ಕಾರ್ಮಿಕರ ವೇತನ ಕಡಿತಕ್ಕೆ ಸಿಐಟಿಯು ಆಕ್ರೋಶ

KannadaprabhaNewsNetwork |  
Published : Mar 12, 2026, 12:30 AM IST
11 | Kannada Prabha

ಸಾರಾಂಶ

ದೇವನಹಳ್ಳಿ: ಫೆ.೧೨ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರ್ಮಿಕರು, ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದ ಕಾರ್ಮಿಕರ ೮ ದಿನದ ವೇತನವನ್ನು ಕಡಿತ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದರು

ದೇವನಹಳ್ಳಿ: ಫೆ.೧೨ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಭಾಗಿಯಾಗಿದ್ದ ಕಾರ್ಮಿಕರು, ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದ ಕಾರ್ಮಿಕರ ೮ ದಿನದ ವೇತನವನ್ನು ಕಡಿತ ಮಾಡಿರುವುದನ್ನು ಖಂಡಿಸುತ್ತೇವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕೆಲಸಕ್ಕೆ ರಜೆ ಹಾಕಿದ್ದ ಪ್ರತಿ ಕಾರ್ಮಿಕರು ಕನಿಷ್ಠ ೮ ಸಾವಿರ ರು.ಗಳಿಂದ ಗರಿಷ್ಠ ೧೮ ಸಾವಿರದವರೆಗೆ ಅಕ್ರಮ ವೇತನ ಕಡಿತದಿಂದ ತೊಂದರೆಗೆ ಒಳಗಾಗಿದ್ದಾರೆ. ಆಡಳಿತ ವರ್ಗ ಕಾನೂನು ಬಾಹಿರವಾಗಿ ಘೋಷಣೆ ಮಾಡಿದ ಪರ್ಯಾಯ ದಿನದಂದು ಕೆಲಸಕ್ಕೆ ಹಾಜರಾಗಿಲ್ಲ ಎಂಬ ಕಾರಣಕ್ಕಾಗಿ ವೇತನ ಕಡಿತಮಾಡಿ ದೇಶದ ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಕಡಿತಗೊಳಿಸಿರುವ ವೇತನವನ್ನು ವಾಪಸ್ ನೀಡಬೇಕು, ಇಲ್ಲವಾದರೆ ಸಂಘಟನೆ ಕಾನೂನಾತ್ಮಕ ಹೋರಾಟ ಮಾಡುತ್ತದೆ ಎಂದರು.

ಇದೆ ವೇಳೆ ಸಿಐಟಿಯು ಜಿಲ್ಲಾ ಖಜಾಂಚಿ ಎಚ್.ಎನ್.ಮೋಹನ್‌ಬಾಬು, ಕಾರ್ಯದರ್ಶಿ ಎಂ.ವೆಂಕಟರಾಜು, ಆಟೋಲೀವ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ.ಎ, ಜಿಲ್ಲಾ ನಿರ್ದೇಶಕಿ ಪುಷ್ಪಾವತಮ್ಮ, ಮುಖಂಡರಾದ ವೆಂಕಟೇಶ್.ಪಿ.ಇ, ತಿಪ್ಪಣ್ಣ, ಅನಿಲ್ ಮತ್ತಿತರರು ಹಾಜರಿದ್ದರು.

೧೧ ದೇವನಹಳ್ಳಿ ಚಿತ್ರಸುದ್ದಿ: ೦೩ ದೇವನಹಳ್ಳಿ ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್ 24 ರಿಂದ ಮದಗದಕೆರೆ ತೂಬು ತೆರವು: ಶಾಸಕ ಆನಂದ್
ಎಸ್ಟಿಗೆ 7% ಮೀಸಲಾತಿ ನೀಡಲು ಆಗ್ರಹ