ಕೋಲಾರದಲ್ಲಿ ನಗರ ಸಾರಿಗೆ ಬಸ್‌ ಸಂಚಾರ

KannadaprabhaNewsNetwork |  
Published : Jun 29, 2025, 01:32 AM IST
೨೮ಕೆಎಲ್‌ಆರ್-೭ಕೋಲಾರದ ಡಿಸಿ ಕಛೇರಿಯಲ್ಲಿ ಕೋಲಾರ ನಗರದಲ್ಲಿ ಸಾರಿಗೆ ಸೇವೆ ಪ್ರಾರಂಭ ಕುರಿತು ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿದರು. | Kannada Prabha

ಸಾರಾಂಶ

ಕೋಲಾರ ನಗರವು ದಿನೇ ದಿನೇ ಬೆಳೆಯುತ್ತಿದ್ದು, ನಗರದಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಗ ನಾಲ್ಕು ಬಸ್‌ಗಳ ಮೂಲಕ ಎರಡು ರೂಟ್‌ಗಳನ್ನು ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಕೋಲಾರ ನಗರವು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ. ಆದ್ದರಿಂದ ನಗರ ಸಾರಿಗೆ ವಿಭಾಗಕ್ಕೆ ಪ್ರತ್ಯೇಕ ಡಿಪೋ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ಇದೇ ೩೦ ರಂದು ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೋಲಾರ ವಿಭಾಗದಿಂದ ಎರಡು ಮಾರ್ಗಗಳಲ್ಲಿ ನಾಲ್ಕು ಬಸ್ಸುಗಳ ಸಂಚಾರ ಒಳಗೊಂಡಂತೆ ನಗರ ಸಾರಿಗೆಯನ್ನು ಆರಂಭಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋಲಾರ ನಗರದಲ್ಲಿ ಸಾರಿಗೆ ಸೇವೆ ಪ್ರಾರಂಭ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರ ಸಾರಿಗೆ ಬಸ್‌ ಸಂಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ಚಾಲನೆ ನೀಡಲಿದ್ದಾರೆ ಎಂದು

ನಗರ ಸಾರಿಗೆಗೆ ಬೇರೆ ಡಿಪೋ

ಕೋಲಾರ ನಗರವು ದಿನೇ ದಿನೇ ಬೆಳೆಯುತ್ತಿದ್ದು, ನಗರದಲ್ಲಿ ಸಂಚರಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈಗ ನಾಲ್ಕು ಬಸ್‌ಗಳ ಮೂಲಕ ಎರಡು ರೂಟ್‌ಗಳನ್ನು ನಿರ್ವಹಿಸಲಾಗುವುದು. ಮುಂದಿನ ದಿನಗಳಲ್ಲಿ ಕೋಲಾರ ನಗರವು ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿದೆ. ಆದ್ದರಿಂದ ನಗರ ಸಾರಿಗೆ ವಿಭಾಗವನ್ನು ಪ್ರತ್ಯೇಕಿಸಿ ನಗರ ಸಾರಿಗೆಗೆ ಬೇರೆ ಡಿಪೋ ಮಾಡಿಕೊಳ್ಳಲು ಸರ್ಕಾರದ ಸ್ಥಳವನ್ನು ಗುರುತಿಸಲಾಗುವುದು ಎಂದು ತಿಳಿಸಿದರು.

ಸಂಗೊಂಡಹಳ್ಳಿಯಿಂದ ಹಸಾಳ ಮತ್ತು ವಡಗೂರುಯಿಂದ ಅಮ್ಮೆರಹಳ್ಳಿ ಮಾರ್ಗಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಏಳು ಗಂಟೆಯಿಂದ ರಾತ್ರಿ ಏಳು ಗಂಟೆ ವರೆಗೆ ಒಟ್ಟು ನಾಲ್ಕು ಬಸ್ಸುಗಳು ಸಂಚರಿಸಲಿವೆ. ಈಗಾಗಲೇ ಪ್ರತಿನಿತ್ಯ ಒಂದು ಬಸ್ಸು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿನಿತ್ಯ ೩೦೦ ಮಂದಿ ಪ್ರಯಾಣಿಸುತ್ತಿದ್ದರು. ಈ ಮಾರ್ಗದಲ್ಲಿ ಒಟ್ಟು ಇಪ್ಪತ್ತು ನಿಲ್ದಾಣಗಳು ಒಳಗೊಳ್ಳಲಿವೆ ಎಂದು ತಿಳಿಸಿದರು.ನಿಲ್ದಾಣಗಳಿಗೆ ನಾಮಫಲಕ

ನೂತನವಾಗಿ ನಗರ ಸಾರಿಗೆಯನ್ನು ಪ್ರಾರಂಭ ಮಾಡಲಾಗುತ್ತಿದ್ದು, ಇದೇ ಮಾರ್ಗದಲ್ಲಿ ಮೊದಲು ನಿರ್ಮಾಣವಾಗಿರುವಂತಹ ಬಸ್ ನಿಲ್ದಾಣಗಳನ್ನು ಸಂಘ ಸಂಸ್ಥೆ, ರೋಟರಿ ಕ್ಲಬ್‌ಗಳ ಸಹಕಾರದಿಂದ ಅಭಿವೃದ್ಧಿ ಪಡಿಸಿ ನಾಮಫಲಕಗಳನ್ನು ಅಳವಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಎಡಿಸಿ ಮಂಗಳ, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಾಥ್, ನಗರಸಭೆ ಆಯುಕ್ತ ನವೀನ್ ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ್ ರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು