ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ಪೌರಕಾರ್ಮಿಕ ಮಂಜುನಾಥ ರಾಯಣ್ಣವರ, ರವಿ ಬನಸೋಡೆ ಮತ್ತು ದಯಾನಂದ ಮಾಂಗ ಮಾತನಾಡಿ, ರಾಜ್ಯ ಸರ್ಕಾರ ಪೌರಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಹಾಗೂ ಕಸ ಸಂಗ್ರಹ ವಾಹನ ಚಾಲಕರನ್ನು ಕಾಯಂಗೊಳಿಸುವ ಮೂಲಕ ಸರ್ಕಾರವೇ ನೇರ ವೇತನ ಪಾವತಿಸಬೇಕು. ಇಲ್ಲವಾದರೆ ರಾಜ್ಯವ್ಯಾಪಿ ಧರಣಿ ಆರಂಭವಾಗಲಿದೆ ಎಂದು ಹೇಳಿದರು. ಪ್ರತಾಪ ಕೊಡುಗೆ, ರವಿ ರೋಡಕರ, ಘಟಿಗೆಪ್ಪ ಕುಂಬಾರ, ರಘು ಗೋಠಡಕಿ, ಶಂಭು ಮಾಸ್ತಿ, ಅಶೋಕ ನಡುವಿನಕೇರಿ, ಮಶ್ಚೇಂದ್ರ ಗೋಠಡಕಿ, ಭರತೇಶ ಗುಡಕ್ಕನವರ, ಸುನೀಲ ಬಾಂವಿ, ಸಿದ್ದು ಮಾಂಗ, ಅಶೋಕ ಆಲಕನೂರ, ಭಾರತಿ ಮಾಸ್ತಿ, ಶೋಭಾ ಮಾಂಗ, ಗೌರವ್ವ ಮಾಸ್ತಿ, ಶೋಭಾ ಮಾಸ್ತಿ, ರೇಣುಕಾ ಸಿಂಗೆ, ಸಪ್ನಾ ಮಾಸ್ತಿ, ಕಾಂತವ್ವ ಬಿದರಿ ಸೇರಿದಂತೆ ಪೌರಕಾರ್ಮಿಕರು, ನೀರು ಸರಬರಾಜು ಕಾರ್ಮಿಕರು, ವಾಹನ ಚಾಲಕರು ಹಾಗೂ ವಿದ್ಯುತ್ ಸರಬರಾಜು ಕಾರ್ಮಿಕರು ಇದ್ದರು.