ಮಹಿಳೆಯರು ಆರ್ಥಿಕ ಸಬಲರಾಗಬೇಕು: ಮಹೇಶ್ ಪೈ

KannadaprabhaNewsNetwork |  
Published : Mar 12, 2026, 12:30 AM IST
ಸೂಲಿಬೆಲೆ ಹೋಬಳಿ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಕೇಂದ್ರದಲ್ಲಿ ವಸ್ತç ಚಿತ್ರ ಕಲಾ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನೆಯ ಮಹಾಪ್ರಬಂಧಕ ಮಹೇಶ್ ಪೈ ಉದ್ಘಾಟಿಸಿದರು, ನಿರ್ದೇಶಕರಾಧ ಅಂಬರೀಶ್, ಮುನಿಕೃಷ್ಣ, ಮದುಪ್ರಿಯ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ತರಬೇತಿ ಪಡೆದು ಸ್ವ ಉದ್ದಿಮೆಗಳಲ್ಲಿ ತೊಡಗಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಹಾಪ್ರಬಂಧಕ ಮಹೇಶ್ ಪೈ ಹೇಳಿದರು

ಸೂಲಿಬೆಲೆ: ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ತರಬೇತಿ ಪಡೆದು ಸ್ವ ಉದ್ದಿಮೆಗಳಲ್ಲಿ ತೊಡಗಿಕೊಂಡು ಆರ್ಥಿಕ ಸಬಲರಾಗಬೇಕು ಎಂದು ಕೆನರಾ ಬ್ಯಾಂಕ್ ವೃತ್ತ ಕಚೇರಿ ಮಹಾಪ್ರಬಂಧಕ ಮಹೇಶ್ ಪೈ ಹೇಳಿದರು.

ಹೋಬಳಿಯ ಸೊಣ್ಣಹಳ್ಳಿಪುರ ಕೆನರಾ ಬ್ಯಾಂಕ್ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಸ್ತ್ರ ಚಿತ್ರ ಕಲಾ ಉದ್ಯಮಿ ತರಬೇತಿ ಶಿಬಿರದ ಉದ್ಘಾಟನೆ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿದ್ಯ ನೀಡುತ್ತಿದೆ. ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದು ಸ್ವಂತ ಉದ್ಯಮ ಪ್ರಾರಂಭಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ಅಂಬರೀಷ್ ಮಾತನಾಡಿ, ಸಂಸ್ಥೆಯಲ್ಲಿ ನೀಡಲಾಗುವ ವಿವಿಧ ತರಬೇತಿಗಳನ್ನು ಪಡೆದ ಫಲಾನುಭವಿಗಳು ಸ್ವಂತ ಉದ್ಯಮ ಪ್ರಾರಂಭಿಸಿ ಇತರರಿಗೆ ಮಾದರಿಯಾಗಬೇಕು. ಸಂಸ್ಥೆಯ ರಾಯಭಾರಿಗಳಾಗಿ ಮತ್ತಷ್ಟು ಮಹಿಳೆಯರಿಗೆ ತರಬೇತಿ ಮಾಹಿತಿ ನೀಡಬೇಕು ಎಂದರು. ಇದೇ ಸಂದರ್ಭದಲ್ಲಿ ಸಾಧಕ ಮಹಿಳೆಯರನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಉಪನ್ಯಾಸಕರಾದ ಮುನಿಕೃಷ್ಣ, ಮಧುಪ್ರಿಯ, ಸಿಂದುಜ, ಸುಗುಣ, ಕವನ, ನಾಗೇಶ್‌ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾರ್ಚ್ 24 ರಿಂದ ಮದಗದಕೆರೆ ತೂಬು ತೆರವು: ಶಾಸಕ ಆನಂದ್
ಎಸ್ಟಿಗೆ 7% ಮೀಸಲಾತಿ ನೀಡಲು ಆಗ್ರಹ