ಮುಂದುವರಿದ ಪೌರಕಾರ್ಮಿಕರ ಮುಷ್ಕರ

KannadaprabhaNewsNetwork |  
Published : Jun 03, 2025, 12:48 AM IST
2ಕೆಜಿಎಫ್‌1 | Kannada Prabha

ಸಾರಾಂಶ

ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪೌರನೌಕರರ ಪಾತ್ರ ಅಪಾರವಾಗಿದೆ, ಪೌರನೌಕರರು ಹಾಗೂ ಪೌರಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದಾರೆ, ಅದರೂ ಸರ್ಕಾರ ಇವರಿಗೆ ಸ್ಪಂದನೆ ಮಾಡದಿರುವುದು ಅತ್ಯಂತ ದುರದೃಷ್ಟಕರ.

ಕನ್ನಡಪ್ರಭ ವಾರ್ತೆ ಕೆಜಿಎಫ್ ಕೆಜಿಎಫ್ ನಗರಸಭೆ ಕಚೇರಿಯ ಮುಂಬಾಗ ಕಳೆದ ನಾಲ್ಕು ದಿನಗಳಿಂದ ಪೌರ ನೌಕರರು ಮತ್ತು ಪೌರ ಕಾರ್ಮಿಕರು ಅನಿರ್ದಿಷ್ಟಾವಧಿ ಧರಣಿ ಮುದುವರಿಸಿದ್ದು, ತಮ್ಮ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಘೋಷೋಣೆಗಳನ್ನು ಕೂಗಿದರು.ಪೌರನೌಕರರ ಹೋರಾಟಕ್ಕೆ ಹಲವಾರು ನಗರಸಭಾ ಸದಸ್ಯರು ಬೆಂಬಲ ನೀಡಿ ಸರಕಾರದ ಪೌರನೌಕರರು ಹಾಗೂ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರ ತಕ್ಷಣ ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.ಸರ್ಕಾರ ಸ್ಪಂದಿಸುತ್ತಿಲ್ಲ

ಈ ಸಂದರ್ಭದಲ್ಲಿ ಪೌರನೌಕರರ ಸಂಘದ ಅಧ್ಯಕ್ಷರಾದ ರಾಮು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಪೌರನೌಕರರ ಪಾತ್ರ ಅಪಾರವಾಗಿದೆ, ಪೌರನೌಕರರು ಹಾಗೂ ಪೌರಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾಂಕೇತಿಕ ಪ್ರತಿಭಟನೆಯನ್ನು ನಡೆಸಿದ್ದಾರೆ, ಅದರೂ ಸರ್ಕಾರ ಇವರಿಗೆ ಸ್ಪಂದನೆ ಮಾಡದಿರುವುದು ಅತ್ಯಂತ ದುರದೃಷ್ಟಕರ ಎಂದರು. ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಪೌರ ನೌಕರರಾದ ಜಯರಾಂ ಮಾತನಾಡಿ, ಸರ್ಕಾರ ಎಲ್ಲ ರೀತಿಯ ನೌಕರರಿಗೆ ನೀಡುವ ಸೌಲಭ್ಯಗಳನ್ನು ಪೌರಕಾರ್ಮಿರಿಗೂ ನೀಡಬೇಕು, ದಿನಗೂಲಿ ನೌಕರರನ್ನು ಸಕ್ರಂಮಗೊಳಿಸಬೇಕು, ೨೦೨೨ ರ ವಿಶೇಷ ನೇಮಕಾತಿ ಅಡಿಯಲ್ಲಿ ಅಯ್ಕೆಯಾದ ಪೌರಕಾರ್ಮಿಕರು ಹಾಗೂ ಲೋಡರ್ಸ್ಗಳಿಗೆ ಎಸ್‌ಎಫ್‌ಸಿ ವೇತನ ನಿಧಿಯಿಂದ ವೇತನ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪೌರನೌಕರರ ಸಂಘದ ಅಧ್ಯಕ್ಷರಾದ ಸಿ.ರಾಮು, ಉಪಾಧ್ಯಕ್ಷರಾದ ಡಿ.ರಾಜಾ, ಖಾಜಂಚಿ ಜಯರಾಮ್, ಪ್ರಧಾನ ಕರ‍್ಯದರ್ಶೀ ಬಿ.ಎನ್.ವೆಂಕಟೇಶ್, ವಿ.ಮೂರ್ತಿ, ಗಿರಿಬಾಬು ತಂಗರಾಜು, ಕೆ.ವಾಸು, ಕಾನೂನು ಸಲಹೆಗಾರ ಶಶಿಕುಮಾರ್, ರಾಮಚಂದ್ರ, ದೇವಂದ್ರನ್ ಓಬಲಯ್ಯ, ಮಾಲಾ, ರಘುನಾಥ್, ಅರುಣ್, ನರಸಿಂಹ, ನರೇಂದ್ರ ಸ್ಟಾಲೀನ್ ಬಾಗವಹಿಸಿದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ