ನಗರಸಭೆ ಭ್ರಷ್ಟಾಚಾರದ ಕರಪತ್ರ: ಬಜೆಟ್‌ ಸಭೆಯಲ್ಲಿ ಗದ್ದಲ

KannadaprabhaNewsNetwork |  
Published : Feb 02, 2025, 01:00 AM IST
ಪೋಟೋ೩೧ಸಿಎಲ್‌ಕೆ೪ ಕರಪತ್ರದ ಚಿತ್ರ. | Kannada Prabha

ಸಾರಾಂಶ

ನಗರಸಭೆಯ ಹಲವಾರು ಸದಸ್ಯರು ಬಜೆಟ್ ಅಧಿವೇಶನದಲ್ಲಿ ಖಾರವಾಗಿ ಸದಸ್ಯರಾದ ಜಯಲಕ್ಷ್ಮಿ, ಸಿ.ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ವಿರೂಪಾಕ್ಷಿ, ಎಸ್.ಜಯಣ್ಣ, ವೆಂಕಟೇಶ್ ಮುಂತಾದವರು ಪ್ರಶ್ನಿಸಿದರಲ್ಲದೆ, ನಗರಸಭೆಗೆ ಕೋಟ್ಯಂತರ ರುಪಾಯಿ ಆದಾಯವನ್ನು ನಷ್ಟಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ತುರ್ತು ಸಭೆ ಕರೆದು ನಿರ್ಣಯಕೈಗೊಳ್ಳಲು ತೀರ್ಮಾನ । ಕ್ರಮಕ್ಕೆ ಒತ್ತಾಯ

ಚಳ್ಳಕೆರೆ: ಕಳೆದ ಹಲವಾರು ವರ್ಷಗಳಿಂದ ನಗರಸಭೆ ವ್ಯಾಪ್ತಿಯಲ್ಲಿ ಮಳಿಗೆ ಮಾಲೀಕರು ಬಾಡಿಗೆ ಪಾವತಿಸದೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಜಿ.ಟಿ.ಗೋವಿಂದರಾಜು ನಗರಸಭೆಯ ಗೋಲ್‌ಮಾಲ್ ಅವ್ಯವಹಾರದ ಬಗ್ಗೆ ಕರಪತ್ರಗಳನ್ನು ಪತ್ರಿಕೆಗಳ ಮೂಲಕ ವಿತರಣೆ ಮಾಡಿದ್ದನ್ನು ನಗರಸಭೆಯ ಹಲವಾರು ಸದಸ್ಯರು ಬಜೆಟ್ ಅಧಿವೇಶನದಲ್ಲಿ ಖಾರವಾಗಿ ಸದಸ್ಯರಾದ ಜಯಲಕ್ಷ್ಮಿ, ಸಿ.ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ವಿರೂಪಾಕ್ಷಿ, ಎಸ್.ಜಯಣ್ಣ, ವೆಂಕಟೇಶ್ ಮುಂತಾದವರು ಪ್ರಶ್ನಿಸಿದರಲ್ಲದೆ, ನಗರಸಭೆಗೆ ಕೋಟ್ಯಂತರ ರುಪಾಯಿ ಆದಾಯವನ್ನು ನಷ್ಟಮಾಡಿದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇಂದಿರಾ ಶಾಂಪಿಂಗ್ ಕಾಂಪ್ಲೆಕ್ಸ್ಮ ಮೊದಲ ಮಹಡಿ-೨೩, ಹಳೇಪುರಸಭೆ ಕಟ್ಟಡದ ಹೊಯ್ಸಳ ಬ್ಯಾಂಕ್ ಕಟ್ಟಡದಲ್ಲಿ ಎರಡು ಮಳಿಗೆ ಬಾಡಿಗೆ ಇಲ್ಲದೆ ನಡೆಸಲಾಗುತ್ತಿದೆ. ಮಹಾಲಕ್ಷ್ಮಿ ಚಿತ್ರಮಂದಿರದ ಮುಂಭಾಗದ ರಾಘವೇಂದ್ರ ಎಲೆಕ್ಟ್ರಾನಿಕ್ಸ್, ಇತರೆ ಮಳಿಗೆಯವರೂ ಸಹ ಕಾನೂನು ಬಾಹಿರವಾಗಿ ವ್ಯವಹಾರ ನಡೆಸುತ್ತಿದ್ಧಾರೆ. ಈ ಬಗ್ಗೆ ನಗರಸಭೆ ಆಡಳಿತ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಲೋಕಾಯುಕ್ತಕ್ಕೂ ಸಹ ದೂರು ನೀಡಲಾಗಿದ್ದು, ನಗರಸಭೆ ಆಡಳಿತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸದಸ್ಯ ಗೋವಿಂದರಾಜು ಒತ್ತಾಯಿಸಿದ್ದಾರೆ.

ವಿಷಯ ಸಭೆಯಲ್ಲಿ ಪ್ರಸ್ತಾಪವಾದ ಕೂಡಲೇ ಮತ್ತೊಮ್ಮೆ ತುರ್ತು ಸಭೆ ಕರೆದು ದಾಖಲಾತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ಧರಿಸಲಾಯಿತು. ಶೀಘ್ರದಲ್ಲೇ ಇಂದಿರಾ ಶಾಪಿಂಗ್ ಕಾಂಪ್ಲೆಕ್ಸ್ ಮಳಿಗೆಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ನಗರಸಭೆ ಆಡಳಿತ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!