IST
ಪೋಟೋ 2 : ದಾಬಸ್‍ಪೇಟೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೆಂಗಳೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) 10ನೇ ರಿಸರ್ವ್ ಬೆಟಾಲಿಯನ್‍ನ 245 ಯೋಧರು ಸ್ವಚ್ಛತಾ ಹಿ ಸೇವಾ - 2025 ಅಭಿಯಾನದಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು | Kannada Prabha

ಸಾರಾಂಶ

ದಾಬಸ್‍ಪೇಟೆ: ಪಟ್ಟಣದಲ್ಲಿರುವ ಬೆಂಗಳೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) 10ನೇ ರಿಸರ್ವ್ ಬೆಟಾಲಿಯನ್‍ನ 245 ಯೋಧರು ಸ್ವಚ್ಛತಾ ಹಿ ಸೇವಾ-2025 ಅಭಿಯಾನದಡಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು.

ದಾಬಸ್‍ಪೇಟೆ: ಪಟ್ಟಣದಲ್ಲಿರುವ ಬೆಂಗಳೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) 10ನೇ ರಿಸರ್ವ್ ಬೆಟಾಲಿಯನ್‍ನ 245 ಯೋಧರು ಸ್ವಚ್ಛತಾ ಹಿ ಸೇವಾ-2025 ಅಭಿಯಾನದಡಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಶಾಲೆ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಿದರು. ಬೆಂಗಳೂರಿನ ಸಿಐಎಸ್‍ಎಫ್ 10ನೇ ಆರ್‌ಬಿ ಹಿರಿಯ ಕಮಾಂಡೆಂಟ್ ಶಿವದತ್ತಕುಮಾರ್ ಮಾತನಾಡಿ, ಸೈನಿಕರು ಆರೋಗ್ಯಕರ ಸಮಾಜ ನಿರ್ಮಿಸಲು ಸಾರ್ವಜನಿಕ ಸ್ಥಳಗಳನ್ನು ಗುರುತಿಸಿ ಸ್ವಚ್ಛಗೊಳಿಸುವ ಅಭಿಯಾನ ಹಮ್ಮಿಕೊಂಡಿದ್ದಾರೆ. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸರ್ಕಾರಿ ಶಾಲೆ ಸುತ್ತಮುತ್ತಲಿನ ಪ್ರದೇಶಗಳನ್ನು 220 ಯೋಧರು ಸ್ವಚ್ಛತೆ ಮತ್ತು ಹಸಿರಿನ ಮಾದರಿಯಾಗಿ ಪರಿವರ್ತಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಮಾಂಡೆಂಟ್ ವಿಕಾಸ್ ಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್ ರಾಜೀವ್ ಚೌಹಾಣ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಪೂಜರಾಮಯ್ಯ, ದಾಬಸ್‍ಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಗಂಗಾಧರ್, ಎಸ್‌ಬಿ ಪೇದೆ ರಂಗನಾಥ್ ಮೊದಲಾದವರು ಉಪಸ್ಥಿತರಿದ್ದರು. ಪೋಟೋ 2 : ದಾಬಸ್‍ಪೇಟೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬೆಂಗಳೂರಿನ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 10ನೇ ರಿಸರ್ವ್ ಬೆಟಾಲಿಯನ್‍ 245 ಯೋಧರು ಸ್ವಚ್ಛತಾ ಹಿ ಸೇವಾ - 2025 ಅಭಿಯಾನಕ್ಕೆ ಬೆಂಗಳೂರಿನ ಸಿಐಎಸ್‍ಎಫ್ 10ನೇ ಆರ್‌ಬಿ ಹಿರಿಯ ಕಮಾಂಡೆಂಟ್ ಶಿವದತ್ತಕುಮಾರ್ ಚಾಲನೆ ನೀಡಿದರು. ಕಮಾಂಡೆಂಟ್ ವಿಕಾಸ್ ಕುಮಾರ್, ಅಸಿಸ್ಟೆಂಟ್ ಕಮಾಂಡೆಂಟ್ ರಾಜೀವ್ ಚೌಹಾಣ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ಪೂಜರಾಮಯ್ಯ, ದಾಬಸ್‍ಪೇಟೆ ಪೊಲೀಸ್ ಠಾಣೆಯ ಎಎಸ್‍ಐ ಗಂಗಾಧರ್, ಎಸ್‌ಬಿ ಪೇದೆ ರಂಗನಾಥ್ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆಕೋರಿಕೆ:ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ