ರಾಜ್ಯದಲ್ಲಿ ಮಳೆ ಅಭಾವದಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಸರ್ಕಾರ ರಾಜ್ಯಕ್ಕೆ ಬರ ಅಧ್ಯಯನ ತಂಡ ಕಳುಹಿಸಲು, ಬರ ಪರಿಹಾರ ಬಿಡುಗಡೆ ಮಾಡಲು ವಿಳಂಬ ಮತ್ತು ಮಲತಾಯಿ ಧೋರಣೆ ಅನುಸರಿಸುತ್ತಿದೆ ಖಂಡಿಸಿ ನಗರ ಕಾಂಗ್ರೆಸ್ ಸಮಿತಿಯವರು ಸಿದ್ಧಾರ್ಥನಗರದಲ್ಲಿರುವ ಭಗವಾನ್ ಬುದ್ಧ ವೃತ್ತದಲ್ಲಿ ಬುಧವಾರ ಪ್ರತಿಭಟಿಸಿದರು.ರಾಜ್ಯದಲ್ಲಿ ಮಳೆ ಅಭಾವದಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆ ನಷ್ಟದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಆದರೆ, ಪರಿಸ್ಥಿತಿ ಪರಿಶೀಲಿಸಲು ಬರ ಅಧ್ಯಯನ ತಂಡ ಕಳುಹಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಜೊತೆಗೆ ಬರ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ತಳೆದಿದೆ ಎಂದು ಅವರು ದೂರಿದರು.ಮುಖಂಡರಾದ ಎಸ್.ಎ. ರಹೀಮ್, ಸಯ್ಯದ್ ಫಾರೂಖ್, ನಂಜುಂಡಸ್ವಾಮಿ, ಪ್ರಕಾಶ್, ರಾಜೇಶ್, ಸುನಿಲ್ ನಾರಾಯಣ, ರದಿಉಲ್ಲಾ ಖಾನ್, ಜಾಫರ್, ಸಿದ್ದಿಕ್, ಬಾಬು, ಮೋಹನ ಕುಮಾರ್, ಸಾದಿಕ್, ರವಿ, ಧನಪಾಲ್, ಜಬೀವುಲ್ಲಾ ರವಿನಾಯಕ್ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.