ರಾಮನಗರ: ದೈನಂದಿನ ಕರ್ತವ್ಯದ ಒತ್ತಡದಲ್ಲಿರುವ ಪೌರಕಾರ್ಮಿಕರು ಕ್ರೀಡಾ ಚಟುವಟಿಕೆಗಳಿಗೆ ಒತ್ತು ನೀಡಿದಾಗ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಬಿಡದಿ ಪುರಸಭೆ ಅಧ್ಯಕ್ಷ ಹರಿಪ್ರಸಾದ್ ಹೇಳಿದರು.
ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ರೋಗಗಳು ಬರುವುದಕ್ಕಿಂತ ಮೊದಲೇ ಮುಂಜಾಗ್ರತೆ ಅಗತ್ಯ. ಕಸ ವಿಲೇವಾರಿ ಮಾಡುವುದು, ಚರಂಡಿ ಶುಚಿತ್ವ, ರಸ್ತೆ ಬದಿಯ ಮಣ್ಣು ಹೊರಹಾಕುವುದು, ಕಾರ್ಮಿಕರ ಕರ್ತವ್ಯವಾದರೂ ಧೂಳು ದುರ್ವಾಸನೆಯಲ್ಲೇ ಹೆಚ್ಚು ಸಮಯ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಆದ್ದರಿಂದ ಧರಿಸುವ ಸಮವಸ್ತ್ರ, ಕೈಗವಸು ಶುಚಿತ್ವ ಮಾಡುವಾಗ ಬಿಸಿನೀರಿನಲ್ಲಿ ಒಂದು ಬಾರಿ ಹಾಕಿ ಬಿಸಲಿನಲ್ಲಿ ಒಣಗಿಸಬೇಕು. ಇದು ಅನೇಕ ರೋಗಾಣುಗಳ ಕಡಿವಾಣಕ್ಕೆ ಸಹಕಾರಿಯಾಗಲಿದೆ. ಕುಡಿಯುವ ನೀರು, ಪೌಷ್ಟಿಕ ಆಹಾರಕ್ಕೆ ಒತ್ತು ನೀಡಬೇಕು ಎಂದು ಹರಿಪ್ರಸಾದ್ ಹೇಳಿದರು.
ವಿಪಕ್ಷ ನಾಯಕ ಸಿ.ಉಮೇಶ್ ಮಾತನಾಡಿ, ಪೌರಾಡಳಿತ ಇಲಾಖೆ ಪೌರಕಾರ್ಮಿಕರಿಗೆ ಆರೋಗ್ಯ ರಕ್ಷಣೆಗಾಗಿ ಅನೇಕ ಸವಲತ್ತು ನೀಡುತ್ತಿದೆ. ಸದುಪಯೋಗ ಪಡೆದುಕೊಳ್ಳಬೇಕು. ಸವಲತ್ತು ಕಾಡಿ ಬೇಡಿ ಪಡೆಯುವುದಲ್ಲ. ಕೇಳಿ ಪಡೆಯುವ ಹಕ್ಕು ನಿಮಗಿದೆ. ನಿಮಗಾಗಿ ನಡೆಸುತ್ತಿರುವ ಮನರಂಜನೆಯ ಸ್ಪರ್ಧೆ ಮತ್ತು ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತು ಮಾಡಿ ಎಂದು ಸಲಹೆ ನೀಡಿದರು.ನಿತ್ಯವೂ ಪಟ್ಟಣದ ಎಲ್ಲವಾರ್ಡ್‌ಗಳ ಸ್ವಚ್ಛತೆ ಜತೆಗೆ ಸಾರ್ವಜನಿಕರ ಆರೋಗ್ಯಕ್ಕಾಗಿ ನಿರಂತರ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಶ್ಲಾಘನೀಯ. ಸರ್ಕಾರ ಕೊಡುವ ಎಲ್ಲಸಹಾಯ ಸೌಲಭ್ಯಗಳನ್ನು ತಲುಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿಪಟ್ಟಣದ ಸರ್ವಾಂಗೀಣ ಕೆಲಸ-ಕಾರ‍್ಯಗಳನ್ನು ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಮಾಡಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯ ದೇವರಾಜು ಮಾತನಾಡಿ, ನಮ್ಮ ದೇಹವನ್ನು ನಾವು ಹೇಗೆ ಸ್ವಚ್ಛವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛತಾ ಕೆಲಸ ಕೇವಲ ಪೌರಕಾರ್ಮಿಕರಿಗೆ ಮಾತ್ರ ಸೀಮಿತವಾಗಿರುವುದಿಲ್ಲಇದಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ ಮಾತನಾಡಿ, ಪೌರ ಕಾರ್ಮಿಕರ ಸೇವೆ ಅನನ್ಯವಾದದ್ದು, ಅವೇರ ನಿಜವಾದ ಕಾಯಕ ಯೋಗಿಗಳು. ಪೌರಕಾರ್ಮಿಕರು ಕಾರ್ಯ ಒತ್ತಡಗಳಿಂದ ತಮ್ಮ ಆರೋಗ್ಯವನ್ನು ಕಡೆಗಣಿಸಬಾರದು. ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಶ್ರೀನಿವಾಸ್ , ಹಿರಿಯ ಆರೋಗ್ಯ ನಿರೀಕ್ಷಕರಾದ ರೂಪಾ, ಕಿರಿಯ ಆರೋಗ್ಯ ನಿರೀಕ್ಷಕರಾದ ಶಶಾಂಕ್, ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಛಲಪತಿ ಸೇರಿದಂತೆ ಪುರಸಭೆ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಹಾಜರಿದ್ದರು.ಬಾಕ್ಸ್ ................
ವಿವಿಧ ಸ್ಪರ್ಧೆಗಳುಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪೌರಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಮನರಂಜನಾ ವಿವಿಧ ಸ್ಫರ್ಧೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಭಾಗಿಯಾಗಿ ಕ್ರೀಡಾ ಸ್ಫೂರ್ತಿ ಹೆಚ್ಚಿಸಿದರು.
ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಶನಿವಾರ ಪೌರಕಾರ್ಮಿಕರಿಗಾಗಿ ಮ್ಯುಸಿಕಲ್ ಚೇರ್, ರನ್ನಿಂಗ್‌ರೇಸ್, ಬಕೆಟ್ ಇನ್ ದ ಬಾಲ್, ಲೆಮೆನ್ ಇನ್ ದ ಸ್ಪೂನ್, ಜಾವಲಿನ್ ಥ್ರೋ ಸ್ಪರ್ಧೆಗಳು ನಡೆದವು. ಬಿಸ್ಕೇಟ್ ಇನ್ ದ ಮೌತ್, ಹಗ್ಗ ಜಗ್ಗಾಟ, ಷಾಟ್ ಫುಟ್ ಸ್ಪರ್ಧೆಗಳು ನಡೆದವು.(ಎರಡೂ ಫೋಟೋ ಬಳಸಿ)
4ಕೆಆರ್ ಎಂಎನ್ 2,3.ಜೆಪಿಜಿ2.ಬಿಡದಿ ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ನಡೆದ ಕ್ರೀಡಾಕೂಟದಲ್ಲಿ ಭಾಗಿಯಾಗಿರುವ ಪೌರಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಗಳಿಗೆ ಮುಖ್ಯಾಧಿಕಾರಿ ಮೀನಾಕ್ಷಿ ಶುಭ ಹಾರೈಸಿದರು.
3.ಬಿಡದಿ ಪಟ್ಟಣದ ಶ್ರೀ ಬಸವೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ಪೌರಕಾರ್ಮಿಕರು ಮತ್ತು ಪುರಸಭೆ ಸಿಬ್ಬಂದಿಗಳ ಕ್ರೀಡಾಕೂಟದಲ್ಲಿ ಸದಸ್ಯರು ಭಾಗಿಯಾಗಿರುವುದು.