ಕನ್ನಡಪ್ರಭ ವಾರ್ತೆ ಬೀಳಗಿಇಲ್ಲಿನ ಬೀಳಗಿ ಕ್ರಾಸ್‌ ಬಳಿ ರಿಲಯನ್ಸ್‌ ಪೆಟ್ರೋಲ್‌ ಪಂಪ್‌ ಪಕ್ಕದ ರಾಷ್ಟ್ರೀಯ ಹೆದ್ದಾರಿ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ ಘಟನೆ ಬುಧವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಬೀಳಗಿ

ಇಲ್ಲಿನ ಬೀಳಗಿ ಕ್ರಾಸ್‌ ಬಳಿ ರಿಲಯನ್ಸ್‌ ಪೆಟ್ರೋಲ್‌ ಪಂಪ್‌ ಪಕ್ಕದ ರಾಷ್ಟ್ರೀಯ ಹೆದ್ದಾರಿ ಮೇಲೆ ಖಾಸಗಿ ಬಸ್ ಪಲ್ಟಿಯಾಗಿ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಹರಿದು ವ್ಯಕ್ತಿ ಸ್ಥಳದಲ್ಲೇ ಮೃತ ಘಟನೆ ಬುಧವಾರ ಬೆಳಗ್ಗೆ 8ಗಂಟೆ ಸುಮಾರಿಗೆ ಸಂಭವಿಸಿದೆ.

ಅಪಘಾತದಲ್ಲಿ ಜಮಖಂಡಿ ತಾಲೂಕಿನ ಕುಂಚನೂರ ಗ್ರಾಮದ ಅಮಸಿದ್ದ ಕಾಂಬಳೆ (34) ಮೃತ ವ್ಯಕ್ತಿ. ಮಳೆಯಿಂದ ಆಶ್ರಯ ಪಡೆಯಲು ಅಮಸಿದ್ದ ರಸ್ತೆ ಪಕ್ಕದಲ್ಲಿ ತನ್ನ ಬೈಕ್‌ ನೊಂದಿಗೆ ನಿಂತಿದ್ದ. ಬಸ್‌ ಹೈದ್ರಾಬಾದನಿಂದ ಗೋವಾ ಕಡೆಗೆ ಹೊರಟಿತ್ತು. ವಾಹನ ಚಾಲಕನ ಅತಿಯಾದ ವೇಗವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆ ಬಳಿಕ ವಾಹನ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ವಾಹನದಲ್ಲಿದ್ದ ಪ್ರಯಾಣಿಕರಿಗೆ ಅದೃಷ್ಟವಶಾತ ಸಣ್ಣಪುಟ್ಟ ಗಾಯಗಾಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಡಿವೈಎಸ್ಪಿ ಗಜಾನನ ಸುತಾರ, ಸಿಪಿಐ ಹನಮಂತ ಸನಮನಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ರಸ್ತೆಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.